ದಾಂಪತ್ಯ ಜೀವನದ ಹೊಸ್ತಿಲಲ್ಲಿ ತುಳು ನಟ ಅರ್ಜುನ್ ಕಾಪಿಕಾಡ್
ತುಳು ಚಿತ್ರರಂಗದ ಖ್ಯಾತ ನಟ ದೇವದಾಸ್ ಕಾಪಿಕಾಡ್ ಅವರ ಪುತ್ರ ಅರ್ಜುನ್ ಕಾಪಿಕಾಡ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.
ಹೌದು ಕೋಸ್ಟಲ್ ವುಡ್ ನ ಆಕ್ಷನ್-ಕಿಂಗ್ ನಟ ಅರ್ಜುನ್ ಕಾಪಿಕಾಡ್ ಅವರು ತಮ್ಮ ಕಾಲೇಜು ದಿನಗಳಿಂದ ಪರಿಚಯವಿದ್ದ ಗೆಳತಿ ಕಾವ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.[ತುಳುನಾಡಿನಲ್ಲೇ ತುಳು ಸಿನೆಮಾ ಪ್ರದರ್ಶನಕ್ಕೆ ಕಂಟಕ]

ಮೇ 29, ಭಾನುವಾರದಂದು ನಟ ಅರ್ಜುನ್ ಕಾಪಿಕಾಡ್ ಅವರು ಗೆಳತಿ ಕಾವ್ಯ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಂಗಳೂರಿನ ದೀಪಾ ಕಂಫರ್ಟ್ಸ್ ನಲ್ಲಿ ಜರುಗಿದ ನಿಶ್ಚಿತಾರ್ಥದ ಸಂಭ್ರಮದ ಸಮಾರಂಭದಲ್ಲಿ ತುಳು ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು.[ಚಿತ್ರಗಳಲ್ಲಿ: ಅದ್ದೂರಿಯಾಗಿ ನೆರವೇರಿದ 'Red FM ತುಳು ಫಿಲ್ಮ್ ಅವಾರ್ಡ್']

ತುಳು ನಟರಾದ ಅರವಿಂದ ಬೋಳಾರ್, ಭೊಜರಾಜ್ ವಾಮಂಜೂರು, ಪ್ರಕಾಶ್ ಪಾಂಡೇಶ್ವರ್, ರಾಮ್ ದಾಸ್ ಸಸಿಹಿತ್ಲು, ಪತ್ರಕರ್ತ ಮನೋಹರ್ ಪ್ರಸಾದ್ ಸೇರಿದಂತೆ ಹಲವು ಗಣ್ಯರು ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಂಧು-ಬಾಂಧವರು ಮತ್ತು ಗಣ್ಯರನ್ನು ಕಾಪಿಕಾಡ್ ದಂಪತಿ, ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳಾ ಕಾಪಿಕಾಡ್ ಅವರು ಸಂಭ್ರಮದಿಂದ ಬರಮಾಡಿಕೊಂಡಿದ್ದರು.[ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪ್ರಿಯಾಮಣಿ]

'ರಂಗ್', 'ದಂಡ್', 'ಚಂಡಿಕೋರಿ' ಮುಂತಾದ ಸಿನಿಮಾಗಳಲ್ಲಿ ಮಿಂಚಿದ್ದ ನಟ ಅರ್ಜುನ್ ಕಾಪಿಕಾಡ್ ಅವರು ಸದ್ಯಕ್ಕೆ ತಮ್ಮ ಮುಂಬರುವ ಸಿನಿಮಾ 'ಬರ್ಸ' ಚಿತ್ರದ ಚಿತ್ರೀಕರಣ ಸಂಪೂರ್ಣಗೊಳಿಸಿದ್ದಾರೆ. ಇವರು 'ಮಧುರ ಸ್ವಪ್ನ' ಎಂಬ ಕನ್ನಡ ಚಿತ್ರದಲ್ಲಿ ಕೂಡ ಮಿಂಚಿದ್ದರು.


Click it and Unblock the Notifications











