For Quick Alerts
  ALLOW NOTIFICATIONS  
  For Daily Alerts

  ಶಾಲೆಗಳ ಪುನರಾರಂಭಕ್ಕೆ ನಿರ್ದೇಶಕ ಟಿಎನ್ ಸೀತಾರಂ ವಿರೋಧ

  |

  ಕೊರೊನಾ ಕಾರಣದಿಂದ ಕಳೆದ ಆರೇಳು ತಿಂಗಳಿನಿಂದ ಶಾಲಾ-ಕಾಲೇಜುಗಳು ಮುಚ್ಚಿವೆ. ಈಗ ಶಾಲೆಗಳನ್ನು ಪುನಾರರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿದೆ. ತಜ್ಞರು, ಪೋಷಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿರುವ ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿ ಶಾಲೆಗಳನ್ನು ತೆರೆಯಲು ಸಜ್ಜಾಗುತ್ತಿದೆ.

  Recommended Video

  ಅವರೆಲ್ಲಾ ಪುಟ್ಟ ಪುಟ್ಟ ಮಕ್ಕಳು ಸ್ವಲ್ಪ ಎಚ್ಚರಿಕೆ ಇರಲಿ ಅಂದ್ರು Sitaram | Filmibea tKannada

  ಕೊರೊನಾ ಭೀತಿ ಹೆಚ್ಚಿರುವ ಕಾರಣ ಶಾಲೆಗಳನ್ನು ಪುನರಾರಂಭಕ್ಕೆ ತೀವ್ರ ವಿರೋಧವೂ ಇದೆ. ಕನ್ನಡ ಚಲನಚಿತ್ರ ನಿರ್ದೇಶಕ ಟಿಎನ್ ಸೀತಾರಾಂ ಅವರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

  ಶಾಲೆಗಳ ಪುನರಾರಂಭ: ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಾರ್ಗಸೂಚಿ ಪ್ರಕಟ

  ''ಇಂಥಾ ಕೊರೊನಾ ಅಬ್ಬರದಲ್ಲಿ ಪುಟ್ಟ ಮಕ್ಕಳ ಶಾಲೆಗಳನ್ನು ಬೇರೆ ತೆರೆಯುತ್ತಾರಂತೆ. ಯಾವ ವಾದ ಏನೇ ಇರಲಿ ಒಂದೇ ಒಂದು ಪುಟ್ಟ ಮಗುವಿಗೆ ಏನಾದರೂ ಕೊರೊನಾ ಸಂಬಂಧಿತ ಅಪಾಯವಾದರೆ ಇಡಿಯ ರಾಜ್ಯದ ತಂದೆ ತಾಯಿಗಳು ಆತಂಕ, ಹಿಂಸೆ ಪಡಲು ಶುರು ಮಾಡುತ್ತಾರೆ. ಹೆಚ್ಚು ಆದರಂತೂ ರಾಜ್ಯದ ಅಂತಃಕಳೆ ಮಂಕಾಗಿ ಎಲ್ಲರೂ ಪಾಪ ಪ್ರಜ್ಞೆ ಅನುಭವಿಸ ಬೇಕಾಗುತ್ತದೆ. ಬೇಕಾ ಇದೆಲ್ಲಾ...'' ಎಂದು ಸೀತಾರಂ ಎಚ್ಚರಿಕೆ ನೀಡಿದ್ದಾರೆ.

  ''ಒಂದು ವರ್ಷ ಮಕ್ಕಳಿಗೆ ಸುಮ್ಮನೆ ಬಡ್ತಿ ಕೊಟ್ಟರೆ ನಷ್ಟವೇನಿಲ್ಲ. ಮುಂದೆ ಅದನ್ನು ಸರಿ ಮಾಡಿಕೊಳ್ಳಬಲ್ಲ ಬುದ್ಧ, ಚಾಣಾಕ್ಷತೆ ಮಕ್ಕಳಿಗಿರುತ್ತದೆ..ಸದ್ಯಕ್ಕೆ ಶಾಲೆ ಶುರುಮಾಡುವುದು ಬೇಡ'' ಎಂದು ಸೀತಾರಂ ಅಭಿಪ್ರಾಯಪಟ್ಟಿದ್ದಾರೆ.

  ಈಗಾಗಲೇ ಕೇಂದ್ರ ಶಿಕ್ಷಣ ಸಚಿವಾಲಯವು ಶಾಲೆಗಳ ಪುನರಾರಂಭದ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ತಮ್ಮ ಟ್ವಿಟ್ಟರ್ ಮೂಲಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳಿಂದ ಶಾಲೆಗಳ ಪುನರಾರಂಭ ಕುರಿತು ಮಾರ್ಗಸೂಚಿ ಪ್ರಕಟಿಸಿದ್ದಾರೆ.

  English summary
  Kannada Film TN Seetharam Reaction about schools reopening in Karnataka.
  Thursday, October 8, 2020, 15:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X