»   » 'ಬುಗುರಿ ಚೆನ್ನಾಗಿ ತಿರುಗಲಿ, ಉಪ್ಪಿಟ್ಟು ಎಲ್ಲರಿಗೂ ರುಚಿಸಲಿ'

'ಬುಗುರಿ ಚೆನ್ನಾಗಿ ತಿರುಗಲಿ, ಉಪ್ಪಿಟ್ಟು ಎಲ್ಲರಿಗೂ ರುಚಿಸಲಿ'

Posted By:
Subscribe to Filmibeat Kannada

ಇಂದು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಗಣಿ ಅಭಿಮಾನಿಗಳಿಗೆ ಕೂಡ ಹಬ್ಬದ ವಾತಾವರಣ. ಯಶಸ್ವಿ ನಿರ್ದೇಶಕ ಎಂ.ಡಿ ಶ್ರೀಧರ್ ಅವರ ನಿರ್ದೇಶನದ ಮೂರನೇ ಚಿತ್ರ ಹಾಗೂ ಗಣೇಶ್ ಅವರ 25ನೇ ಚಿತ್ರ 'ಬುಗುರಿ' ಬೆಂಗಳೂರಿನ ಸಂತೋಷ್ ಚಿತ್ರ ಮಂದಿರದಲ್ಲಿ ಭರ್ಜರಿಯಾಗಿ ತೆರೆ ಕಂಡಿದೆ.

ಅಂದ ಹಾಗೆ ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ಚಿತ್ರ 'ಉಪ್ಪಿ 2' ಕೂಡ ತೆರೆ ಕಂಡಿದ್ದು, ಒಟ್ನಲ್ಲಿ ಅಭಿಮಾನಿಗಳಿಗೆ ಭಾರಿ ಕುತೂಹಲ ಅಂತೂ ಇದ್ದೇ ಇದೆ.


Upendra and Ganesh wish each other for Uppi2 and Buguri

ಸ್ಮೈಲ್ ಕಿಂಗ್ ಗಣೇಶ್ ಅವರ ಪ್ರೀತಿಯ ಸುತ್ತ 'ಬುಗುರಿ' ಇಂದು ಸುತ್ತಲು ಪಾರಂಭಿಸಿದೆ, ಎರಿಕಾ ಫರ್ನಾಂಡೀಸ್ ಹಾಗೂ ತೆಲುಗು ತಾರೆ ರೀಚಾ ಪನೈ ಗೋಲ್ಡನ್ ಸ್ಟಾರ್ ಜೊತೆ ಸಖತ್ತಾಗೆ ಡ್ಯುಯೆಟ್ ಹಾಡಿದ್ದಾರೆ. ['ಸಿಲ್ವರ್ ಜ್ಯುಬಿಲಿ' ಚಿತ್ರದ ಪ್ರಚಾರಕ್ಕೆ ಗಣೇಶ್ ಗೆ ಪುರುಸೊತ್ತಿಲ್ವ!]


ತಮ್ಮ 25ನೇ ಬಹುನಿರೀಕ್ಷಿತ ಚಿತ್ರ 'ಬುಗುರಿ' ತೆರೆ ಕಾಣುತ್ತಿರುವುದಕ್ಕೆ ಗಣೇಶ್ ಅವರು ಫುಲ್ ಎಕ್ಸೈಟ್ ಆಗಿದ್ದೇನೆ ಅಂತ ಸಂದರ್ಶನದಲ್ಲಿ ಹೇಳಿದ್ದಾರೆ. ಅದ್ಯಾಕೆ ಅಂತಿರಾ, ಯಾಕಂದ್ರೆ, ಚಿತ್ರ ವೀಕ್ಷಿಸಿದ ಅಭಿಮಾನಿಗಳು 'ಬುಗುರಿ' ಬಗ್ಗೆ ಯಾವ ರೀತಿ ತೀರ್ಪು ನೀಡುತ್ತಾರೆ ಅಂತ ಕಾಯ್ತಾ ಇದ್ದಾರಂತೆ.


ಇನ್ನೂ ರಿಯಲ್ ಸ್ಟಾರ್ ಉಪೇಂದ್ರ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಬುಗುರಿ' ಚಿತ್ರಕ್ಕೆ 'ಬುಗುರಿ' ಚೆನ್ನಾಗಿ ತಿರುಗಲಿ ಅಂತ ಶುಭ ಹಾರೈಸುವುದರೊಂದಿಗೆ ಗಣೇಶ್ ಅವರು ಉಪೇಂದ್ರ ಅವರ 'ಉಪ್ಪಿ 2' ಗೆ ಉಪ್ಪಿ-ಟ್ಟು ಎಲ್ಲರಿಗೂ ರುಚಿಸಲಿ ಅಂತ ಟ್ವಿಟ್ಟರ್ ಮೂಲಕ ಒಬ್ಬರಿಗೊಬ್ಬರು ಶುಭ ಹಾರೈಸಿಕೊಂಡಿದ್ದಾರೆ.
ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಂದು ತೆರೆ ಕಂಡಿರುವ 'ಬುಗುರಿ' ಚಿತ್ರದ ಮೇಲೆ ಗಣೇಶ್ ಹಾಗೂ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತ್ರಿಕೋನ ಪ್ರೇಮಕಥೆಯನ್ನು ಹೊಂದಿರುವ 'ಬುಗುರಿ' ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ.


ಚಿತ್ರದ ನಾಯಕಿ ಎರಿಕಾ ಫರ್ನಾಂಡಿಸ್ ಅವರಿಗೆ ಈ ಚಿತ್ರದಿಂದ ಸ್ಯಾಂಡಲ್ ವುಡ್ ನಲ್ಲಿ ಒಂದೊಳ್ಳೆ ಐಡೆಂಟಿಟಿ ಪಡೆದುಕೊಳ್ಳಲಿದ್ದಾರಂತೆ. ಸಾಮಾನ್ಯವಾಗಿ ಸಿನಿ ಪ್ರಿಯರು ಇಷ್ಟಪಡುವಂತೆ ಕಲರ್ ಫುಲ್ ಆಗಿ ಚಿತ್ರ ಮಾಡಲಾಗಿದೆಯಂತೆ. ಒಟ್ನಲ್ಲಿ ಇಡೀ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳು ಜಾಸ್ತೀನೇ ಇದೆಯಂತೆ.


'ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ' ಅಂತ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಒಂದು ಅದ್ಭುತ ಹಾಡು ಬರೆದಿದ್ದಾರೆ. [ನಾದಬ್ರಹ್ಮ ಹಂಸಲೇಖ ಆರೋಗ್ಯದಲ್ಲಿ ಚೇತರಿಕೆ] ಅಂದ ಹಾಗೆ ಈ ಚಿತ್ರದಲ್ಲಿ 'ಬುಗುರಿ' ಅಂದ್ರೆ ಜೀವನದ ಒಂದು ಸಂಕೇತವಂತೆ, ಆಡುವ 'ಬುಗುರಿ' ಹೇಗೆ ಕಲರ್ ಫುಲ್ ಆಗಿ ಕಾಣಿಸುತ್ತದೋ ಹಾಗೆ ಜೀವನವೂ ಕೂಡ ಅಂತ ಗಣೇಶ್ ಪತ್ರಿಕೆಯೊಂದರ ಸಂದರ್ಶನದಲ್ಲಿ ವಿವರಿಸುತ್ತಾರೆ.


'ಬುಗುರಿ' ಚಿತ್ರ ಬದುಕಿನ ಎಲ್ಲಾ ಅಂಶಗಳಾದ ಬಾಲ್ಯ, ಸ್ಕೂಲ್, ಕಾಲೇಜು, ಉದ್ಯೋಗ, ಹೀಗೆ ಎಲ್ಲವನ್ನು ಒಳಗೊಂಡಿದೆಯಂತೆ, ಒಟ್ಟಾರೆ ಚಿತ್ರಕ್ಕೆ ನೈಜತೆಯ ಟಚ್ ನೀಡಲಾಗಿದೆ ಅನ್ನೋದು ನಿರ್ದೇಶಕರ ಮಾತು.


ಅದೇನೇ ಇರಲಿ ಇಂದು ಎರಡು ಸ್ಟಾರ್ ಗಳ ಚಿತ್ರ ತೆರೆ ಮೇಲೆ ಅಪ್ಪಳಿಸಿದ್ದು, ಪ್ರೇಕ್ಷಕರು ಯಾವ ಚಿತ್ರವನ್ನು ನೋಡುತ್ತಾರೆ, ಜೊತೆಗೆ ಯಾವ ರೀತಿಯ ಅಭಿಪ್ರಾಯಗಳು ಪ್ರೇಕ್ಷಕ ವರ್ಗದಿಂದ ಬರುತ್ತೆ ಅಂತ ಮುಂದೆ ನೋಡೋಣ.


English summary
Upendra wished Golden Star, Ganesh for the success of his movie. Ganesh too conveyed his best wishes to the Real Star for his 'Uppi 2' Both movies released Today (August 14)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada