»   » ಶೀರ್ಷಿಕೆ ವಿವಾದದಲ್ಲಿ ಭಟ್ರ 'ದನ ಕಾಯೋನು'

ಶೀರ್ಷಿಕೆ ವಿವಾದದಲ್ಲಿ ಭಟ್ರ 'ದನ ಕಾಯೋನು'

Posted By:
Subscribe to Filmibeat Kannada

ಯೋಗರಾಜ್ ಭಟ್ ಮತ್ತು ದುನಿಯಾ ವಿಜಯ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ದನ ಕಾಯೋನು' ಚಿತ್ರದ ಮುಹೂರ್ತ ನಿನ್ನೆಯಷ್ಟೇ ನೆರವೇರಿದೆ. ಇನ್ನಷ್ಟೇ ಶೂಟಿಂಗ್ ಶುರು ಮಾಡಬೇಕಿರುವ 'ದನ ಕಾಯೋನು' ಚಿತ್ರದ ಹಣೆಬರಹ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂಗಳದಲ್ಲಿದೆ.

ಟೈಟಲ್ ವಿವಾದದಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಚಿತ್ರ ಸಿಲುಕಿಕೊಂಡಿದೆ. ವರ್ಷದ ಹಿಂದೆಯೇ 'ದನ ಕಾಯೋನು' ಅನ್ನುವ ಟೈಟಲ್ ನ ಸಲೀ ಉಲ್ಲಾ ಖಾನ್ ಅನ್ನುವವರು ರಿಜಿಸ್ಟರ್ ಮಾಡಿಸಿದ್ದರು.

dana kayonu

ಅವರಿಂದ ಯಾವುದೇ ಪರ್ಮಿಷನ್ ಪಡೆಯದೇ, ಟೈಟಲ್ ಅನೌನ್ಸ್ ಮಾಡಿ ಮುಹೂರ್ತ ಕೂಡ ಮುಗಿಸಿದ್ದಾರೆ ಭಟ್ರು. ಮಾಧ್ಯಮಗಳ ಮುಖಾಂತರ ವಿಷಯ ತಿಳಿದು, ಸಲೀ ಉಲ್ಲಾ ಖಾನ್, ಫಿಲ್ಮ್ ಚೇಂಬರ್ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. [ದನ ಕಾಯೋನ್ಹಿಂದೆ ಹೊರಟ ನಟಿ ಪ್ರಿಯಾಮಣಿ]

dana kayonu

ಸಲೀ ಉಲ್ಲಾ ಖಾನ್ ನೀಡಿರುವ ದೂರಿನ ಆಧಾರದ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ ಇಂದು ಸಭೆ ನಡೆಸಿದರು. 'ದನ ಕಾಯೋನು' ಚಿತ್ರದ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ಸಭೆಯಲ್ಲಿ ಪಾಲ್ಗೊಂಡರು. ಆದರೆ ಒಮ್ಮತದ ನಿರ್ಧಾರಕ್ಕೆ ಬಾರದೆ ಇರುವ ಕಾರಣ, ಸಭೆಯನ್ನ ನಾಳೆಗೆ ಮುಂದೂಡಲಾಗಿದೆ. [ದನ ಕಾಯುವತ್ತ ನಟ ದುನಿಯಾ ವಿಜಯ್ ಚಿತ್ತ]

ಟೈಟಲ್ ಬಿಟ್ಟುಕೊಡುವುದಕ್ಕೆ ಸಲೀ ಉಲ್ಲಾ ಖಾನ್ ಒಪ್ಪದೇ ಇದ್ದರೆ, ದುನಿಯಾ ವಿಜಿ ದನ ಕಾಯುವ ಕೆಲಸ ಬಿಡಬೇಕಾಗಬಹುದು.

English summary
Kannada Actor Duniya Vijay starrer Yogaraj Bhat directorial new movie 'Dana Kayonu' is now under Title dispute. Sali-Ulla-Khan, who had registered the title has now given a complaint to KFCC.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada