twitter
    For Quick Alerts
    ALLOW NOTIFICATIONS  
    For Daily Alerts

    ಕೋಸ್ಟಲ್ ವುಡ್ ಗೆ ಕೋಲ್ಮಿಂಚಾಗುತ್ತಾ 'ದಬಕ್ ದಬಾ ಐಸಾ'

    By ಸುನಿ
    |

    ಬಹು ನಿರೀಕ್ಷೆಯುಳ್ಳ 'ದಬಕ್ ದಬಾ ಐಸಾ' ಚಿತ್ರ ಆಗಸ್ಟ್ 5ರಂದು ತೆರೆ ಕಾಣಲಿದ್ದು, ಕೆಲವು ಸಮಯದಿಂದ ಮಂಕು ಬಡಿದಂತಿರುವ ಕೋಸ್ಟಲ್ ವುಡ್ ಗೆ ಈ ಸಿನಿಮಾ ಮತ್ತೆ ಹೊಸ ಸಂಚಲನ ಮೂಡಿಸಲಿದೆ ಅನ್ನೋ ಭರವಸೆಯಲ್ಲಿದೆ ಚಿತ್ರತಂಡ.

    ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಸಿನಿಮಾವು ಮತ್ತೊಂದು ಹೊಸ ದಾಖಲೆಯತ್ತ ತುಳು ಚಿತ್ರರಂಗವನ್ನು ಕೊಂಡೊಯ್ಯಲು ಸಿದ್ಧವಾಗಿದ್ದು, ಮತ್ತೆ 'ಚಾಲಿಪೋಲಿಲು' ಚಿತ್ರತಂಡ ಕರಾವಳಿಗರಿಗೆ ಮೋಡಿ ಮಾಡಲು ತಯಾರಾಗಿದೆ.[ಬಾಕ್ಸಾಫೀಸಿನಲ್ಲೂ ಮುಗ್ಗರಿಸಿ, ತುಳು ಹಾಡನ್ನೂ ಕದ್ದ ಪ್ರಿನ್ಸ್ ತೆಲುಗು ಚಿತ್ರ]

    ಜಯಕಿರಣ ಫಿಲಂಸ್‍ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಪ್ರಕಾಶ್ ಪಾಂಡೇಶ್ವರ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿದ್ದು, ಸಂಪೂರ್ಣ ಹಾಸ್ಯಮಯ ಹಾಗೂ ಉತ್ತಮ ಸಾಮಾಜಿಕ ಸಂದೇಶವಿರುವ ಚಿತ್ರವಾಗಿ, ಕುಟುಂಬ ಸಮೇತ ಕುಳಿತು ನೋಡಬಹುದಾಗಿದೆ.

    ತುಳು ಚಿತ್ರರಂಗದಲ್ಲೇ 511 ದಿನಗಳ ಪ್ರದರ್ಶನ ಕಾಣುವ ಮೂಲಕ ಒಂದು ಅದ್ಭುತ ದಾಖಲೆ ಬರೆದಿರುವ 'ಚಾಲಿಪೋಲಿಲು' ತಂಡದ ಹೆಚ್ಚಿನ ಕಲಾವಿದರು ಈ ಚಿತ್ರದಲ್ಲೂ ಇದ್ದಾರೆ. ಉತ್ಪಲ್ ನಾಯನಾರ್ ಅವರ ಕ್ಯಾಮರಾ ಕೈಚಳಕ 'ದಬಕ್ ದಬಾ ಐಸಾ' ಚಿತ್ರದಲ್ಲೂ ಮುಂದುವರಿದಿದೆ. ಆದ್ದರಿಂದ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಿಲ್ಲ. ಮುಂದೆ ಓದಿ...

    ಆಡಿಯೋ ಸೂಪರ್ ಹಿಟ್

    ಆಡಿಯೋ ಸೂಪರ್ ಹಿಟ್

    'ದಬಕ್ ದಬಾ ಐಸಾ' ಚಿತ್ರದಲ್ಲಿ ಒಟ್ಟು ನಾಲ್ಕು ಸುಂದರ ಹಾಡುಗಳಿದ್ದು, ಈ ಪೈಕಿ 'ಹಾರ್ಟ್ ‍ದ ಬಸ್ ಮೋಕೆಡ್ ರಶ್', 'ಕ್ಷಣ ಕ್ಷಣ' ಮತ್ತು 'ದಬಕ್ ದಬಾ' ಹಾಡುಗಳು ಈಗಲೇ ಎಲ್ಲರ ಬಾಯಲ್ಲೂ ಗುನು-ಗುನಿಸುತ್ತಿವೆ.[ತುಳುನಾಡಿನಲ್ಲೇ ತುಳು ಸಿನೆಮಾ ಪ್ರದರ್ಶನಕ್ಕೆ ಕಂಟಕ]

    ತುಳುವರಿಗೆ ಭ್ರಮನಿರಸ

    ತುಳುವರಿಗೆ ಭ್ರಮನಿರಸ

    ಇತ್ತೀಚೆಗೆ ಬಿಡುಗಡೆಯಾಗಿದ್ದ ಕೆಲವು ತುಳು ಸಿನಿಮಾಗಳು ಪ್ರೇಕ್ಷಕರಲ್ಲಿ ಭ್ರಮನಿರಸನ ಉಂಟು ಮಾಡಿಸಿದ್ದು, ತುಳು ಚಿತ್ರಗಳ ಬಗ್ಗೆ ಮತ್ತೆ ಬೇಸರ ಮೂಡುವಂಥ ವಾತಾವರಣ ಸೃಷ್ಟಿಯಾಗಲು ಕಾರಣವಾಗಿವೆ. ಈ ಹಿನ್ನಲೆಯಲ್ಲಿ ಪ್ರೇಕ್ಷಕರೆಲ್ಲರೂ ‘ದಬಕ್ ದಬ ಐಸಾ' ಯಾವಾಗ ಬಿಡುಗಡೆಯಾಗುತ್ತದೋ ಎಂದು ಕಾದು ನಿಂತಿದ್ದು, ತುಳು ಸಿನಿಪ್ರೀಯರು ಈ ಚಿತ್ರದ ಮೇಲೆ ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    ನಿರೀಕ್ಷೆ ಹೆಚ್ಚಾಗಲು ಕಾರಣ

    ನಿರೀಕ್ಷೆ ಹೆಚ್ಚಾಗಲು ಕಾರಣ

    'ದಬಕ್ ದಬಾ ಐಸಾ' ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಲು ಪ್ರಮುಖವಾದ ಕಾರಣ 'ಚಾಲಿಪೋಲಿಲು' ಮಾಡಿದ ಸಾಧನೆ. ಇದೀಗ ಅದೇ ತಂಡದಿಂದ ಹೊರ ಬರುತ್ತಿರುವ ‘ದಬಕ್ ದಬಾ ಐಸಾ' ಚಿತ್ರ ಕೂಡ ಅದನ್ನು ಮೀರಿಸುವಂಥ ಸಿನಿಮಾ ಆಗಲಿದೆ ಎಂಬ ವಿಶ್ವಾಸವೂ ಪ್ರೇಕ್ಷಕರಲ್ಲಿದೆ. ಸುಮಾರು 2.10 ತಾಸು ಪ್ರೇಕ್ಷಕರಿಗೆ ಸಖತ್ ಮನೋರಂಜನೆ ನೀಡುವಲ್ಲಿ 'ದಬಕ್ ದಬಾ ಐಸಾ' ಯಶಸ್ವಿ ಆಗಲಿದೆ ಎಂಬ ವಿಶ್ವಾಸವನ್ನು ಕೂಡ ನಿರ್ಮಾಪಕ ಕಮ್ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ವ್ಯಕ್ತಪಡಿಸಿದ್ದಾರೆ.

    ಚಿತ್ರದ ತಾಂತ್ರಿಕ ವರ್ಗ

    ಚಿತ್ರದ ತಾಂತ್ರಿಕ ವರ್ಗ

    ಸಂಭಾಷಣೆ: ಶಶಿರಾಜ್ ಕಾವೂರು
    ಛಾಯಾಗ್ರಹಣ: ಉತ್ಪಲ್ ನಯನಾರ್
    ಸಂಗೀತ: ರಾಜೇಶ್ ಎಂ.ಮಂಗಳೂರು
    ಕಲೆ: ಲಕ್ಷ್ಮಣ್
    ಸಾಹಿತ್ಯ: ಚಿತ್ರದಲ್ಲಿ ಒಟ್ಟು 4 ಹಾಡು ಇದ್ದು ದೇವದಾಸ್ ಕಾಪಿಕಾಡ್, ಕದ್ರಿ ನವನೀತ ಶೆಟ್ಟಿ, ವೀರೇಂದ್ರ ಶೆಟ್ಟಿ ಕಾವೂರು, ಶಶಿರಾಜ್ ಕಾವೂರು ಸಾಹಿತ್ಯ ಒದಗಿಸಿದ್ದಾರೆ.

    ತಾರಾಗಣ

    ತಾರಾಗಣ

    ‘ಚಾಲಿಪೋಲಿಲು' ಚಿತ್ರದ ಬಳಿಕ 'ತೆಲಿಕೆದ ಬೊಳ್ಳಿ' ದೇವದಾಸ್ ಕಾಪಿಕಾಡ್, ನಟ ನವೀನ್ ಡಿ ಪಡೀಲ್, ನಟ ಅರವಿಂದ ಬೋಳಾರ್, ನಟ ಭೋಜರಾಜ ವಾಮಂಜೂರು, ಹಾಗೂ ಸುಂದರ ರೈ ಮಂದಾರ ಮತ್ತೊಮ್ಮೆ ಒಟ್ಟಾಗಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ನಟಿ ಶೀತಲ್ ಅವರು ಈ ಚಿತ್ರದ ಮೂಲಕ ನಾಯಕಿಯಾಗಿ ಕೋಸ್ಟಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ.

    ಕಡಿಮೆ ಬಜೆಟ್

    ಕಡಿಮೆ ಬಜೆಟ್

    ಸುಮಾರು 60 ಲಕ್ಷ ರೂಪಾಯಿ ಬಜೆಟ್ ನಲ್ಲಿ ತಯಾರಾದ 'ದಬಕ್ ದಬಾ ಐಸಾ' ಚಿತ್ರ 21 ದಿನಗಳ ಕಾಲ ಒಂದೇ ಹಂತದಲ್ಲಿ ಮಂಗಳೂರು ಸುತ್ತಮುತ್ತ, ಸುರತ್ಕಲ್, ಬೋಂದೆಲ್, ಹಾಗೂ ಶಕ್ತಿನಗರದಲ್ಲಿ ಚಿತ್ರೀಕರಣ ನಡೆಸಿದೆ. ಈ ಚಿತ್ರ ಸಂಪೂರ್ಣ ಹಾಸ್ಯಮಯವಾಗಿದ್ದು, ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅಂಶಗಳಿವೆ.[400 ದಿನ ಪೂರೈಸಿ ದಾಖಲೆ ನಿರ್ಮಿಸಿದ ಕರಾವಳಿಯ ಹೆಮ್ಮೆಯ 'ಚಾಲಿಪೋಲಿಲು']

    English summary
    Tulu Movie 'Dabak Daba Aisa' all set to releasing on August 5th. Actor Devadas Kapikad, Actor Naveen D.Padil, Actor Bhojaraj Vamanjoor, Actress Sheethal in the lead role. The movie is directed by Prakash Pandeshwar.
    Tuesday, July 12, 2016, 16:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X