For Quick Alerts
  ALLOW NOTIFICATIONS  
  For Daily Alerts

  ಜೂನ್ 17 ರಂದು ಅರುಣಾ ಕುಮಾರಿ ವಿರುದ್ಧ ಉಮಾಪತಿ ನೀಡಿದ್ದ ದೂರಿನಲ್ಲಿ ಏನಿದೆ?

  |

  25 ಕೋಟಿ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಮೂಡಿದ್ದ ಭಿನ್ನಾಭಿಪ್ರಾಯ ದೂರವಾಗಿದ್ದು, ಮಂಗಳವಾರ ಸಂಜೆ ದರ್ಶನ್ ನಿವಾಸದಲ್ಲಿ ಇಬ್ಬರು ಭೇಟಿ ಮಾಡಿ 'ನಾವು ದೂರವಾಗಿಲ್ಲ' ಎಂಬ ಸಂದೇಶ ರವಾನಿಸಿದರು. ಇಲ್ಲಿಗೆ ಈ ವಿವಾದ ಒಂದು ಹಂತಕ್ಕೆ ತಣ್ಣಗಾಗಿದೆ.

  ಆದರೆ ಅರುಣಾ ಕುಮಾರಿ 'ಉಮಾಪತಿ ನನ್ನನ್ನು ಬಳಸಿಕೊಂಡು ತಪ್ಪು ಮಾಡಿದರು, ಈಗ ಅವರವರು ಒಂದಾಗಿ ಚೆನ್ನಾಗಿದ್ದಾರೆ' ಎಂದು ದೂರಿದ್ದಾರೆ. ಈ ಕೇಸ್‌ನಲ್ಲಿ ಉಮಾಪತಿ ಶ್ರೀನಿವಾಸ್ ಜೂನ್ 17ನೇ ತಾರೀಖು ಜಯನಗರ ಪೊಲೀಸ್ ಠಾಣೆಯಲ್ಲಿ ಅರುಣಾ ಕುಮಾರಿ ಕುರಿತು ಲಿಖಿತ ದೂರು ನೀಡಿದ್ದರು. ಆ ದೂರಿನ ಪ್ರತಿ ಈಗ ಲಭ್ಯವಾಗಿದ್ದು, ಅದರಲ್ಲಿ ಏನೆಲ್ಲಾ ಉಲ್ಲೇಖಿಸಲಾಗಿದೆ ಎಂಬ ವಿವರ ಇಲ್ಲಿದೆ. ಮುಂದೆ ಓದಿ...

  'ಒಂದಾಗಿದ್ವಿ, ಒಂದಾಗಿರೋಣ': ಒಟ್ಟಿಗೆ ಕಾಣಿಸಿಕೊಂಡ ದರ್ಶನ್-ಉಮಾಪತಿ 'ಒಂದಾಗಿದ್ವಿ, ಒಂದಾಗಿರೋಣ': ಒಟ್ಟಿಗೆ ಕಾಣಿಸಿಕೊಂಡ ದರ್ಶನ್-ಉಮಾಪತಿ

  ಕೆನರಾ ಬ್ಯಾಂಕ್ ಲೋಕ್ ಸೆಕ್ಷನ್ ಅಂತ ಹೇಳಿದರು

  ಕೆನರಾ ಬ್ಯಾಂಕ್ ಲೋಕ್ ಸೆಕ್ಷನ್ ಅಂತ ಹೇಳಿದರು

  ಅರುಣಾ ಕುಮಾರಿ ಎಂಬುವವರು ನನಗೆ ಕರೆ ಮಾಡಿ ತಾನು ಕೆನರಾ ಬ್ಯಾಂಕ್ ಲೋನ್ ವಿಭಾಗದಿಂದ ಕರೆ ಮಾಡುತ್ತಿದ್ದೇನೆ, ಸಿನಿಮಾ ನಟ ದರ್ಶನ್ ಅವರು, ಪರಿಚಿತರೊಬ್ಬರಿಗೆ ಲೋನ್‌ಗಾಗಿ ಶ್ಯೂರಿಟಿಯನ್ನು ಹಾಕಿದ್ದು, ಸದರಿ ದಾಖಲೆಗಳ ಬಗ್ಗೆ ವಿಚಾರಣೆಯನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.

  ನನ್ನ ಕಚೇರಿಯಲ್ಲಿ ಭೇಟಿ ಮಾಡಿದರು

  ನನ್ನ ಕಚೇರಿಯಲ್ಲಿ ಭೇಟಿ ಮಾಡಿದರು

  ಆದ್ದರಿಂದ ನಾನು ಅವರನ್ನು ಈ ನನ್ನ ಕಚೇರಿಗೆ ಬರುವಂತೆ ತಿಳಿಸಿದೆನು. ನನ್ನ ಕಚೇರಿಗೆ ಬಂದ ಸದರಿ ಮಹಿಳೆಯು ಕೆಲವು ದಾಖಲೆಗಳನ್ನು ತೋರಿಸಿ ಸಿನಿಮಾ ನಟ ದರ್ಶನ್ ಅವರಿ ಪರಚಿತರೊಬ್ಬರಿಗೆ ಲೋನ್‌ಗಾಗಿ ಶ್ಯೂರಿಟಿಯನ್ನು ಹಾಕಿರುತ್ತಾರೇಯೆ? ಎಂಬ ಬಗ್ಗೆ ಮಾಹಿತಿಯನ್ನ ನೀಡಬೇಕೆಂದು ತಿಳಿಸಿದರು.

  ಅರುಣಾ ಕುಮಾರಿ ವೃತ್ತಾಂತ ಬಿಚ್ಚಿಟ್ಟ ನಾಗವರ್ಧನ್ ಯಾರು?ಅರುಣಾ ಕುಮಾರಿ ವೃತ್ತಾಂತ ಬಿಚ್ಚಿಟ್ಟ ನಾಗವರ್ಧನ್ ಯಾರು?

  ದರ್ಶನ್ ಅವರ ಬಗ್ಗೆ ವಿಚಾರಣೆ

  ದರ್ಶನ್ ಅವರ ಬಗ್ಗೆ ವಿಚಾರಣೆ

  ಆಗ ನಾನು ಈ ಬಗ್ಗೆ ದರ್ಶನ್ ಅವರನ್ನೇ ಸಂಪರ್ಕಿಸಿ ಮಾಹಿತಿಯನ್ನು ಪಡೆಯುವಂತೆ ತಿಳಿಸಿರುತ್ತೇನೆ. ಆದರೆ ಸದರಿ ಮಹಿಳೆಯು ಇದೇ ರೀತಿಯಲ್ಲಿ ಇತರರಿಗೆ ಕರೆಗಳನ್ನು ಮಾಡಿ ಲೋನ್‌ ವಿಚಾರಗಾಗಿ ಮಾಹಿತಿಯನ್ನು ನೀಡಬೇಕೆಂದು ವಿಚಾರಣೆ ಮಾಡುತ್ತಿರುತ್ತಾಳೆ.

  Umapathy Biography | ಉಮಾಪತಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೇಗೆ | Movies, Family, Net Worth, Awards
  ಠಾಣೆಗೆ ಕರೆಯಿಸಿ ವಿಚಾರಿಸಿ

  ಠಾಣೆಗೆ ಕರೆಯಿಸಿ ವಿಚಾರಿಸಿ

  ಸದರಿ ಮಹಿಳೆಯ ವರ್ತನೆ ಹಾಗು ನನಗೆ ತೋರಿಸಿದ ದಾಖಲೆಗಳ ಬಗ್ಗೆ ಸಂಶಯವಿರುತ್ತದೆ. ಆದ್ದರಿಂದ ನನ್ನನ್ನು ಭೇಟಿ ಮಾಡಿದ ಮಹಿಳೆ ಅರುಣಾ ಕುಮಾರಿ ಅವರನ್ನು ಠಾಣೆಗೆ ಕರೆಯಿಸಿ ಈ ಬಗ್ಗೆ ವಿಚಾರಣೆ ಮಾಡಬೇಕೆಂದು ತಮ್ಮಲ್ಲಿ ವಿನಂತಿ ಮಾಡುತ್ತೇನೆ ಎಂದು ನಿರ್ಮಾಪಕ ಉಮಾಪತಿ ಜೂನ್ 17 ರಂದು ಜಯನಗರ ಪೊಲೀಸ್ ಠಾಣಯಲ್ಲಿ ದೂರು ನೀಡಿದ್ದರು.

  English summary
  Rs 25 cr fraud case controversy: Producer Umapathy has filed a complaint against Aruna Kumari in jayanagar police station. what was the details mentioned in complaint?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X