For Quick Alerts
  ALLOW NOTIFICATIONS  
  For Daily Alerts

  'ಉಡುಂಬಾ'ನ ಹಾಡುಗಳು ಆರ್ಭಟ ಆರಂಭ

  By Bharath Kumar
  |

  'ಗೂಳಿಹಟ್ಟಿ' ಖ್ಯಾತಿಯ ಪವನ್ ಶೌರ್ಯ ಮತ್ತೊಂದು ಆಕ್ಷನ್ ಎಂಟರ್ ಟೈನ್ಮೆಂಟ್ ಮೂಲಕ ಮತ್ತೆ ಸದ್ದು ಮಾಡ್ತಿದ್ದಾರೆ. ಈಗಾಗಲೇ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಗಳಿಂದ ವಿಶೇಷವೆನಿಸಿಕೊಂಡಿರುವ 'ಉಡುಂಬಾ' ಸಿನಿಮಾ ಈಗ ಆಡಿಯೋ ಬಿಡುಗಡೆ ಮಾಡಿದೆ.

  ಚಾಮರಾಜಪೇಟೆಯಲ್ಲಿರುವ ಕನ್ನಡ ಚಲನಚಿತ್ರ ಕಲಾವಿದರ ಭವನದಲ್ಲಿ ನಿನ್ನೆ ಸಂಜೆ (ಸೋಮವಾರ) 'ಉಡುಂಬಾ' ಚಿತ್ರ ಧ್ವನಿ ಸುರಳಿ ರಿಲೀಸ್ ಮಾಡಲಾಯಿತು. ನೂರಾರು ಅಭಿಮಾನಿಗಳು, ಚಿತ್ರತಂಡ, ಇದಕ್ಕೆ ಸಾಕ್ಷಿಯಾಯಿತು.

  ಚಿತ್ರದ ನಾಯಕ ಪವನ್ ಶೌರ್ಯ, ನಾಯಕಿ ಚಿರಾಶ್ರೀ ಅಂಚನ್, ನಿರ್ದೇಶಕ ಶಿವರಾಜ್, ಸಂಗೀತ ನಿರ್ದೇಶಕ ವಿನೀತ್ ರಾಜ್ ಮೆನನ್, ನಿರ್ಮಾಪಕರಾದ ಹನುಮಂತ ರಾವ್, ವೆಂಕಟರೆಡ್ಡಿ ಹಾಗೂ ಸಹ ನಿರ್ಮಾಪಕ ಮಾನಸ ಮಹೇಶ್, ಯುವ ನಿರ್ದೇಶಕರಾದ 'ಬಹುದ್ಧೂರ್' ಚೇತನ್ ಕುಮಾರ್, 'ಅಲೆಮಾರಿ' ಖ್ಯಾತಿಯ ಸಂತು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, 'ಮುದ್ದು ಮನಸೇ' ಖ್ಯಾತಿಯ ವಿನೀತ್ ರಾಜ್ ಮ್ಯುಸಿಕ್ ಕಂಪೋಸ್ ಮಾಡಿದ್ದಾರೆ. ಚೇತನ್ ಕುಮಾರ್, 'ಅಲೆಮಾರಿ' ಖ್ಯಾತಿಯ 'ಸಂತು' ಹಾಗೂ ಲೋಕೇಶ್ ಕೃಷ್ಣ ಸಾಹಿತ್ಯ ಬರೆದಿದ್ದಾರೆ.

  ಈ ಐದು ಹಾಡಿನಲ್ಲಿ ಎರಡು ರೊಮ್ಯಾಂಟಿಕ್ ಹಾಡುಗಳಿದ್ದು, ಎರಡು ಭರ್ಜರಿ ಮಾಸ್ ಸಾಂಗ್ ಇದೆ. ಇನ್ನೊಂದು ಐಟಂ ಸಾಂಗ್ ಇದೆ. ಈ ಐಟಂ ಹಾಡಿನಲ್ಲಿ 'ಬಿಗ್ ಬಾಸ್' ಖ್ಯಾತಿಯ ಸಂಜನಾ ಹೆಜ್ಜೆ ಹಾಕಿದ್ದಾರೆ. ಒಂದಕ್ಕಿಂತ ಒಂದು ಹಾಡುಗಳು ವಿಭಿನ್ನ ಮತ್ತು ಹೊಸತನದಿಂದ ಕೂಡಿದ್ದು, 'ಉಡುಂಬಾ' ಚಿತ್ರದ ಹಾಡುಗಳನ್ನ ಆನಂದ್ ಆಡಿಯೋ ಸಂಸ್ಥೆ ಖರೀದಿಸಿದೆ.

  Udumba movie audio release

  ಇನ್ನುಳಿದಂತೆ 'ಉಡುಂಬಾ' ಪಕ್ಕಾ ಮಾಸ್ ಮನರಂಜನೆಯ ಸಿನಿಮವಾಗಿದ್ದು, ನಾಯಕ ಪವನ್ ಶೌರ್ಯ ಘರ್ಜಿಸಲಿದ್ದಾರೆ ಎನ್ನುವುದಕ್ಕೆ ಟ್ರೈಲರ್ ಸಾಕ್ಷಿಯಾಗಿದೆ. ಇನ್ನು 'ಹುಲಿರಾಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಚಿರಶ್ರೀ, ಇದಕ್ಕೂ ಮೊದಲು 'ಪವಿತ್ರ', 'ರೊಟ್ಟಿ ರಂಭಾ' ಎಂಬ ತುಳು ಸಿನಿಮಾ ಮಾಡಿದ್ದರು. ಇದೀಗ, ತಮಿಳು ಮತ್ತು ತೆಲುಗು ಭಾಷೆಯಲ್ಲೂ ಅಭಿನಯಿಸುತ್ತಿದ್ದಾರೆ.

  ಇನ್ನುಳಿದಂತೆ ಶರತ್ ಲೋಹಿತಾಶ್ವ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಶಿವರಾಜ್ ಗೆ ಇದು ಚೊಚ್ಚಲ ಸಿನಿಮಾ. ನಿರ್ಮಾಪಕರಿಗೂ ಇದು ಮೊದಲ ಪ್ರಾಜೆಕ್ಟ್. ಎಸ್ ಹಲೇಶ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

  English summary
  Kannada actor pavan shourya and chirashree anchan starrer Udumba movie audio released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X