»   » ಮಾದಕದ್ರವ್ಯ ಜಾಲದಲ್ಲಿ ನಟ ಅಭಿಷೇಕ್ ಬಂಧನ

ಮಾದಕದ್ರವ್ಯ ಜಾಲದಲ್ಲಿ ನಟ ಅಭಿಷೇಕ್ ಬಂಧನ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಟಾಲಿವುಡ್ ನಟರು, ನಟಿಯರು ಮತ್ತು ಪ್ರಮುಖ ರಾಜಕಾರಣಿಗಳ ಮಕ್ಕಳು ಮಾದಕದ್ರವ್ಯ ಕಳ್ಳಸಾಗಣೆ ಜಾಲದ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಮಾಹಿತಿ ಆಗಿಂದಾಗ್ಗೆ ಕೇಳಿಬರುತ್ತಿತ್ತು. ಈಗ ಮತ್ತೊಬ್ಬ ತೆಲುಗು ನಟ ಅಭಿಷೇಕ್ ಡ್ರಗ್ಸ್ ಕಳ್ಳಸಾಗಣೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಹಿಂದೆ ನಟ ರವಿತೇಜ ಅವರ ತಮ್ಮ ಸೇರಿದಂತೆ ಹಲವರು ಡ್ರಗ್ಸ್ ಅಕ್ರಮ ಮಾರಾಟ ಜಾಲದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರಿಗೆ ಹೈದರಾಬಾದಿನ ಎಸ್ ಆರ್ ನಗರದ ಬಳಿ ಅಭಿಷೇಕ್ ಮಾಲುಸಮೇತ ಸಿಕ್ಕಿಬಿದ್ದಿದ್ದಾನೆ.

Actor Abhishek

ಆತನ ಬಳಿ ಇದ್ದ ಹತ್ತು ಗ್ರಾಂಗಳ ಕೊಕೇನ್ ಮಾದಕದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಬಂಧನದಲ್ಲಿರುವ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತೆಲುಗಿನ ಬೆರಳೆಣಿಕೆಯ ಚಿತ್ರಗಳಲ್ಲಿ ಅಭಿನಯಿಸಿರುವ ಈತ 'ಡೇಂಜರ್' ಹಾಗೂ 'ನುವ್ವೊಸ್ತಾನಂಟೆ ನೇನೊದ್ದಂಟಾನ' ಎಂಬ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದರು.

ಗೋವಾದಲ್ಲಿ ಹೋಟೆಲನ್ನು ನಡೆಸುತ್ತಿರುವ ಈತ ಅಲ್ಲಿ ಡ್ರಗ್ಸ್ ಗ್ಯಾಂಗ್ ನೊಂದಿಗೆ ಪರಿಚಯ ಬೆಳೆಸಿಕೊಂಡು ಈ ಜಾಲಕ್ಕೆ ಸೇರ್ಪಡೆಯಾಗಿದ್ದ. ಹೈದರಾಬಾದಿನಲ್ಲಿ ಮಾದಕದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದ. ಪಬ್ ಗಳು, ಬಾರ್ ಗಳು, ಸಿನೆಮಾ ತಾರೆಗಳಿಗೆ ಸರಬರಾಜು ಮಾಡುತ್ತಿದ್ದ.

ತನ್ನ ಅಕ್ರಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಡ್ರಗ್ಸ್ ಪಾರ್ಟಿಗಳನ್ನೂ ನಡೆಸುತ್ತಿದ್ದ ಎಂದು ಹೈದರಾಬಾದ್ ಪೊಲೀಸರು ವಿವರ ನೀಡಿದ್ದಾರೆ. ಈತನಿಗೆ ಚಿತ್ರರಂಗದಲ್ಲಿ ಅಷ್ಟಾಗಿ ಅವಕಾಶಗಳಿರಲಿಲ್ಲ. ಹಾಗಾಗಿ ಈ ದಂಧೆಗೆ ಇಳಿದಿದ್ದ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

English summary
Telugu actor Abhishek arrested in drugs case. Police have arrested him at SR Nagar area, Hyderabad. "Drugs transport to Tollywood celebrities and pubs by Abhishek" Hyderabad west zone DCP Sudheer Babu told.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada