Don't Miss!
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- News
ಬೆಂಗಳೂರು ಏರ್ಪೋರ್ಟ್ ಭದ್ರತೆಗೆ 1,700 ಹೆಚ್ಚುವರಿ ಸಿಬ್ಬಂದಿ
- Sports
ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾರ್ಚ್ 19 ರಂದು ತುಳು ಸಿನಿಮಾ 'ವಿಕ್ರಾಂತ್' ಧ್ವನಿ ಸುರುಳಿ ಬಿಡುಗಡೆ
ರಾಧಾ ನಿಸರ್ಗ ಕಂಬೈನ್ಸ್ ಲಾಂಛನದಲ್ಲಿ ನವೀನ್ ಮಾರ್ಲ ಕೊಡಂಗೆ ನಿರ್ದೇಶನದ 'ವಿಕ್ರಾಂತ್' ತುಳು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಎಪ್ರಿಲ್ 23ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.
ವಿಕ್ರಾಂತ್ ಸಿನಿಮಾಕ್ಕೆ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಬಂಟ್ವಾಳ ಪರಿಸರ, ಕಳಸ, ಹೊರನಾಡು, ಉಪ್ಪಿನಂಗಡಿ, ಬಿ.ಸಿ ರೋಡ್ ಮೊದಲಾದ ಕಡೆಗಳಲ್ಲಿ ಸಿನಿಮಾಕ್ಕೆ ಚಿತ್ರೀಕರಣ ನಡೆದಿದೆ. ಈ ಸಿನಿಮಾದಲ್ಲಿ ಬಹುತೇಕ ಯಕ್ಷಗಾನ ಕಲಾವಿದರು ಬಣ್ಣ ಹಚ್ಚಿದ್ದು ವಿಶೇಷ.
ಕುಡ್ಲು
ಟಾಕೀಸ್‌ನಲ್ಲಿ
'ಪೆಪ್ಪೆರೆರೆ
ಪೆರೆರೆರೆ'
ತುಳು
ಸಿನಿಮಾ
ಬಿಡುಗಡೆ
ಖ್ಯಾತ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಯಕ್ಷಗಾನ ಕಲಾವಿದರಾದ ರಾಧಾಕೃಷ್ಣ ನಾವಡ ಮಧೂರು, ಬಂಟ್ವಾಳ ಜಯರಾಮ ಆಚಾರ್ಯ, ಕಡಬ ದಿನೇಶ್ ರೈ, ಕೋಡ ಪದವು ದಿನೇಶ್ ಶೆಟ್ಟಿಗಾರ್, ಪೂರ್ಣಿಮಾ ಯತೀಶ್ ರೈ ಮೊದಲಾದವರು ಬಣ್ಣ ಹಚ್ಚಿದ್ದಾರೆ.
ಇನ್ನುಳಿದಂತೆ ರಂಗ ಭೂಮಿಯ ಖ್ಯಾತ ಕಲಾವಿದರಾದ ಅರವಿಂದ ಬೋಳಾರ್, ರಮೇಶ್ ರೈ ಕುಕ್ಕುವಳ್ಳಿ ಎಚ್.ಕೆ ನಯನಾಡು, ಕೊಡಮಣ್ಣ್ ಕಾಂತಪ್ಪ ಶೆಟ್ಟಿ. ಅಶೋಕ್ ಭಟ್ ಕಾಪು ಕಲ್ಯ, ಸುನೀಲ್ ಕೆ. ಆರ್, ಸಂದೀಪ್ ಶೆಟ್ಟಿ ರಾಯಿ, ರಾಕೇಶ್ ಶೆಟ್ಟಿ, ಬಿಸಿ ರೋಡ್, ಸುನೀತಾ ಎಕ್ಕೂರ್, ಪವಿತ್ರ ಹೆಗ್ಡೆ, ಶೃತಿ ಭಟ್ ಇದ್ದಾರೆ. ನಾಯಕ ನಟನಾಗಿ ವಿನೋದ್ ಶೆಟ್ಟಿ ಮತ್ತು ನಾಯಕಿಯಾಗಿ ಶೀತಲ್ ನಾಯಕ್ ಅಭಿನಯಿಸಿದ್ದಾರೆ.
ಪಂಜಾಬಿ
ಚಿತ್ರರಂಗಕ್ಕೆ
ಪಾದಾರ್ಪಣೆ
ಮಾಡಲಿದ್ದಾರೆ
ಕರಾವಳಿಯ
ಬೆಡಗಿ
ಛಾಯಾಗ್ರಹಣ - ರವಿ ಸುವರ್ಣ
ಸಾಹಿತ್ಯ - ಎಚ್.ಕೆ ನಯನಾಡು
ನೃತ್ಯ ನಿರ್ದೇಶನ - ವಿನೋದ್ ರಾಜ್ ಬಂಟ್ವಾಳ, ಅನಿಲ್ ನಾಯಕ್,
ಸಂಕಲನ - ಮಹಾಬಲೇಶ್ವರ ಹೊಳ್ಳ
ಕಲೆ - ದಿನೇಶ್ ಸುವರ್ಣ ರಾಯಿ
ಯುನಿಟ್ - ಜಿ.ಆರ್.ಕೆ ಸುರತ್ಕಲ್
ಸಂಗೀತ, ಸಾಹಿತ್ಯ - ಭಾಸ್ಕರ್ ರಾವ್ ಬಿಸಿ ರೋಡ್
ಧ್ವನಿ ಮುದ್ರಣ - ವೈಭವೀ ಆಡಿಯೋ ಸ್ಟುಡಿಯೋ ಬಿ.ಸಿ ರೋಡ್
ಅನುರಾಧ ಭಟ್, ಭಾಸ್ಕರ್ ರಾವ್ ಹಾಗೂ ಯಕ್ಷಗಾನ ಭಾಗವತ ಗಿರೀಶ್ ರೈ ರವಿ ಕಕ್ಕೆಪದವು ಹಾಡಿದ್ದಾರೆ. ಕಥೆ ಸಂಭಾಷಣೆ ನಿರ್ದೇಶನ ನವೀನ್ ಮಾರ್ಲ ಕೊಡಂಗೆ. ರಾಜೇಂದ್ರ ಯಶು ಬೆದ್ರೋಡಿ ಸಿನಿಮಾದ ನಿರ್ಮಾಪಕರಾಗಿದ್ದಾರೆ.

ತನ್ನ ಸಂಸಾರದ ಬಗ್ಗೆ ಚಿಂತಿಸದೆ, ಸಮಾಜ ಸೇವೆಗೆ ತನ್ನ ಸರ್ವಸ್ವವನ್ನು ಮುಡಿಪಾಗಿಸುವ ಯುವಕನ ಜೀವನದಲ್ಲಿ ನಡೆಯುವ ಘಟನೆಗಳನ್ನು ಬಿಂಬಿಸುವ ಕತೆಯನ್ನು 'ವಿಕ್ರಾಂತ್' ಸಿನಿಮಾ ಹೊಂದಿದೆ.
Recommended Video
ಅಂದ್ಹಾಗೆ, ವಿಕ್ರಾಂತ್ ತುಳು ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಮಾರ್ಚ್ 19 ರಂದು ಶುಕ್ರವಾರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಧ್ವನಿ ಬಿಡುಗಡೆಯ ಸಮಾರಂಭದಲ್ಲಿ ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ಸಂಜೀವ ಮಠಂದೂರು, ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ರವಿ ಕಕ್ಕೆಪದವು, ಮೊದಲಾದವರು ಭಾಗವಹಿಸಲಿದ್ದಾರೆ.