For Quick Alerts
  ALLOW NOTIFICATIONS  
  For Daily Alerts

  ಪ್ಯಾಂಟ್ ಜಿಪ್ ಹಾಕದೆ ಪೋಸ್ ನೀಡಿ ಟ್ರೋಲ್ ಆದ ನಟಿ ರಾಕುಲ್

  |

  ತೆಲುಗು ಚಿತ್ರರಂಗದ ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಸದಾ ಸುದ್ದಿಯಲ್ಲಿರುತ್ತಾರೆ. ಸಿನಿಮಾ ವಿಚಾರಗಳಿಗಿಂತ ರಾಕುಲ್ ಹೆಚ್ಚು ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಾರೆ. ಈಗ ಮತ್ತೊಂದು ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ ರಾಕುಲ್.

  ಇತ್ತೀಚಿಗೆ ರಾಕುಲ್ ಪ್ರೀತ್ ಸಿಂಗ್ ಒಂದು ಫೋಟೋ ಶೂಟ್ ಮಾಡಿದ್ದಾರೆ. ಆ ಫೋಟೋ ಶೂಟ್ ನಲ್ಲಿ ರಾಕುಲ್ ಸಖತ್ ಬೋಲ್ಡ್ ಆಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ತರಹೇವಾರಿ ಲುಕ್ ನಲ್ಲಿ ಫೋಟೋಗೆ ಪೋಸ್ ನೀಡಿರುವ ರಾಕುಲ್ ಪ್ಯಾಂಟ್ ಗೆ ಜಿಪ್ ಹಾಕದೆ ಹಾಗೆ ಒಂದು ಪೋಸ್ ನೀಡಿದ್ದಾರೆ.

  ಈ ಪೋಟೋದಲ್ಲಿ ರಾಕುಲ್ ಸಖತ್ ಹಾಟಾಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ಫೋಟೋ ಈಗ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದೆ. ರಾಕುಲ್ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದರ ಜೊತೆಗೆ ಗರ್ಲ್ ಪವರ್ ಎಂದು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

  ಈ ಫೋಟೋ ನೋಡಿ ಅನೇಕ ನೆಟ್ಟಿಗರು "ಜಿನ್ಸ್ ಪ್ಯಾಂಟನ ಜಿಪ್ ಓಪನ್ ಆಗಿದೆ. ಇದ್ಯಾವ ಗರ್ಲ್ ಪವರ್, ಇದನ್ನು ನೀವು ಗರ್ಲ್ ಪವರ್ ಎನ್ನುತ್ತೀರಾ? ಶೇಮ್ ಶೇಮ್" ಎಂದು ಕಮೆಂಟ್ ಮಾಡಿದ್ದಾರೆ.

  ಜಿಪ್ ಹಾಕುವುದನ್ನೆ ಮರೆತಿದ್ದೀರಾ ಇನ್ನು ಅನೇಕರು ಕೇಳುತ್ತಿದ್ದಾರೆ. ಹೀಗೆ ತರಹೇವಾರಿ ಕಮೆಂಟ್ ಗಳು ರಾಕುಲ್ ಇನ್ಸ್ಟಾಗ್ರಾಮ್ ನಲ್ಲಿ ರಾರಾಜಿಸುತ್ತಿವೆ. ಆದ್ರೆ ಇದ್ಯಾವದಕ್ಕು ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಾಕುಲ್.

  ಇತ್ತೀಚಿಗಷ್ಟೆ ರಾಕುಲ್ ಅಭಿನಯದ ಬಾಲಿವುಡ್ ನ 'ದೇ ದೇ ಪ್ಯಾರ್ ದೇ' ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ರಾಕುಲ್ ತೆರೆಹಂಚಿಕೊಂಡಿದ್ದಾರೆ.

  English summary
  Tollywood actress rakul preeth singh trolled for her bold photoshoot. Rahul's playing a lead role in Hindi film De De Pyar De has been well received.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X