»   » 'ದೃಶ್ಯಂ' ರೀಮೇಕ್ ಗೆ ರಜನಿ NO ಅಂದಿದ್ಯಾಕೆ?

'ದೃಶ್ಯಂ' ರೀಮೇಕ್ ಗೆ ರಜನಿ NO ಅಂದಿದ್ಯಾಕೆ?

Posted By:
Subscribe to Filmibeat Kannada

ಮಾಲಿವುಡ್ ಗಲ್ಲಪೆಟ್ಟಿಗೆಯನ್ನ ಲೂಟಿ ಹೊಡೆದ 'ದೃಶ್ಯಂ' ಸಿನಿಮಾ 'ಪಾಪನಾಸಂ' ಆಗಿ ಈ ವಾರ ತಮಿಳು ಸಿನಿ ಅಂಗಳದಲ್ಲಿ ರಿಲೀಸ್ ಆಗಿದೆ. ಕಮಲ್ ಹಾಸನ್ ಮತ್ತು ಗೌತಮಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಇದೀಗ ಕಾಲಿವುಡ್ಡಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಈ ನಡುವೆ ನಿರ್ದೇಶಕ ಜೀತು ಜೋಸೆಫ್ 'ಪಾಪನಾಸಂ' ಮೇಕಿಂಗ್ ನ ಒಂದು ಇಂಟ್ರೆಸ್ಟಿಂಗ್ ಗುಟ್ಟನ್ನ ಬಿಟ್ಟುಕೊಟ್ಟಿದ್ದಾರೆ. ಕಮಲ್ ಹಾಸನ್ ಬದಲು 'ಪಾಪನಾಸಂ' ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಬೇಕಾಗಿತ್ತು.

Two scenes which made Rajinikanth to reject Drishyam remake

'ದೃಶ್ಯಂ' ಚಿತ್ರವನ್ನ ನೋಡಿ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ, ನಟಿಸುವುದಕ್ಕೆ ಒಪ್ಪಿಕೊಳ್ಳಲಿಲ್ಲ.! ಅದಕ್ಕೆ ಕಾರಣ ಎರಡು ದೃಶ್ಯಗಳು.!

ಹೌದು, 'ದೃಶ್ಯಂ' ಸಿನಿಮಾ ರಜನಿಕಾಂತ್ ಗೆ ಇಷ್ಟವಾಗಿದ್ದರೂ, ಸಿನಿಮಾದಲ್ಲಿ ಪೊಲೀಸ್ ರಿಂದ ಒದೆ ತಿನ್ನುವ ದೃಶ್ಯ ಮತ್ತು ಚಿತ್ರದ ಕ್ಲೈಮ್ಯಾಕ್ಸ್ ನಿಂದಾಗಿ 'ಪಾಪನಾಸಂ'ನಲ್ಲಿ ನಟಿಸುವುದಕ್ಕೆ ರಜನಿ ಹಿಂದೇಟು ಹಾಕಿದರು. [ಗೆಲುವಿಗಾಗಿ ಸೂಪರ್ ಸ್ಟಾರ್ ರಜನಿ ಮಾಡಿರುವ ಪ್ಲಾನ್ ಇದು...]

Two scenes which made Rajinikanth to reject Drishyam remake

ರಜನಿಕಾಂತ್ ಮತ್ತೊಬ್ಬರಿಂದ ಹಿಗ್ಗಾಮುಗ್ಗಾ ಒದೆ ತಿನ್ನುವ ದೃಶ್ಯವನ್ನ ಅಭಿಮಾನಿಗಳು ಖಂಡಿತ ಒಪ್ಪಿಕೊಳ್ಳುವುದಿಲ್ಲ ಅಂತ 'ಪಾಪನಾಸಂ' ಚಿತ್ರವನ್ನ ರಜನಿಕಾಂತ್ ಕೈಬಿಟ್ಟರಂತೆ. ರಜನಿ ಬಿಟ್ಟ ಪಾತ್ರವನ್ನ ಇದೀಗ ಕಮಲ್ ಹಾಸನ್ ಸೊಗಸಾಗಿ ನಿರ್ವಹಿಸಿದ್ದಾರೆ.

English summary
Super Star Rajinikanth rejected an offer to star in 'Drishyam' remake due to two scenes. Director Jeethu Joseph too agreed with Rajinikanth and then casted Kamal Haasan.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X