For Quick Alerts
  ALLOW NOTIFICATIONS  
  For Daily Alerts

  ಜುಲೈ 21 ಕ್ಕೆ 'ಅರ್ಜುನ್ ವೆಡ್ಸ್ ಅಮೃತ' ತೆರೆಗೆ

  By Suneel
  |

  ಅಮೃತಾ ಮದುವೆ ದಿನ ಫಿಕ್ಸ್ ಆಗಿದ್ದು, ಮುಂದಿನ ಜುಲೈ 21 ಕ್ಕೆ ಅರ್ಜುನ್ ಜೊತೆ ಮದುವೆಯೂ ನಡೆಯಲಿದೆ.

  ಇದ್ಯಾವ್ ಅಮೃತ, ಯಾವ ಅರ್ಜುನ್ ಅಂತ ಜಾಸ್ತಿ ತಲೆಕಡಿಸಿಕೊಳ್ಳಬೇಡಿ. ಸ್ಯಾಂಡಲ್ ವುಡ್ ನಲ್ಲಿ 'ಸಂಜು ವೆಡ್ಸ್ ಗೀತಾ' ಸಿನಿಮಾ ಹೆಸರಿನಂತೆ ಈಗ ಕೋಸ್ಟಲ್ ವುಡ್ ನಲ್ಲಿ 'ಅರ್ಜುನ್ ವೆಡ್ಸ್ ಅಮೃತಾ' ಎಂಬ ಟೈಟಲ್ ಇರುವ ಬಹುನಿರೀಕ್ಷಿತ ತುಳು ಚಿತ್ರ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿರಿ..

  'ಅರ್ಜುನ್ ವೆಡ್ಸ್ ಅಮೃತ'

  'ಅರ್ಜುನ್ ವೆಡ್ಸ್ ಅಮೃತ'

  ಚಿತ್ರದ ಟೈಟಲ್ ನೋಡಿ ಸ್ಯಾಂಡಲ್ ವುಡ್ ನ 'ಸಂಜು ವೆಡ್ಸ್ ಗೀತಾ' ಕೋಸ್ಟಲ್ ವುಡ್ ನಲ್ಲಿ ಏನಾದ್ರು 'ಅರ್ಜುನ್ ವೆಡ್ಸ್ ಅಮೃತ' ಆಗಿದ್ಯಾ ಎಂದು ನೀವೆಲ್ಲಾ ಥಿಂಕ್ ಮಾಡಬಹುದು. ಆದರೆ ಈ ಚಿತ್ರ ನವಿರಾದ ಪ್ರೇಮಕಥೆಯನ್ನು ಹೊಂದಿದ್ದು, ಹೆಚ್ಚು ಹಾಸ್ಯಮಿಶ್ರಿತವಾಗಿದೆ. ಈ ಚಿತ್ರದಲ್ಲಿ ಅನೂಪ್ ಸಾಗರ್ ಮತ್ತು ಆರಾಧ್ಯ ಶೆಟ್ಟಿ ನಾಯಕ-ನಾಯಕಿ ಆಗಿ ಬಣ್ಣ ಹಚ್ಚಿದ್ದಾರೆ.

  ನಿರ್ದೇಶನ

  ನಿರ್ದೇಶನ

  ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ನವ ನಿರ್ದೇಶಕರಾದ ಪತ್ರಕರ್ತ ರಘುಶೆಟ್ಟಿ ಎಂಬುವರು 'ಅರ್ಜುನ್ ವೆಡ್ಸ್ ಅಮೃತ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ಕಳೆದ ನವೆಂಬರ್ 2 ರಲ್ಲಿ ಸೆಟ್ಟೇರಿ ಇತ್ತೀಚೆಗೆ ಚಿತ್ರೀಕರಣ ಮುಗಿಸಿತ್ತು. ಈಗ ಬಿಡುಗಡೆಗೆ ರೆಡಿಯಾಗಿದೆ.

  ತುಳು ರಂಗಭೂಮಿಯ ಖ್ಯಾತ ಕಲಾವಿದರ ಅಭಿನಯ

  ತುಳು ರಂಗಭೂಮಿಯ ಖ್ಯಾತ ಕಲಾವಿದರ ಅಭಿನಯ

  ಚಿತ್ರ ಹೆಚ್ಚು ಹಾಸ್ಯಮಯವಾಗಿದ್ದು, ಜನರನ್ನು ರಂಜಿಸಲು ತುಳು ರಂಗಭೂಮಿಯ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಸುಂದರ ರೈ ಮಂದಾರ, ನವೀನ್ ಡಿ. ಪಡೀಲ್ ಅಭಿನಯಿಸಿದ್ದಾರೆ. ಚಿತ್ರಕಥೆ ಪ್ರಮುಖವಾಗಿ ನವೀನ್ ಡಿ ಪಡೀಲ್ ರವರ ಸುತ್ತ ಸಾಗುತ್ತದೆ, ಅವರು ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಸಂಗೀತ

  ಸಂಗೀತ

  ಸುಮಾ ಎಲ್.ಎನ್.ಶಾಸ್ತ್ರೀ ರವರು ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದು, ರಾಜೇಶ್ ಕೃಷ್ಣನ್, ಹೇಮಂತ್, ಎಲ್.ಎನ್.ಶಾಸ್ತ್ರಿ, ಸುಪ್ರಿಯಾ ರವರು ಚಿತ್ರಕ್ಕೆ ಹಾಡಿದ್ದಾರೆ. ಚಿತ್ರಕ್ಕೆ ರಾಜೇಶ್ ಶೆಟ್ಟಿ ದಾಮೋದರ ದೊಂಡೋಲೆ ಲೋಕುಕುಡ್ಲ ಅವರ ಸಾಹಿತ್ಯ, ಕಿರಣ್ ತರುಣ್ ರಾಜ್ ಕೊರಿಯೋಗ್ರಫಿ, ಚೇತನ್ ಮುಂಡಾಡಿ ಕಲಾ ನಿರ್ದೇಶನ ಇದೆ. ಆನಂದ ಸುಂದರೇಶ್ ಅವರು ಛಾಯಾಗ್ರಾಹಕರಾಗಿ ದುಡಿದಿದ್ದಾರೆ.

  English summary
  Anup Sagar and Aradhya Shetty Starrer Tulu Movie 'Arjun Weds Amrutha' all set to release on July 21st. This movie is directed by Raghu Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X