»   » ಟಿವಿ-9 ಮಾಜಿ ನಿರೂಪಕ ರೆಹಮಾನ್ ಕೊಟ್ಟ ಬ್ರೇಕಿಂಗ್ ನ್ಯೂಸ್

ಟಿವಿ-9 ಮಾಜಿ ನಿರೂಪಕ ರೆಹಮಾನ್ ಕೊಟ್ಟ ಬ್ರೇಕಿಂಗ್ ನ್ಯೂಸ್

Posted By:
Subscribe to Filmibeat Kannada

ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದಿರುವ ಸಾಕಷ್ಟು ಕಲಾವಿದರನ್ನ ನಾವು-ನೀವೆಲ್ಲ ನೋಡಿದ್ದೀರಿ. ಅದೇ ರೀತಿ ನ್ಯೂಸ್ ಆಂಕರ್ ಗಳು ಕೂಡ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿರುವುದು ಟ್ರೆಂಡ್ ಆಗಿದೆ.

ಮೊನ್ನೆ ಮೊನ್ನೆಯಷ್ಟೆ ಬಿಟಿವಿ ಸುದ್ದಿ ನಿರೂಪಕ ಚಂದನ್ ಶರ್ಮಾ 'ಧ್ವನಿ' ಚಿತ್ರದ ಮೂಲಕ ಚೊಚ್ಚಲ ಸಿನಿಮಾಗೆ ನಾಯಕನಾಗಿ ಪಾದಾರ್ಪಣೆ ಮಾಡಿದರು. ಈಗ ಈ ಸಾಲಿಗೆ ಟಿವಿ-9 ವಾಹಿನಿಯ ಮಾಜಿ ಸುದ್ದಿ ನಿರೂಪಕ ಹಾಗೂ 'ಬಿಗ್ ಬಾಸ್' ಖ್ಯಾತಿಯ ರೆಹಮಾನ್ ಹಾಸನ್ ಕೂಡ ಸೇರಿಕೊಂಡಿದ್ದಾರೆ.

ಹೌದು, ರೆಹಮಾನ್ ಈಗ ಹೀರೋ ಆಗಿ ಪ್ರಮೋಟ್ ಆಗಿದ್ದಾರೆ. ಇತ್ತೀಗಷ್ಟೇ ಸಿನಿಮಾ ಸೆಟ್ಟೇರಿದ್ದು, ಆ ಸಿನಿಮಾ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ....

ರೆಹಮಾನ್ ಇನ್ಮುಂದೆ ಹೀರೋ!

ಇಷ್ಟು ದಿನ ಸುದ್ದಿ ನಿರೂಪಕ, ಟಿವಿ ನಿರೂಪಕ ಎನಿಸಿಕೊಳ್ಳುತ್ತಿದ್ದ ರೆಹಮಾನ್ ಹಾಸನ್ ಈಗ ನಾಯಕ ನಟ ಆಗಿ ಪ್ರಮೋಟ್ ಆಗಿದ್ದಾರೆ. ಹೀಗಾಗಿ, ಇನ್ಮುಂದೆ ರೆಹಮಾನ್ ಅವರು ಹೀರೋ ಎಲ್ಲರೂ ನೆನಪಿಟ್ಟುಕೊಳ್ಳಿ.

ಯಾವುದು ಆ ಚಿತ್ರ?

ರೆಹಮಾನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರದ ಹೆಸರು 'ಗರ'. ಆರ್ಯನ್ ಎಂಬ ಯುವ ಪ್ರತಿಭೆ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದು, ಆವಂತಿಕ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ.

ಕನ್ನಡಕ್ಕೆ ಬಂದ ಜಾನಿ ಲಿವರ್!

ಬಾಲಿವುಡ್ ಖ್ಯಾತ ಹಾಸ್ಯ ಕಲಾವಿದ ಜಾನಿ ಲಿವರ್ ಇದೇ ಮೊದಲ ಬಾರಿಗೆ 'ಗರ' ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಜಾನಿ ಲಿವರ್ ಕಾಮಿಡಿಯನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

'ಗರ' ಚಿತ್ರದ ಕುರಿತು.....

ಅಂದ್ಹಾಗೆ, 'ಗರ' ಚಿತ್ರಕ್ಕೆ ಮುರುಳಿಕೃಷ್ಣ ಕಥೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ವೇಣು ಛಾಯಗ್ರಾಹಕರಾಗಿ ಕೆಲಸ ನಿರ್ವಹಿಸಲಿದ್ದಾರೆ. ಮಂಜುಳ ಗುರು ರಾಜ್ ಅವರ ಮಗ ಸಾಗರ್ ಈ ಚಿತ್ರಕ್ಕೆ ಸಂಗೀತ ಒದಗಿಸಲಿದ್ದಾರೆ.

ಚಿತ್ರೀಕರಣದಲ್ಲಿ 'ಗರ'....!

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ 'ಗರ' ಚಿತ್ರ ಸೆಟ್ಟೇರಿದ್ದು, ಈಗಾಗಲೇ ಶೂಟಿಂಗ್ ಶುರು ಮಾಡಿದೆ. ಒಟ್ನಲ್ಲಿ, ರೆಹಮಾನ್ ನಾಯಕನಾಗುವ ಬಹು ದಿನಗಳ ಕನಸು, ಈಗ ಈಡೇರಿದೆ.

English summary
'Gara' was launched last week and the film marks the debut of well known news anchor Rehman as a hero. The film is being written and directed and produced by Muralikrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada