»   » ಮೂವರು ನಾಯಕಿಯರ ಮುದ್ದಿನ ಹುಡುಗ ವಿನಯ್

ಮೂವರು ನಾಯಕಿಯರ ಮುದ್ದಿನ ಹುಡುಗ ವಿನಯ್

Posted By:
Subscribe to Filmibeat Kannada

ನಟ ವಿನಯ್ ರಾಜ್ ಕುಮಾರ್ ತಮ್ಮ ಮೂರನೇ ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. 'ರನ್ ಆಂಟನಿ' ಚಿತ್ರದ ನಂತರ ವಿನಯ್ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಮೂಲಗಳ ಪ್ರಕಾರ ವಿನಯ್ ರಾಜ್ ಕುಮಾರ್ ಅಭಿನಯಿಸಲಿರುವ ಮೂರನೇ ಚಿತ್ರಕ್ಕೆ ನವ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳಿದ್ದಾರಂತೆ.

ಕಥೆ ಕೇಳಿ ಗ್ರೀನ್ ಸಿಗ್ನಲ್ ಕೊಟ್ಟಿರುವ ರಾಜ್ ಕುಟುಂಬ ಈ ಬಾರಿ ವಿನಯ್ ಗೆ ಡೈರೆಕ್ಷನ್ ಮಾಡುವ ಅವಕಾಶವನ್ನ ಸುನೀಲ್ ತಾಳ್ಯ ಅವರಿಗೆ ನೀಡಲಾಗಿದೆ. ಇದು ಇವರಿಗೆ ಚೊಚ್ಚಲ ಸಿನಿಮಾ. ಆಷಾಡಕ್ಕೆ ಮುಂಚೆ ಸಣ್ಣದಾಗಿ ಪೂಜೆ ಮಾಡಿದ್ದ ಚಿತ್ರತಂಡ, ಪ್ರಿ-ಪ್ರೊಡಕ್ಷನ್ ಕೆಲಸಗಳನ್ನ ಆರಂಭಿಸಿದೆಯಂತೆ.

Three Heroines For Vinay Rajkumar's Next

ಇನ್ನು ಈ ಚಿತ್ರದ ಪ್ರಮುಖ ಆಕರ್ಷಣೆ ಅಂದ್ರೆ, ವಿನಯ್ ರಾಜ್ ಕುಮಾರ್ ಗೆ ಈ ಚಿತ್ರದಲ್ಲಿ ಮೂವರು ನಾಯಕಿಯರಂತೆ. ವಿನಯ್ ಜೊತೆ ಜೋಡಿಯಾಗಿ ಕಾಣಿಸಿಕೊಳ್ಳಲಿರುವ ಆ ನಾಯಕಿಯರಿಗಾಗಿ ಹುಡುಕಾಟ ಶುರುವಾಗಿದ್ದು, ಆದಷ್ಟೂ ಬೇಗ ಯಾರು ಎಂಬುದನ್ನ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ವಿನಯ್ ಅವರ ಫೋಟೋಶೂಟ್ ಕೂಡ ಮುಗಿಸಿದ್ದು, ಆಷಾಡದ ನಂತರ ಶೂಟಿಂಗ್ ಶುರು ಮಾಡುವ ಯೋಚನೆ ಮಾಡಲಾಗಿದೆ. ಇನ್ನುಳಿದಂತೆ ಈ ಚಿತ್ರದ ಜೊತೆ ಮತ್ತೊಂದು ಚಿತ್ರವನ್ನ ಮಾಡುವ ಮನಸ್ಸು ಮಾಡಿದ್ದಾರಂತೆ ವಿನಯ್. ಆದ್ರೆ, ಉತ್ತಮ ಕಥೆಗಾಗಿ ಕಾಯುತ್ತಿದ್ದಾರಂತೆ.

English summary
Vinay Rajkumar’s next film will be with Sunil Thalya. Another interesting thing about this project is that Vinay will be paired opposite three heroines.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada