Don't Miss!
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- News
7th Pay Commission DA: ನೌಕರರಿಗೆ 18 ತಿಂಗಳ ಬಾಕಿ DA ಹಣ ಎಷ್ಟು ಕಂತುಗಳಲ್ಲಿ ಸಿಗಲಿದೆ? ತಿಳಿಯಿರಿ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತ್ರಿಷಾರ ಬ್ಯಾಂಕ್ ಖಾತೆಯಿಂದ 1 ಕೋಟಿ ಮಂಗಮಾಯ
ಚೆನ್ನೈನ ಅಣ್ಣಾ ಸಲೈ ಪ್ರದೇಶದಲ್ಲಿರುವ ಈ ಖಾಸಗಿ ಬ್ಯಾಂಕ್‌ನಲ್ಲಿ (ಹೆಸರನ್ನು ಗೌಪ್ಯವಾಗಿಡಲಾಗಿದೆ) ತ್ರಿಷಾ ಹಲವಾರು ಕೋಟಿ ರುಪಾಯಿಗಳನ್ನು ಡಿಪಾಸಿಟ್ ಮಾಡಿದ್ದರಂತೆ. ಕಳೆದ ವಾರ ಅಕೌಂಟ್ ಚೆಕ್ ಮಾಡಿದಾಗ ಈ ಆಘಾತಕಾರಿ ಸಂಗತಿ ತಿಳಿದುಬಂದಿದೆ.
ಕೂಡಲೆ ಬ್ಯಾಂಕಿನ ಉನ್ನತಾಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದಾರೆ. ಬ್ಯಾಂಕಿನ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದಾಗ ತ್ರಿಷಾಗೆ ಸೇರಿದ 1 ಕೋಟಿ ರುಪಾಯಿಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ತಮ್ಮ ಬ್ಯಾಂಕ್ ಸಿಬ್ಬಂದಿಯೇ ಗುಳುಂ ಮಾಡಿರುವ ಅಂಶವೂ ಬೆಳಕಿಗೆ ಬಂದಿದೆ. ಬ್ಯಾಂಕಿನ ಸಿಬ್ಬಂದಿಯೊಬ್ಬ ತ್ರಿಷಾರ ಬ್ಯಾಂಕ್ ಖಾತೆಯ ವಿವರಗಳನ್ನು ತನ್ನ ಪರ್ಸನಲ್ ಕಂಪ್ಯೂಟರ್‌ಗೆ ವರ್ಗಾಯಿಸಿಕೊಂಡು ಒಂದು ಕೋಟಿ ಎಗರಿಸಿರುವುದ್ದಾನೆ.
ಆತ ಒಮ್ಮೆಲೆ ಅಷ್ಟೂ ಹಣವನ್ನು ಡ್ರಾ ಮಾಡದೆ. ಸ್ವಲ್ಪ ಸ್ವಲ್ಪ ಹಣವನ್ನು ಡ್ರಾ ಮಾಡಿ ಒಂದು ಕೋಟಿ ರುಪಾಯಿ ಎಗರಿಸಿದ್ದಾನೆ. ಅಷ್ಟರಲ್ಲಿ ತ್ರಿಷಾ ಅಕೌಂಟ್ ಚೆಕ್ ಮಾಡಿಕೊಂಡಿದ್ದಾರೆ. ಪ್ರಕರಣ ಬಯಲಿಗೆ ಬಂದಿದೆ. ಇಲ್ಲದಿದ್ದರೆ ತ್ರಿಷಾರ ಅಕೌಂಟ್‌ನಿಂದ ಇನ್ನಷ್ಟು ಕೋಟಿಗಳು ಮಂಗಮಾಯವಾಗುವ ಸಾಧ್ಯತೆಗಳಿದ್ದವು.
ಬಳಿಕ ಆ ಖಾಸಗಿ ಬ್ಯಾಂಕ್‌ನವರು ತ್ರಿಷಾಗೆ ಸಮಾಧಾನ ಮಾಡಿ ನಿಮ್ಮ ಹಣ ನಿಮಗೆ ವಾಪಸ್ಸು ಬರುವಂತೆ ಮಾಡುತ್ತೇನೆ. ಅಲ್ಲಿಯವರೆಗೂ ತಾಳ್ಮೆ ವಹಿಸಿ. ದಯವಿಟ್ಟು ಪೊಲೀಸರವರೆಗೂ ವಿಷಯವನ್ನು ತೆಗೆದುಕೊಂಡು ಹೋಗಬೇಡಿ ಎಂದು ದಮ್ಮಯ್ಯಹಾಕಿರುವುದಾಗಿ ಸುದ್ದಿ ಇದೆ.
ಬ್ಯಾಂಕ್ ಸಿಬ್ಬಂದಿಯೇ ಈ ರೀತಿ ಮೋಸ ಮಾಡುತ್ತಾರೆ ಎಂದ ಮೇಲೆ ಯಾರು ತಾನೆ ಅಂತಹ ಬ್ಯಾಂಕಿನಲ್ಲಿ ಹಣ ಇಡಲು ಮುಂದಾಗುತ್ತಾರೆ. ಆ ಬ್ಯಾಂಕ್ ದಿವಾಳಿಯಾಗುವುದು ಗ್ಯಾರಂಟಿ. ಕೆಲವು ದಿನಗಳ ಸಮಯಾವಕಾಶ ಕೇಳಿರುವ ಬ್ಯಾಂಕ್ ತ್ರಿಷಾರ ಹಣ ಕೊಡುವುದಾಗಿ ಭರವಸೆ ನೀಡಿದೆ. ಅಲ್ಲಿಯವರೆಗೂ ಪೊಲೀಸ್ ಠಾಣೆ ಮೆಟ್ಟಿಲೇರಬೇಡ ತಾಯಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.
ಹಾಗಾಗಿ ತ್ರಿಷಾ ಕೂಡ ಗಪ್ ಚಿಪ್ ಆಗಿದ್ದು ಈ ವಿಷಯವನ್ನು ಪೊಲೀಸರ ತನಕ ತೆಗೆದುಕೊಂಡು ಹೋಗಿಲ್ಲ ಎನ್ನುತ್ತವೆ ಕೋಲಿವುಡ್ ಮೂಲಗಳು. ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಖತ್ ಬ್ಯುಸಿಯಾಗಿರುವ ದಕ್ಷಿಣದ ತಾರೆ ತ್ರಿಷಾ ಕೃಷ್ಣನ್.
ನೆರೆಮನೆ ಹುಡುಗಿಯಂತೆ ಕಾಣುವ ಈ ಕೃಷ್ಣ ಸುಂದರಿ ಹಿಂದಿಯಲ್ಲೂ ಅದೃಷ್ಟ ಪರೀಕ್ಷೆಗೆ ಕೈಹಾಕಿ ಮುಗ್ಗರಿಸಿ ಬಿದ್ದರು. ಆದರೆ ದಕ್ಷಿಣದಲ್ಲಿ ಮಾತ್ರ ತ್ರಿಷಾ ಮ್ಯಾಜಿಕ್ ನಡೆಯುತ್ತಿದೆ. ಸಿನಿಮಾ ಒಂದಕ್ಕೆ ರು.1 ಕೋಟಿ ಚಾರ್ಚ್ ಮಾಡುತ್ತಾರೆ ತ್ರಿಷಾ. (ಏಜೆನ್ಸೀಸ್)