»   » ಈ ಕೆಂಪೇಗೌಡ ನಗರದಲ್ಲಿ ಶಾಸಕಿಯಾಗಿ ಉಮಾಶ್ರೀ

ಈ ಕೆಂಪೇಗೌಡ ನಗರದಲ್ಲಿ ಶಾಸಕಿಯಾಗಿ ಉಮಾಶ್ರೀ

Posted By:
Subscribe to Filmibeat Kannada

ಬೆಂದಕಾಳೂರಿನ ಸ್ಥಾಪಕ ಕೆಂಪೇಗೌಡ ಯಾರಿಗೆ ತಾನೇ ಸ್ಪೂರ್ತಿ ಅಲ್ಲ! ಕೆಂಪೇಗೌಡನ ಊರು ಈಗ ಬೆಂಗಳೂರು ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಗೊಳಿಸುತ್ತಿದೆ. ಹೊಸಬರ ಚಿತ್ರದಲ್ಲಿ ಶಾಸಕಿ ಆಗಿ ಈಗ ಕರ್ನಾಟಕ ರಾಜ್ಯದ ಮಂತ್ರಿಯೂ ಆಗಿರುವ ಉಮಾಶ್ರೀ ಅವರು ಅಭಿನಯಿಸುತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾದ ಮೇಲೆ ಒಪ್ಪಿಕೊಂಡ ಮೊದಲ ಚಿತ್ರ ಶ್ರೀಮತಿ ಉಮಾಶ್ರೀ ಅವರದು.
ಇದೀಗ ಕೆಂಪೇಗೌಡರ ಹೆಸರಿನ ಮತ್ತೊಂದು ಚಿತ್ರ ಅವರ ಜನುಮದಿನ ಆರಂಭವಾಗಿದೆ. ಅದೇ 'ಫ್ರೆಂಡ್ಸ್ ಸಿನೆ ಕ್ರಿಯೇಷನ್' ಅಡಿಯಲ್ಲಿ ಆರಂಭವಾಗಿರುವ 'ಈ ಕೆಂಪೇಗೌಡ ನಗರ'.


ಹಳ್ಳಿಯ ಮುಗ್ಧ ಬೆಂಗಳೂರಿಗೆ ಬಂದು ಅನುಭವಿಸುವ ಅನೇಕ ಮಜಲುಗಳನ್ನು ಸುಂದರ್ ಪಾಟೀಲ್ ಅವರ ನಿರ್ಮಾಣದಲ್ಲಿ ಚಾಲನೆಗೊಂಡಿದೆ. ಈ ಚಿತ್ರದಿಂದ ಎಂಟು ವರ್ಷಗಳಿಂದ ಸಹಾಯಕ ನಿರ್ದೇಶಕನಾಗಿ ಎಸ್ ನಾರಾಯಣ್, ವಿಕ್ಟರಿ ವಾಸು ಬಳಿ ಕೆಲಸ ಮಾಡಿದ ಕುಮಾರ್ ಸ್ವತಂತ್ರ ನಿರ್ದೇಶಕ ಪಟ್ಟ ಆಕ್ರಮಿಸಲಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ಮಾಡುವ ಯೋಚನೆ ನಿರ್ದೇಶಕರದ್ದು.

ಯೋಗ ಪ್ರಸಾದ್ ಹಾಗೂ ಮಂಗಳೂರಿನ ಬೆಡಗಿ ಶ್ವೇತಾ ಪ್ರಮುಖ ತಾರಾಗಣದಲ್ಲಿ ಇದ್ದಾರೆ. ಇವರಿಬ್ಬರಿಗೂ ಇದು ಮೊದಲ ಸಿನೆಮಾ. ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಎ.ಸಿ.ಪಿ ಆಗಿ ಅಭಿನಯಿಸುತ್ತಿದ್ದಾರೆ.

ಎಸ್ ಮನೋಹರ್ ಅವರ ಛಾಯಾಗ್ರಹಣ, ವಿನಯ್ ಚಂದ್ರ ಅವರ ಸಂಗೀತ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಹಾಗೂ ಅಲ್ಟಿಮೇಟ್ ಶಿವು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕೆ ಇದೆ. ಶಂಕರ್ ಅವರ ಸಂಭಾಷಣೆ, ಕೆ ಕಲ್ಯಾಣ್, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಅವರ ಸಾಹಿತ್ಯ ಒದಗಿಸಿದ್ದಾರೆ.
ಪೋಷಕ ಕಲಾವಿದರಲ್ಲಿ ಶೋಭಾರಾಜ್, ಹರೀಶ್ ರಾಯ್, ಉಮಾಶ್ರೀ, ಕಿಲ್ಲರ್ ವೆಂಕಟೇಶ್, ಲಕ್ಷ್ಮಣ್, ಉಮೇಶ್ ಪಂಡಿತ್, ಶೀಲಾ, ಲಕ್ಷ್ಮಿ ಹಾಗೂ ನಿಕಿತಾ ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada actress Umashree signed for the movie Ee Kempe Gowda Nagara, this is the first movie after she took over the portfolio of minister of women and child welfare in the Karnataka. Victory Vasu is directing the film. Actor Yoga Prasad and actress Shwetha are making their debut with the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada