For Quick Alerts
  ALLOW NOTIFICATIONS  
  For Daily Alerts

  ಇನ್‌ಸ್ಟಾಗ್ರಾಂನಲ್ಲಿ ಹೆಸರು ಬದಲಿಸಿದ ಶ್ರದ್ಧಾ ಶ್ರೀನಾಥ್: ಕಾರಣ ಏನು?

  |

  ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಗರಂ ಆಗಿದ್ದಾರೆ. ತಮ್ಮ ಹೆಸರನ್ನು ತಪ್ಪಾಗಿ ಬರೆದವರ ಬಗ್ಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೆಸರು ಬದಲಿಸಿರುವುದಾಗಿ ಹೇಳಿದ್ದಾರೆ.

  ಕನ್ನಡದ 'ಯೂಟರ್ನ್' ಸಿನಿಮಾದಿಂದ ನಟಿ ಶ್ರದ್ಧಾ ಶ್ರೀನಾಥ್‌ಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ಮುಂದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಪಂಚಭಾಷಾ ತಾರೆ ಅನ್ನಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಶ್ರದ್ಧಾ ಶ್ರೀನಾಥ್, ಶ್ರದ್ಧಾ ಕಪೂರ್, ಶ್ರದ್ಧಾ ದಾಸ್ ಅಂತ ಸಾಕಷ್ಟು ನಟಿಯರಿದ್ದಾರೆ. ಆದರೂ ಆಯಾ ಕೇಳಿದ ತಕ್ಷಣ ಆಯಾ ನಟಿಯರು ಕಣ್ಣ ಮುಂದೆ ಬರ್ತಾರೆ. ಆದರೆ ಇತ್ತೀಚೆಗೆ ಡಿಜಿಟಲ್ ಮಾಧ್ಯಮವೊಂದರ ಟ್ವಿಟ್ಟರ್‌ ಪೇಜ್‌ನಲ್ಲಿ ಶ್ರದ್ಧಾ ಶ್ರೀನಾಥ್ ಫೋಟೊ ಹಾಕಿ ಶ್ರದ್ಧಾ ದಾಸ್ ಎಂದು ಬರೆದಿದ್ದಾರೆ. ಇದನ್ನು ನೋಡಿ ಶ್ರದ್ಧಾ ಶ್ರೀನಾಥ್ ಅಪ್‌ಸೆಟ್ ಆಗಿದ್ದು, ಸಖತ್ ಕೌಂಟರ್ ಕೊಟ್ಟಿದ್ದಾರೆ.

  'ಗೋದ್ರಾ' ಟೈಟಲ್ ಬದಲಾಯಿಸಲು ಸತೀಶ್ ನೀನಾಸಂ ನಿರ್ಧಾರ'ಗೋದ್ರಾ' ಟೈಟಲ್ ಬದಲಾಯಿಸಲು ಸತೀಶ್ ನೀನಾಸಂ ನಿರ್ಧಾರ

  "ಯಾರಪ್ಪಾ ಈ ಖಾತೆಯನ್ನು ನೋಡಿಕೊಳ್ಳೋದು? ಲಕ್ಷಾಂತರ ಜನ ನಿಮ್ಮನ್ನು ಫಾಲೋ ಮಾಡುತ್ತಿದ್ದಾರಲ್ಲಾ" ಎಂದು ವ್ಯಂಗ್ಯ ಮಾಡಿದ್ದಾರೆ. "ನನ್ನ ಹೆಸರನ್ನು ಯಾರೆಲ್ಲಾ ಸರಿಯಾಗಿ ಹೇಳುತ್ತಿದ್ದಾರೋ, ಬರಿತ್ತಿದ್ದಾರೋ ಅವರಿಗೆಲ್ಲಾ ಧನ್ಯವಾದಗಳು. ದಾಸ್ ಅಥವಾ ಕಪೂರ್ ಅಂತ ಕೀ ಬೋರ್ಡ್ ತೋರಿಸುತ್ತಿದ್ದರೂ ನನ್ನ ಹೆಸರನ್ನು ಸರಿಯಾಗಿ ಬರೆಯುತ್ತಿರುವವರಿಗೆ ಧನ್ಯವಾದಗಳು. ಶ್ರೀನಾಥ್ ಅನ್ನುವುದು ಸರಿಯಾದ ಹೆಸರು ಎಂದು ನಿಮ್ಮ ಮನಸ್ಸಿಗೆ ಬರುತ್ತಿದ್ದರೆ ಅಷ್ಟು ಸಾಕು. ಅದೇ ನೀವು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಗೆ ಸಾಕ್ಷಿ".

  ಇನ್ನು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೆಸರು ಬದಲಿಸಿಕೊಂಡಿರುವುದನ್ನು ಟ್ವೀಟ್ ಮಾಡಿ ಶ್ರದ್ಧಾ ಶ್ರೀನಾಥ್ ತಿಳಿಸಿದ್ದಾರೆ."ಇನ್‌ಸ್ಟಾಗ್ರಾಂನಲ್ಲಿ ನನ್ನ ಹೆಸರನ್ನು ಶ್ರದ್ಧಾ ರಮಾ ಶ್ರೀನಾಥ್ ಎಂದು ಬದಲಿಸಿಕೊಂಡಿದ್ದೇನೆ. ಟ್ವಿಟ್ಟರ್‌ನಲ್ಲೂ ಇದೇ ರೀತಿ ಬದಲಿಸಿಕೊಂಡರೆ ಬೆಟರ್ ಅನ್ನಿಸುತ್ತೆ. ರಮಾ ನನ್ನ ತಾಯಿಯ ಹೆಸರು. ಹಾಗಾಗಿ ಇನ್ನು ಮುಂದೆ ನನ್ನನ್ನು ಶ್ರದ್ಧಾ ರಮಾ ಶ್ರೀನಾಥ್ ಎಂದು ಪರಿಚಯಿಸಿಕೊಳ್ಳುತ್ತೇನೆ. ನೀವೇ ನೋಡುತ್ತೀರಾ" ಎಂದು ಟ್ವೀಟ್ ಮಾಡಿದ್ದಾರೆ.

  ಶ್ರದ್ಧಾ ಶ್ರೀನಾಥ್ ಎಂದರೆ ಸಾಕು

  ಸರಣಿ ಟ್ವೀಟ್‌ಗಳನ್ನು ಮುಂದುವರೆಸಿರೋ ಶ್ರದ್ಧಾ ಶ್ರೀನಾಥ್, "ನಾನು ಹೆಸರು ಬದಲಿಸಿಕೊಂಡಿರುವುದರ ಬಗ್ಗೆ ನೀವು ಜಾಸ್ತಿ ಯೋಚಿಸಬೇಡಿ. ನನ್ನನ್ನು ಶ್ರದ್ಧಾ ದಾಸ್ ಅಂತ ಶ್ರದ್ಧಾ ಕಪೂರ್ ಅಂತ ಅಲ್ಲದೇ ಶ್ರದ್ಧಾ ಶ್ರೀನಾಥ್ ಎಂದು ಕರೆದರೆ ಸಾಕು. ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳು ನನ್ನ ಹೆಸರನ್ನು ಸರಿಯಾಗಿ ಬರೆಯುತ್ತಿಲ್ಲ. ಆದರೆ ಇನ್ನಾದರೂ ನನ್ನ ಹೆಸರನ್ನು ಸರಿಯಾಗಿ ಬರೆಯಿರಿ" ಅಂತ ತಿರುಗೇಟು ಕೊಟ್ಟಿದ್ದಾರೆ.

  ಸಂಕಷ್ಟದಲ್ಲಿರುವ ಕನ್ನಡ ಸಹಾಯಕ ನಿರ್ದೇಶಕರ ನೆರವಿಗೆ ನಿಂತ ನಟಿ ಶ್ರದ್ಧಾ ಶ್ರೀನಾಥ್ಸಂಕಷ್ಟದಲ್ಲಿರುವ ಕನ್ನಡ ಸಹಾಯಕ ನಿರ್ದೇಶಕರ ನೆರವಿಗೆ ನಿಂತ ನಟಿ ಶ್ರದ್ಧಾ ಶ್ರೀನಾಥ್

  ಟ್ವಿಟ್ಟರ್‌ನಿಂದ ಬ್ರೇಕ್

  ಶ್ರದ್ಧಾ ಟ್ವೀಟ್‌ಗಳಿಗೆ ಉತ್ತಮ ಬೆಂಬಲ ಸಿಕ್ಕಿದ್ದು, ನಾವು ಶ್ರದ್ಧಾ ಶ್ರೀನಾಥ್ ಅಂತಲೇ ಕರಿತ್ತೀವಿ. ನನ್ನ ಫೋನ್ ಕೀಬೋರ್ಡ್ ಕೂಡ ಅದೇ ತೋರಿಸುತ್ತಿದೆ ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡಿ "ಸರಿ ಇನ್ನು 4 ತಿಂಗಳು ನಾನು ಟ್ವಿಟ್ಟರ್‌ನಲ್ಲಿ ಸಿಗಲ್ಲ, ನಿಮ್ಮ ರಿಪ್ಲೇಗಳಿಗೆ ಧನ್ಯವಾದಗಳು ಬೈ" ಎಂದು ಹೇಳಿದ್ದಾರೆ.

   ಒಟಿಟಿಯಲ್ಲಿ ಶ್ರದ್ಧಾ 'ಡಿಯರ್ ವಿಕ್ರಂ'

  ಒಟಿಟಿಯಲ್ಲಿ ಶ್ರದ್ಧಾ 'ಡಿಯರ್ ವಿಕ್ರಂ'

  ಶ್ರದ್ಧಾ ಶ್ರೀನಾಥ್ ಸಿನಿಮಾಗಳ ಬಗ್ಗೆ ಹೇಳೋದಾದರೆ ಇತ್ತೀಚೆಗೆ ಆಕೆ ನಟಿಸಿದ್ದ ಕನ್ನಡ ಸಿನಿಮಾ 'ಡಿಯರ್ ವಿಕ್ರಂ' ನೇರವಾಗಿ ಒಟಿಟಿಗೆ ಬಂದಿತ್ತು. ಕೆ. ಎಸ್ ನಂದೀಶ್ ನಿರ್ಮಿಸಿ, ನಿರ್ದೇಶನ ಮಾಡಿದ್ದ ಚಿತ್ರದಲ್ಲಿ ನೀನಾಸಂ ಸತೀಶ್ ಜೋಡಿಯಾಗಿ ಶ್ರದ್ಧಾ ಮಿಂಚಿದ್ದರು.

   'ರುದ್ರ ಪ್ರಯಾಗ' ಯಾವಾಗ?

  'ರುದ್ರ ಪ್ರಯಾಗ' ಯಾವಾಗ?

  ರಿಷಬ್ ಶೆಟ್ಟಿ ಬಹಳ ಹಿಂದೆಯೇ ಘೋಷಿಸಿರುವ 'ರುದ್ದಪ್ರಯಾಗ' ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ಆಯ್ಕೆ ಆಗಿದ್ದಾರೆ. ಕೊರೊನಾ ಹಾವಳಿ ಹಿನ್ನಲೆ ಈ ಸಿನಿಮಾ ತಡವಾಗಿತ್ತು. 'ಕಲಿಯುಗಂ' ಅನ್ನುವ ತಮಿಳು ಚಿತ್ರವೊಂದರಲ್ಲಿ ಯೂ ಟರ್ನ್ ಬೆಡಗಿ ನಟಿಸುತ್ತಿದ್ದಾರೆ.

  Recommended Video

  Kranti Release Date | ಕ್ರಾಂತಿ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಅಪ್ಡೇಟ್ | Darshan Thoogudeepa *Sandalwood
  English summary
  U-Turn Actress Shraddha Srinath Announces A Name Change On Social Media. Know More
  Thursday, August 4, 2022, 13:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X