For Quick Alerts
  ALLOW NOTIFICATIONS  
  For Daily Alerts

  'ಪವರ್ ಸ್ಟಾರ್' ಜೊತೆ 'ಸೌತ್ ಕ್ವೀನ್' ತ್ರಿಷಾ ನಟಿಸುವುದು ಅಧಿಕೃತ

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದಲ್ಲಿ ದಕ್ಷಿಣ ಸುಂದರಿ ತ್ರಿಷಾ ಕೃಷ್ಣನ್ ಎರಡನೇ ಬಾರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ಹೊಸ ಚಿತ್ರದಲ್ಲಿ ಕೃಷ್ಣಸುಂದರಿ ತ್ರಿಷಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಹಲವು ದಿನಗಳಿಂದ ಚರ್ಚೆಯಲ್ಲಿತ್ತು. ಈ ಸುದ್ದಿ ನಿಜ ಆಗಲಿ ಎಂದು ಬಹಳಷ್ಟು ಜನರು ಕೇಳಿಕೊಳ್ಳುತ್ತಿದ್ದರು. ಇದೀಗ, ಕೊನೆಗೂ ಈ ಸುದ್ದಿ ಅಧಿಕೃತವಾಗಿದೆ. ಅಪ್ಪು ಜೊತೆ ತ್ರಿಷಾ ಎರಡನೇ ಬಾರಿ ತೆರೆಹಂಚಿಕೊಳ್ಳುತ್ತಿದ್ದಾರೆ.

  ಈ ಸುದ್ದಿಯನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. ಆಗಸ್ಟ್ 2 ರಂದು ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ, ''ದ್ವಿತ್ವ ಚಿತ್ರದ ನಾಯಕಿ ತ್ರಿಷಾ ಕೃಷ್ಣನ್‌ಗೆ ಸುಸ್ವಾಗತ'' ಎಂದು ಸರ್ಪ್ರೈಸ್ ನೀಡಿದ್ದಾರೆ.

  'ದ್ವಿತ್ವ' ಪೋಸ್ಟರ್ ಮೇಕಿಂಗ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಪವನ್ ಕುಮಾರ್'ದ್ವಿತ್ವ' ಪೋಸ್ಟರ್ ಮೇಕಿಂಗ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಪವನ್ ಕುಮಾರ್

  ಅಂದ್ಹಾಗೆ, 'ದ್ವಿತ್ವ' ಚಿತ್ರವನ್ನು 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡ್ತಿದ್ದಾರೆ. ಕಂಟೆಂಟ್ ಪ್ರಧಾನ ಸಿನಿಮಾಗಳನ್ನು ಮಾಡುವುದರಲ್ಲಿ ನಿಪುಣ ಎನಿಸಿಕೊಂಡಿರುವ ಪವನ್ ಜೊತೆ ಪುನೀತ್ ಚೊಚ್ಚಲ ಬಾರಿಗೆ ಕೆಲಸ ಮಾಡ್ತಿದ್ದಾರೆ. ಅಪರೂಪದ ಈ ಜೋಡಿಗೆ ಈಗ ತ್ರಿಷಾ ಸಾಥ್ ಕೊಡ್ತಿರೋದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಮುಂದೆ ಓದಿ...

  ಎರಡನೇ ಬಾರಿ ಅಪ್ಪುಗೆ ಜೋಡಿ

  ಎರಡನೇ ಬಾರಿ ಅಪ್ಪುಗೆ ಜೋಡಿ

  ಪುನೀತ್ ರಾಜ್ ಕುಮಾರ್ ಜೊತೆ ತ್ರಿಷಾಗೆ ಎರಡನೇ ಸಿನಿಮಾ. ಈ ಮುಂಚೆ 2014ರಲ್ಲಿ ತೆರೆಕಂಡಿದ್ದ 'ಪವರ್' ಚಿತ್ರದಲ್ಲಿ ತ್ರಿಷಾ ಅಭಿನಯಿಸಿದ್ದರು. ಇದು ತ್ರಿಷಾಗೆ ಮೊದಲ ಕನ್ನಡ ಸಿನಿಮಾ ಆಗಿತ್ತು. ತೆಲುಗಿನ 'ದೂಕುಡು' ಚಿತ್ರದ ಕನ್ನಡ ರಿಮೇಕ್ ಚಿತ್ರ ಇದಾಗಿದ್ದು, ಸಮಂತಾ ಮಾಡಿದ್ದ ಪಾತ್ರದಲ್ಲಿ ಕನ್ನಡದಲ್ಲಿ ತ್ರಿಷಾ ಕಾಣಿಸಿಕೊಂಡಿದ್ದರು.

  ಸ್ಯಾಂಡಲ್‌ವುಡ್‌ನಲ್ಲಿ ತ್ರಿಷಾಗೆ ಬೇಡಿಕೆ ಇದೆ

  ಸ್ಯಾಂಡಲ್‌ವುಡ್‌ನಲ್ಲಿ ತ್ರಿಷಾಗೆ ಬೇಡಿಕೆ ಇದೆ

  ಪವರ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ತ್ರಿಷಾ ಜೋಡಿ ಮೋಡಿ ಮಾಡಿತ್ತು. ಇವರಿಬ್ಬರ ಜೋಡಿಯನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳು ಮತ್ತೊಮ್ಮೆ ಈ ಜೋಡಿಯನ್ನು ನೋಡಲು ಕಾಯುತ್ತಿದ್ದರು. ಪವರ್ ಸ್ಟಾರ್ ಅಭಿಮಾನಿಗಳ ಆ ನಿರೀಕ್ಷೆ ಈಗ 'ದ್ವಿತ್ವ' ಚಿತ್ರದ ಮೂಲಕ ನೆರವೇರಿದೆ.

  ಪುನೀತ್ 'ದ್ವಿತ್ವ' ಚಿತ್ರಕ್ಕಾಗಿ ಮತ್ತೆ ಕನ್ನಡಕ್ಕೆ ಬರ್ತಾರಾ ತಮಿಳಿನ ಈ ಖ್ಯಾತ ನಟಿ?ಪುನೀತ್ 'ದ್ವಿತ್ವ' ಚಿತ್ರಕ್ಕಾಗಿ ಮತ್ತೆ ಕನ್ನಡಕ್ಕೆ ಬರ್ತಾರಾ ತಮಿಳಿನ ಈ ಖ್ಯಾತ ನಟಿ?

  ಪೋಸ್ಟರ್ ಗೊಂದಲ

  ಪೋಸ್ಟರ್ ಗೊಂದಲ

  'ದ್ವಿತ್ವ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನಕಲು, ಇದು ಕಾಪಿ ಮಾಡಲಾಗಿದೆ ಎಂಬ ಟೀಕೆ ವ್ಯಕ್ತವಾಯಿತು. ಖಾಸಗಿ ಸಂಸ್ಥೆಯೊಂದರ ಪೋಸ್ಟರ್‌ನ್ನು ದ್ವಿತ್ವ ಚಿತ್ರದ ಪೋಸ್ಟರ್ ಮಾಡಿದ್ದಾರೆ ಎಂದು ಕಾಲೆಳೆದಿದ್ದರು. ಆದರೆ, ಇದು ಉದ್ದೇಶಪೂರ್ವಕವಾಗಿ ಆಗಿದ್ದು ಅಲ್ಲ, ಡಿಸೈನರ್ ಮತ್ತು ನಿರ್ದೇಶಕರ ನಡುವೆ ಸರಿಯಾಗಿ ಮಾತುಕತೆ ಆಗದ ಕಾರಣ ಅಚಾನಕ್ ಆಗಿದೆ ಎಂದು ಪವನ್ ಸ್ಪಷ್ಟನೆ ಕೊಟ್ಟಿದ್ದರು. ಈ ಗೊಂದಲದ ನಡುವೆಯೂ ಪೋಸ್ಟರ್‌ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  ಜೇಮ್ಸ್ ಮುಗಿಸಿ ದ್ವಿತ್ವ ಆರಂಭ

  ಜೇಮ್ಸ್ ಮುಗಿಸಿ ದ್ವಿತ್ವ ಆರಂಭ

  ದ್ವಿತ್ವ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಈ ಹಿಂದೆ ಎಂದೂ ನೋಡದ ರೀತಿಯಲ್ಲಿ ನೋಡಬಹುದು ಎಂಬ ನಿರೀಕ್ಷೆ ಇದೆ. ಈಗ ತ್ರಿಷಾ ಎಂಟ್ರಿಯಿಂದ ಈ ಸಿನಿಮಾ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಸದ್ಯಕ್ಕೆ ಚೇತನ್ ಕುಮಾರ್ ನಿರ್ದೇಶನದಲ್ಲಿ 'ಜೇಮ್ಸ್' ಸಿನಿಮಾ ಮಾಡ್ತಿರುವ ಅಪ್ಪು, ಈ ಪ್ರಾಜೆಕ್ಟ್ ಮುಗಿಸಿ ದ್ವಿತ್ವ ಆರಂಭಿಸಲಿದ್ದಾರೆ. 'ಜೇಮ್ಸ್' ಕೊನೆಯ ಹಂತದಲ್ಲಿದೆ.

  '96' ಆದ್ಮೇಲೆ ಟ್ರ್ಯಾಕ್ ಬದಲಿಸಿದ ನಟಿ

  '96' ಆದ್ಮೇಲೆ ಟ್ರ್ಯಾಕ್ ಬದಲಿಸಿದ ನಟಿ

  ತ್ರಿಷಾ ಬೇಡಿಕೆ ಬಹುತೇಕ ಕಡಿಮೆಯಾಗಿತ್ತು. ತೆಲುಗು ಮತ್ತು ತಮಿಳು ಚಿತ್ರಗಳಿಂದ ನಿಧಾನವಾಗಿ ದೂರವಾಗುತ್ತಿದ್ದರು. ಆದರೆ, 2018ರಲ್ಲಿ ತೆರೆಕಂಡ '96' ಸಿನಿಮಾದಿಂದ ಮತ್ತೆ ಕಂಬ್ಯಾಕ್ ಮಾಡಿದರು. ರಜನಿ ಜೊತೆ 'ಪೇಟಾ' ಮಾಡಿದರು. ಮಣಿರತ್ನಂ ಜೊತೆ 'ಪೊನ್ನಿಯನ್ ಸೆಲ್ವನ್' ಅಂತಹ ಪ್ರಾಜೆಕ್ಟ್‌ಗಳಲ್ಲಿ ಮಾಡ್ತಿದ್ದಾರೆ. ಈಗ ಮತ್ತಷ್ಟು ಚಿತ್ರಗಳು ಕೈಯಲ್ಲಿವೆ. ಇದೀಗ, 'ದ್ವಿತ್ವ' ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‌ವುಡ್ ಕಡೆ ಹೆಜ್ಜೆ ಹಾಕಿದ್ದಾರೆ.

  English summary
  South Actress Trisha Krishnan to romance Puneeth Rajkumar in Pawan Kumar's Dvitva Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X