»   » ಉಳಿದವರು ಕಂಡಂತೆ ರಿಮೇಕ್, ರಿಚಿ ರೋಲ್ ರಕ್ಷಿತ್ ಬೆಸ್ಟ್!

ಉಳಿದವರು ಕಂಡಂತೆ ರಿಮೇಕ್, ರಿಚಿ ರೋಲ್ ರಕ್ಷಿತ್ ಬೆಸ್ಟ್!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ವಿಮರ್ಶಕರಿಂದ ತಿರಸ್ಕರಿಸಲ್ಪಟ್ಟರೂ ಪ್ರೇಕ್ಷಕರಿಂದ ಪುರಸ್ಕಾರ ಪಡೆದ ರಕ್ಷಿತ್ ಶೆಟ್ಟಿ ನಿರ್ದೇಶನ ಚೊಚ್ಚಲ ಚಿತ್ರ ಉಳಿದವರು ಕಂಡಂತೆ ದಕ್ಷಿಣದ ಇತರೆ ಭಾಷೆಗಳಿಗೆ ರಿಮೇಕ್ ಆಗುವ ಸುದ್ದಿ ಈಗ ದೃಢಪಟ್ಟಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಹಬ್ಬಿದ್ದ ಸುದ್ದಿಯನ್ನು ಫಿಲ್ಮಿಬೀಟ್ ನಲ್ಲಿ ಓದಿರಬಹುದು.ಈಗ ತೆಲುಗು, ಮಲಯಾಳಂ ಹಾಗೂ ತಮಿಳಿಗೆ ರಿಮೇಕ್ ಆಗುವುದನ್ನು ರಕ್ಷಿತ್ ಶೆಟ್ಟಿ ಖಚಿತಪಡಿಸಿದ್ದಾರೆ.

62ನೇ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ 8 ವಿಭಾಗದಲ್ಲಿ ಸ್ಪರ್ಧಿಸಿದ್ದ ಉಳಿದವರು ಕಂಡಂತೆ ಚಿತ್ರ ಮೂರು ಪ್ರಶಸ್ತಿ ಬಾಚಿಕೊಂಡಿತ್ತು. ರಕ್ಷಿತ್ ಶೆಟ್ಟಿಗೆ ಉತ್ತಮ ನಿರ್ದೇಶಕ, ರಕ್ಷಿತ್ ರಚನೆಯ ಘಾಟಿಯ ಇಳಿದು ಹಾಡಿಗೆ ದನಿಯಾದ ವಿಜಯ್ ಪ್ರಕಾಶ್ ಗೆ ಉತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಹಾಗೂ ಅಜನೀಶ್ ಅವರಿಗೆ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿತ್ತು.[ಉಳಿದವರು ಕಂಡಂತೆ ಚಿತ್ರ ಒಮ್ಮೆ ಓದಿ]

ulidavaru kandante remake

ಕಳೆದ ಒಂದು ವರ್ಷದಿಂದ ರಿಮೇಕ್ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ಗಂಡುಗಲಿ ಕೆ ಮಂಜು ಅವರೇ ಮೂರು ಭಾಷೆಗಳಲ್ಲೂ ಚಿತ್ರ ನಿರ್ಮಿಸುತ್ತಾರೆ ಎಂಬ ಸುದ್ದಿ ಇತ್ತು. ಈಗ ಮಲಯಾಳಂ ನಟ ನವೀನ್ ಅವರು ಮೂರು ಭಾಷೆಯಲ್ಲೂ ರಕ್ಷಿತ್ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ತಿಳಿದು ಬಂದಿದೆ. [62ನೇ ಫಿಲಂಫೇರ್ ಪ್ರಶಸ್ತಿ ವಿಜೇತರ ಪಟ್ಟಿ]

ಈ ಬಗ್ಗೆ ರಕ್ಷಿತ್ ಶೆಟ್ಟಿ ಜೊತೆಗೆ ಅಭಿಮಾನಿಗಳು ಫೇಸ್ ಬುಕ್ ಮೂಲಕ ಮಾತುಕತೆ ಕೂಡಾ ನಡೆಸಿದ್ದಾರೆ. ಫಟಾ ಪೋಸ್ಟರ್ ನಿಕ್ಲಾ ಹೀರೋ.. ರಿಚಿ ರೀಪ್ಲೇಸ್ ಮಾಡೋಕೆ ಆಗಲ್ಲ ಗುರು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಕೆಲವರಂತೂ ಹೀತ್ ಲೆಜರ್ (ಬ್ಯಾಟ್ ಮನ್ ಖ್ಯಾತಿಯ ದಿವಂಗತ ನಟ ಮರಣೋತ್ತರ ಆಸ್ಕರ್ ಪಡೆದವರು) ಕ್ರಿಸ್ಟೋಫ್ ವಾಜ್ (ಜಾಂಗೋ ಅನ್ ಚೈನ್ಡ್ ನ ಡಾ.ಕಿಂಗ್)ನಂತರ ನೀವೇ ಅದ್ಭುತ ನೆಗಟಿವ್ ಶೇಡ್ ನಟ ಎಂದು ರಕ್ಷಿತ್ ರನ್ನು ಹೊಗಳಿದ್ದಾರೆ.

Ulidavaru Kandate

ಸ್ಯಾಂಡಲ್ ವುಡ್ ಆಯ್ತು ಮುಂದೆ ಮಾಲಿವುಡ್(ಕೇರಳ ಚಿತ್ರರಂಗ) ಗೂ ಬಂದು ನಿರ್ದೇಶನ ಮಾಡಿ ಎಂದು ಕೆಲವರು ಕೇಳಿಕೊಂಡಿದ್ದಾರೆ. ನವೀನ್ ಅವರ ಇತ್ತೀಚಿನ ಪ್ರೇಮಂ ಸಿನಿಮಾವನ್ನು ಕನ್ನಡಕ್ಕೆ ತನ್ನಿ ಎಂದಿದ್ದಾರೆ.

ಮಲಯಾಳಂನ ಬೆಂಗಳೂರ್ ಡೇಸ್, ಪ್ರೇಮಂ, ತಮಿಳಿನ ನೇರಂ ಖ್ಯಾತಿಯ ನವೀನ್ ವೈವಿಧ್ಯಮಯ ಪಾತ್ರಗಳಿಗೆ ಹೆಸರಾದವರು, ಈ ಚಿತ್ರದಲ್ಲೂ ಉತ್ತಮವಾಗಿ ನಟಿಸುವ ಭರವಸೆ ಇದೆ ಎಂದು ರಕ್ಷಿತ್ ಪ್ರತಿಕ್ರಿಯಿಸಿದ್ದಾರೆ. ಗೌತಮ್ ರಾಮಚಂದ್ರನ್ ಅವರು ಮೂರು ಆವೃತ್ತಿಯಲ್ಲೂ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಆದರೆ, ಮೂಲ ಕಥೆ ಎಂದು ರಕ್ಷಿತ್ ಶೆಟ್ಟಿ ಅವರ ಹೆಸರನ್ನು ಉಪಯೋಗಿಸಲಾಗುತ್ತದೆ. ಕನ್ನಡದಲ್ಲಿದ್ದ ಉಡುಪಿ, ಮಂಗಳೂರು, ಕೃಷ್ಣ ಜನ್ಮಾಷ್ಟಮಿ ಕಥೆಯನ್ನು ತಮಿಳುನಾಡು, ಕೇರಳ ಗಡಿ ಭಾಗದ ಸಂತ ಮೇರಿ ಫೆಸ್ಟಿವಲ್ ಆಗಿ ಪರಿವರ್ತಿಸಲಾಗುತ್ತದೆ. ರಕ್ಷಿತ್ ಕೂಡಾ ಸ್ಕ್ರಿಪ್ಟ್ ವರ್ಕ್ ನಲ್ಲಿ ಭಾಗವಹಿಸುತ್ತಿರುವುದು ವಿಶೇಷ.

English summary
Kannada film 'Ulidavaru Kandanthe' is all set to be remade in three languages. The film received positive to mixed reviews from critics. The movie directed by Rakshit Shetty. The film bagged three awards for Best Director, Best Music Director and Best Male Playback Singer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada