»   » ತುಳು ಚಿತ್ರರಂಗಕ್ಕೂ ವಕ್ಕರಿಸಿದ ಆನ್ ಲೈನ್ ಲೀಕ್ ಪೆಡಂಭೂತ

ತುಳು ಚಿತ್ರರಂಗಕ್ಕೂ ವಕ್ಕರಿಸಿದ ಆನ್ ಲೈನ್ ಲೀಕ್ ಪೆಡಂಭೂತ

Posted By:
Subscribe to Filmibeat Kannada

ಕರಾವಳಿ ಜನತೆ ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ತುಳುಚಿತ್ರ "ದಬಕ್ ದಬಾ ಐಸಾ"ಗೂ ರಜನೀಕಾಂತ್ ಅವರ ಕಬಾಲಿ ಸಿನಿಮಾದ ಪರಿಸ್ಥಿತಿ ಬಂದೊದಗಿದೆ. ಯಾಕೆಂದರೆ ಚಿತ್ರ ಬಿಡುಗಡೆಗೆ ಇನ್ನೇನು ಎರಡೇ ವಾರ ಬಾಕಿ ಇದೆ ಅನ್ನುವಾಗಲೇ, ಚಿತ್ರ ಅನ್ ಲೈನ್ ನಲ್ಲಿ ಸೋರಿಕೆ ಆಗಿದೆ.

ಆನ್ ಲೈನ್ ನಲ್ಲಿ ಚಿತ್ರ ಸೋರಿಕೆ ಬಗ್ಗೆ ಈಗಾಗಲೇ ಬೆಂಗಳೂರು ಚಲನಚಿತ್ರ ಮಂಡಳಿ, ಉರ್ವ ಪೊಲೀಸ್ ಠಾಣೆ, ಕಾರ್ಕಳ ನಗರ ಠಾಣೆ ಹಾಗೂ ಮಂಗಳೂರಿನ ಸೈಬರ್ ಕ್ರೈಂ ಸೆಲ್‍ ಗಳಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.[ಕೋಸ್ಟಲ್ ವುಡ್ ಗೆ ಕೋಲ್ಮಿಂಚಾಗುತ್ತಾ 'ದಬಕ್ ದಬಾ ಐಸಾ']

Tulu Movie 'Dabak Daba Aisa' leaked Online

ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸ್ ನಗರ ಆಯುಕ್ತ ಚಂದ್ರಶೇಖರ್ ಅವರು ಆರೋಪಿಗಳ ಪತ್ತೆಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಪೊಲೀಸರು ಆರೋಪಿಗಳ ತಲಾಶೆಯಲ್ಲಿ ತೊಡಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೊಬೈಲ್ ಅಂಗಡಿ, ಸೈಬರ್ ಸೆಂಟರ್, ಕಾಲೇಜ್ ಇತ್ಯಾದಿಗಳಿಗೆ ದಾಳಿ ನಡೆಸುವ ಸಂಭವವಿದೆ.[ಬಾಕ್ಸಾಫೀಸಿನಲ್ಲೂ ಮುಗ್ಗರಿಸಿ, ತುಳು ಹಾಡನ್ನೂ ಕದ್ದ ಪ್ರಿನ್ಸ್ ತೆಲುಗು ಚಿತ್ರ]

Tulu Movie 'Dabak Daba Aisa' leaked Online

8 ವರ್ಷ ಜೈಲು, ಲಕ್ಷಗಟ್ಟಲೆ ದಂಡ

ದಾಳಿಯ ವೇಳೆ ಚಿತ್ರದ ನಕಲಿ ಸಿ.ಡಿ, ಮೊಬೈಲ್, ಕಂಪ್ಯೂಟರ್‍ ಗಳಲ್ಲಿ ಈ ಚಿತ್ರ ಪತ್ತೆಯಾದರೆ ಅವರ ಮೊಬೈಲ್, ಕಂಪ್ಯೂಟರ್ ಗಳನ್ನು ವಶಪಡಿಸಿಕೊಂಡು ಆರೋಪಿ ಗಳಿಗೆ 8 ವರ್ಷ ಶಿಕ್ಷೆ ನೀಡಲು ಸಾಧ್ಯವಿದೆ. ಅಲ್ಲದೆ ಆರೋಪಿಗಳಿಗೆ ಜಾಮೀನಿಗೂ ಅವಕಾಶ ನೀಡದೆ ಆ ಚಿತ್ರ ಯಾರ ಬಳಿ ಇದೆಯೋ ಅವರೇ ಚಿತ್ರದ ಸಂಪೂರ್ಣ ಬಜೆಟನ್ನು ತುಂಬಿಸಬೇಕಾಗುತ್ತದೆ.[ದಾಂಪತ್ಯ ಜೀವನದ ಹೊಸ್ತಿಲಲ್ಲಿ ತುಳು ನಟ ಅರ್ಜುನ್ ಕಾಪಿಕಾಡ್]

Tulu Movie 'Dabak Daba Aisa' leaked Online

ಇಂಥದ್ದೊಂದು ಅವಕಾಶ ಸೈಬರ್ ಕ್ರೈಂ ಅಡಿಯಲ್ಲಿ ಬರುತ್ತದೆ ಎಂದು ಸೈಬರ್ ಕ್ರೈಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ಹಿಂದೆ ಶಾಮೀಲಾದ ಯಾರೇ ಇದ್ದರೂ ಅವರೆಲ್ಲರನ್ನೂ ಸೈಬರ್ ಕ್ರೈಂನಡಿ ಕಠಿಣ ಶಿಕ್ಷೆಗೊಳಪಡಿಸುವುದು ಖಚಿತ ಎಂದು ಪೊಲೀಸರು ತಿಳಿಸಿದ್ದಾರೆ.

ನಟ ಕಮ್ ನಿರ್ದೇಶಕ ದೇವದಾಸ್ ಕಾಪಿಕಾಡ್ ಖಂಡನೆ

ಚಿತ್ರ ಸೋರಿಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ನಟ ಕಮ್ ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಆರೋಪಿಗಳ ಕೃತ್ಯವನ್ನು ಖಂಡಿಸಿದ್ದಾರೆ.

"ಚಿತ್ರ ಸೋರಿಕೆ ಮಾಡಿರುವುದನ್ನು ತುಳುವರಾದ ನಾವೆಲ್ಲಾ ಒಟ್ಟಾಗಿ ಖಂಡಿಸಬೇಕಾಗಿದೆ. ಇದೆಲ್ಲಾ ತುಳು ಭಾಷೆಯನ್ನು ಕೊಲ್ಲುವ ಕೃತ್ಯವಾಗಿದ್ದು, ತುಳು ಸಿನಿಪ್ರಿಯರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ" ಎಂದು ಹೇಳಿಕೆ ನೀಡಿದ್ದಾರೆ.[ತುಳುನಾಡಿನಲ್ಲೇ ತುಳು ಸಿನೆಮಾ ಪ್ರದರ್ಶನಕ್ಕೆ ಕಂಟಕ]

Tulu Movie 'Dabak Daba Aisa' leaked Online

"ತುಳುವರು ತಮ್ಮ ಮೆಚ್ಚಿನ ತುಳು ಚಿತ್ರವನ್ನು ಮೊಬೈಲ್‍ ನಲ್ಲಿ ವೀಕ್ಷಿಸುವ ಜಾಯಮಾನದವರಲ್ಲ. ಇಂತಹ ಕೃತ್ಯಗಳಿಗೆ ಈ ಹಿಂದೆಯೂ ಅವರು ಅವಕಾಶ ನೀಡದೆ ಥಿಯೇಟರ್‍ಗಳಲ್ಲೇ ಚಿತ್ರ ವೀಕ್ಷಿಸಿ ಉದಾರತೆಯನ್ನು ಮೆರೆದಿದ್ದಾರೆ". ಎಂದು ದೇವದಾಸ್ ಕಾಪಿಕಾಡ್ ತಿಳಿಸಿದ್ದಾರೆ.

ಜಯಕಿರಣ ಫಿಲಂಸ್‍ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಪ್ರಕಾಶ್ ಪಾಂಡೇಶ್ವರ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿದ್ದು, ಆಗಸ್ಟ್ 5 ರಂದು ಇಡೀ ಕರಾವಳಿಯಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.

English summary
Tulu Movie 'Dabak Daba Aisa' release is scheduled for August 5th, has been leaked Online. Actor Devadas Kapikad, Actor Naveen D.Padil, Actor Bhojaraj Vamanjoor in the lead role. The movie is directed by Prakash Pandeshwar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada