»   » ಯಶ್ 'ಮಾಸ್ಟರ್ ಪೀಸ್' ಏಕೆ ನೋಡಬೇಕು? ಇಲ್ಲಿದೆ ಕಾರಣ

ಯಶ್ 'ಮಾಸ್ಟರ್ ಪೀಸ್' ಏಕೆ ನೋಡಬೇಕು? ಇಲ್ಲಿದೆ ಕಾರಣ

Posted By:
Subscribe to Filmibeat Kannada

ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ಸಿನ ಬೆನ್ನೇರಿ ಮುನ್ನುಗ್ಗುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಮಾಸ್ಟರ್ ಪೀಸ್' ಸಿನಿಮಾ ಡಿಸೆಂಬರ್ 24ರಂದು ಬೆಳ್ಳಂಬೆಳಗ್ಗೆ 4 ಘಂಟೆಗೆ ಭರ್ಜರಿಯಾಗಿ ಬಿಡುಗಡೆ ಆಗುತ್ತಿದೆ.

ಸಂಭಾಷಣೆಗಾರರಾಗಿದ್ದ ಮಂಜು ಮಾಂಡವ್ಯ ಅವರು ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು 'ಮಾಸ್ಟರ್ ಪೀಸ್' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ನಟಿ ಶಾನ್ವಿ ಶ್ರೀವಾತ್ಸವ್ ಅವರು ಫಸ್ಟ್ ಟೈಮ್ ಯಶ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ.[ಬಿಡುಗಡೆಗೆ ಮುನ್ನವೇ 'ಮಾಸ್ಟರ್ ಪೀಸ್' ಟಿಕೆಟ್ ಉಡೀಸ್]


ಸುಮಾರು 300 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ 'ಮಾಸ್ಟರ್ ಪೀಸ್' ಚಿತ್ರದ ವಿತರಣಾ ಹಕ್ಕು ಬರೋಬ್ಬರಿ 30 ಕೋಟಿ ರೂಪಾಯಿಗಳಿಗೆ ಸೇಲ್ ಆಗಿ ದಾಖಲೆ ಸೃಷ್ಟಿಸಿದೆ.


ಚಂದನವನಕ್ಕೆ ಕಾಲಿಟ್ಟ ಅತ್ಯಂತ ಕಮ್ಮಿ ಸಮಯದಲ್ಲಿ ಅಧಿಕ ಅಭಿಮಾನಿಗಳನ್ನು ಸಂಪಾದಿಸಿದ ರಾಕಿಂಗ್ ಸ್ಟಾರ್ ಯಶ್ ಅವರ 'ಮಾಸ್ಟರ್ ಪೀಸ್' ಯಾಕೆ ನೋಡಬೇಕು ಎಂಬುದನ್ನು ತಿಳಿಯಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..


ಡ್ಯುಯೆಲ್ ಶೇಡ್ ನಲ್ಲಿ ಯಶ್

ಇದೇ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಯಶ್ ಅವರು 'ಮಾಸ್ಟರ್ ಪೀಸ್' ಚಿತ್ರದ ಮೂಲಕ ಎರಡು ಶೇಡ್ ನಲ್ಲಿ ಮಿಂಚಿದ್ದಾರೆ. ಈ ಸಿನಿಮಾದಲ್ಲಿ ಯಶ್ ಹೀರೋ ರೋಲ್ ಮತ್ತು ರೌಡಿ ರೋಲ್ ನಲ್ಲಿ ಮಿಂಚಿ ತಮ್ಮ ಅಭಿಮಾನಿಗಳನ್ನು ವಿಭಿನ್ನವಾಗಿ ಮನ ರಂಜಿಸಲಿದ್ದಾರೆ.['ಮಾಸ್ಟರ್ ಪೀಸ್' ಸಿನಿಮಾದ ಮಸ್ತ್ ಸಾಂಗ್ ಔಟ್!]


ಭಗತ್ ಸಿಂಗ್ ಲುಕ್ ನಲ್ಲಿ ಯಶ್

ಸ್ಯಾಂಡಲ್ ವುಡ್ ನ ಅಣ್ತಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಈ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಲುಕ್ ನಲ್ಲಿ ಮಿಂಚಿದ್ದು, ಇದು ಸ್ಯಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ಸಿನಿಮಾನಾ ಅನ್ನೋ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಡಿಸೆಂಬರ್ 24 ರಂದು ಉತ್ತರ ಸಿಗಲಿದೆ.


ಯಶ್ ಮತ್ತು ಶಾನ್ವಿ ಶ್ರೀವಾತ್ಸವ್ ಕೆಮಿಸ್ಟ್ರಿ

'ಚಂದ್ರಲೇಖ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆ ಡ್ಯುಯೆಟ್ ಹಾಡಿದ್ದ ಬಹುಭಾಷಾ ಬೆಡಗಿ ನಟಿ ಶಾನ್ವಿ ಶ್ರೀವಾತ್ಸವ್ ಅವರು ಇದೇ ಮೊದಲ ಬಾರಿಗೆ ಯಶ್ ಜೊತೆ ನಾಯಕಿಯಾಗಿ ಡ್ಯುಯೆಟ್ ಹಾಡಿದ್ದಾರೆ. ತೆರೆ ಮೇಲೆ ಇವರಿಬ್ಬರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ ಅನ್ನೋದಕ್ಕೆ ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ಮತ್ತು ಹಾಡುಗಳೇ ಸಾಕ್ಷಿ.


ಸಂಭಾಷಣೆಗಾರನ ಆಕ್ಷನ್-ಕಟ್

ಈ ಮೊದಲು ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಿದ್ದ ಸಂಭಾಷಣೆಗಾರ ಮಂಜು ಮಾಂಡವ್ಯ ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಕರ ಪಟ್ಟ ಹೊತ್ತುಕೊಂಡು 'ಮಾಸ್ಟರ್ ಪೀಸ್' ಗೆ ಆಕ್ಷನ್-ಕಟ್ ಹೇಳಿದ್ದಾರೆ. ಅಲ್ಲದೇ ಯಶ್ ಅವರ ಜೊತೆ 'ರಾಜಾಹುಲಿ' ಚಿತ್ರದಲ್ಲಿ ಗೆಳೆಯನ ಪಾತ್ರ ವಹಿಸಿದ್ದರು. ಇದೀಗ ಗೆಳೆಯನಿಗೋಸ್ಕರ 'ಮಾಸ್ಟರ್ ಪೀಸ್' ತಯಾರಿಸಿ ಎಲ್ಲಾ ದಾಖಲೆಗಳನ್ನು ಪೀಸ್ ಪೀಸ್ ಮಾಡಲು ಅಣಿಯಾಗಿದ್ದಾರೆ.


ಚಿತ್ರದ ಹಾಡುಗಳು ಮಸ್ತ್ ಆಗಿವೆ

ಸಂಗೀತ ಮಾಂತ್ರಿಕ ವಿ.ಹರಿಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಮಾಸ್ಟರ್ ಪೀಸ್' ಚಿತ್ರದ ಹಾಡುಗಳು ಈಗಾಗಲೇ ಮಾರ್ಕೆಟ್ ಗೆ ಬಂದಿದ್ದು, ಸಖತ್ ಬ್ಯೂಟಿಫುಲ್ ಆಗಿದೆ. ಅದರಲ್ಲೂ ಯಶ್ ಅವರು ಹಾಡಿರುವ 'ಅಣ್ಣಂಗೆ ಲವ್ ಆಗಿದೆ' ಹಾಡು ಮಾತ್ರ ಮಸ್ತ್ ಆಗಿದ್ದು, ಎಲ್ಲರ ಬಾಯಲ್ಲೂ ಅದೇ ಹಾಡು ಎಂಬಂತಾಗಿದೆ. ಜೊತೆಗೆ 'ಐ ಕಾಂಟ್ ವೇಯ್ಟ್ ಬೇಬಿ' ಹಾಡಿನಲ್ಲಿ ಯಶ್ ಮತ್ತು ಶಾನ್ವಿ ಮಾಡಿರುವ ಮೋಡಿಗೆ ಪ್ರೇಕ್ಷಕರು ಶಿಳ್ಳೆ ಹೊಡಿಯುತ್ತಾರೆ.


'ಮಿ ಅಂಡ್ ಮಿಸಸ್ ರಾಮಾಚಾರಿ' ರೆಕಾರ್ಡ್ ಅನ್ನು ಬ್ರೇಕ್ ಮಾಡುತ್ತಾ?

ಕಳೆದ ವರ್ಷ ತೆರೆ ಕಂಡು ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡ ಯಶ್ ಮತ್ತು ರಾಧಿಕಾ ಪಂಡಿತ್ ಅವರ 'ಮಿ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಮಾಡಿರುವ ಎಲ್ಲಾ ಬ್ರೇಕ್ ಗಳನ್ನು ಮಂಜು ಮಾಂಡವ್ಯ ಅವರ 'ಮಾಸ್ಟರ್ ಪೀಸ್' ಬ್ರೇಕ್ ಮಾಡುತ್ತಾ, ಜೊತೆಗೆ ಈ ವರ್ಷದ ಹಿಟ್ ಸಿನಿಮಾ ಅನ್ನಿಸಿಕೊಳ್ಳುತ್ತಾ ಅಂತ ಇನ್ನೇನು ಒಂದೇ ದಿನದಲ್ಲಿ ಗೊತ್ತಾಗುತ್ತೆ ಬಿಡಿ. ಆದರೆ ಈಗಾಗಲೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿರುವುದನ್ನು ಕಂಡರೆ ಹಿಸ್ಟರಿ ರಿಪೀಟ್ ಅಂತ ಕಾಣುತ್ತದೆ.


English summary
6 Reasons why you should watch Rocking star Yash's Kannada movie 'Masterpiece'. Kannada Actor Yash, Actress Shanvi Srivastava in the lead role. The movie is directed by Manju Mandavya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada