For Quick Alerts
  ALLOW NOTIFICATIONS  
  For Daily Alerts

  'ಉಳಿದವರು ಕಂಡಂತೆ' ತಮಿಳು ರಿಮೇಕ್ ಚಿತ್ರಕ್ಕೆ ಟೈಟಲ್ ಫಿಕ್ಸ್

  By Suneel
  |

  ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಚಿತ್ರ ತೆಲುಗು, ಮಲಯಾಳಂ ಹಾಗೂ ತಮಿಳಿಗೆ ರಿಮೇಕ್ ಆಗುವ ಸುದ್ದಿಯನ್ನು ಈ ಹಿಂದೆ ಫಿಲ್ಮಿಬೀಟ್ ನಲ್ಲಿ ಓದಿದ್ರಿ. ಕೇವಲ ಮಲೆಯಾಳಂ ನಲ್ಲಿ ರಿಮೇಕ್ ಗೆ ಓಕೆ ಆಗಿದ್ದ 'ಉಳಿದವರು ಕಂಡಂತೆ' ಚಿತ್ರ ಈಗ ತಮಿಳಿಗೂ ರಿಮೇಕ್ ಆಗಲು ಟೈಟಲ್ ಫಿಕ್ಸ್ ಆಗಿದೆ.[ಉಳಿದವರು ಕಂಡಂತೆ ರಿಮೇಕ್, ರಿಚಿ ರೋಲ್ ರಕ್ಷಿತ್ ಬೆಸ್ಟ್!]

  'ಉಳಿದವರು ಕಂಡಂತೆ' ತಮಿಳಿನ ರಿಮೇಕ್ ಚಿತ್ರಕ್ಕೆ ಈ ಹಿಂದೆ 'ಸಂತ ಮಾರಿಯ' ಮತ್ತು 'ಅವರ್ಗಲ್' ಎಂಬ ಟೈಟಲ್ ನೀಡಲಾಗಿದ್ದ ಸುದ್ದಿ ಆನ್‌ ಲೈನ್‌ ನಲ್ಲಿ ಹರಿದಾಡಿತ್ತು. ಆದರೆ ಈಗ ಚಿತ್ರತಂಡ ಬೇರೆಯದೆ ಅಫೀಶಿಯಲ್ ಟೈಟಲ್ ಒಂದನ್ನು ಖಚಿತಪಡಿಸಿದೆ.

  ತಮಿಳಿನಲ್ಲಿ 'ರಿಚಿ'

  ತಮಿಳಿನಲ್ಲಿ 'ರಿಚಿ'

  'ಉಳಿದವರು ಕಂಡಂತೆ' ತಮಿಳಿನ ರಿಮೇಕ್ ಚಿತ್ರಕ್ಕೆ 'ರಿಚಿ' ಎಂದು ಚಿತ್ರತಂಡ ಅಧಿಕೃತವಾಗಿ ಟೈಟಲ್ ಫಿಕ್ಸ್ ಮಾಡಿದೆ.

  ತಮಿಳಿನಲ್ಲಿ 'ರಿಚಿ' ಯಾರು?

  ತಮಿಳಿನಲ್ಲಿ 'ರಿಚಿ' ಯಾರು?

  ಕಾಲಿವುಡ್ ನಲ್ಲಿ 'ಪ್ರೇಮಂ' ಚಿತ್ರದ ಮೂಲಕ ತಮ್ಮ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ನಿವಿನ್ ಈಗ ತಮಿಳಿನ ರಿಮೇಕ್ ಚಿತ್ರಕ್ಕೂ ಸಹ ಅವರೇ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಅವರ ಹೆಸರು 'ರಿಚಿ'.

  'ರಿಚಿ' ಪರ್ಫೆಕ್ಟ್ ಹೆಸರು

  'ರಿಚಿ' ಪರ್ಫೆಕ್ಟ್ ಹೆಸರು

  'ಉಳಿದವರು ಕಂಡಂತೆ' ತಮಿಳಿನ ರಿಮೇಕ್ ಚಿತ್ರದ ನಿರ್ಮಾಪಕರು ಈ ಹಿಂದೆ ಚಿತ್ರಕ್ಕೆ 'ಸಂತ ಮಾರಿಯ' ಮತ್ತು 'ಅವರ್ಗಲ್' ಎಂಬ ಟೈಟಲ್ ನೀಡಿದ್ದ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಈಗ ಸ್ವತಃ ನಿರ್ಮಾಪಕರಾದ ಆನಂದ್ ಕುಮಾರ್ ಮತ್ತು ವಿನೋದ್ ಶೋರ್ನುರ್ ಚಿತ್ರಕ್ಕೆ 'ರಿಚಿ' ಪರ್ಫೆಕ್ಟ್ ಹೆಸರು ಎಂದು ಸೂಚಿಸಿದ್ದಾರೆ. ಶೀಘ್ರದಲ್ಲೇ ಟೈಟಲ್ ಡಿಸೈನ್ ಮತ್ತು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುತ್ತಾರಂತೆ.

  ನಿವಿನ್ ಪೌಲಿ ಅವರ ಎರಡನೇ ಸಿನಿಮಾ 'ರಿಚಿ'

  ನಿವಿನ್ ಪೌಲಿ ಅವರ ಎರಡನೇ ಸಿನಿಮಾ 'ರಿಚಿ'

  ನಿವಿನ್ ಪೌಲಿ ಅವರು ಈ ಹಿಂದೆ 'ನೇರಂ' ಎಂಬ ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದರು. ಈಗ ಮತ್ತೊಮ್ಮೆ ಕಾಲಿವುಡ್ ನಲ್ಲಿ 'ಉಳಿದವರು ಕಂಡಂತೆ' ರಿಮೇಕ್ ಚಿತ್ರ 'ರಿಚಿ' ಮೂಲಕ ತಮಿಳಿನ ಎರಡನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

   'ರಿಚಿ' ತಾರಾಬಳಗ

  'ರಿಚಿ' ತಾರಾಬಳಗ

  'ಉಳಿದವರು ಕಂಡಂತೆ' ತಮಿಳು ರಿಮೇಕ್ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಪ್ರಕಾಶ್ ರಾಜ್ ಮತ್ತು ಎಲಾಂಗೊ ಕುಮಾರವೆಲ್ ಅಭಿನಯಿಸುತ್ತಿದ್ದಾರೆ.

  English summary
  Ulidavaru Kandanthe remake: Nivin Pauly's next titled Richie in Tamil. Richie will also mark Nivin's second Tamil film after Neram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X