For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ನಲ್ಲಿ ಉಪೇಂದ್ರ 'ಬ್ರಹ್ಮ' ಸೂಪರೋ ರಂಗ

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ಬ್ರಹ್ಮ ಚಿತ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಯು/ಎ ಸರ್ಟಿಫಿಕೇಟ್ ನೊಂದಿಗೆ ಪಾಸಾಗಿದೆ. ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಭಾರಿ ಬಜೆಟ್ ಚಿತ್ರ ಫೆಬ್ರವರಿ 7ರಂದು ತೆರೆಗೆ ಅಪ್ಪಳಿಸುತ್ತಿದೆ.

  ಈ ಹಿಂದೆ ಪ್ರೇಮಿಗಳ ದಿನದಂದು ಅಂದರೆ ಫೆಬ್ರವರಿ 14ರಂದು ತೆರೆ ಕಾಣುತ್ತದೆ ಎಂಬ ಸುದ್ದಿ ಇತ್ತು. ಈಗ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪಕ್ಕಾ ಮಾಡಿದ್ದು ಫೆಬ್ರವರಿ 7ಕ್ಕೆ ಚಿತ್ರ ಉಪ್ಪಿ ಅಭಿಮಾನಿಗಳ ಮುಂದೆ ಬರುತ್ತಿದೆ. [ರಿಯಲ್ ಸ್ಟಾರ್ ಉಪ್ಪಿ ಕಿರಿಕ್ ಮಾಡಿದ್ಯಾಕೆ ಗೊತ್ತಾ?]

  ಇನ್ನೊಂದು ಮುಖ್ಯ ವಿಚಾರ ಎಂದರೆ ಚಿತ್ರವನ್ನು ಮೆಜೆಸ್ಟಿಕ್ ನ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಹಿಂದೆ ಪ್ರೇಮ್ ನಿರ್ದೇಶನದ ಜೋಗಿ ಚಿತ್ರ ಕಪಾಲಿ ಹಾಗೂ ಸಂತೋಷ್ ಚಿತ್ರಮಂದಿರದಲ್ಲಿ ತೆರೆಕಂಡಿತ್ತು. ಈಗ ಬ್ರಹ್ಮ ಚಿತ್ರ ಆ ದಾಖಲೆಯನ್ನು ಸರಿಗಟ್ಟುತ್ತಿದೆ.

  ರಾಜ್ಯದಾದ್ಯಂತೆ 250 ಚಿತ್ರಮಂದಿರಗಳಲ್ಲಿ ಬ್ರಹ್ಮ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಚಿತ್ರದ ಆಡಿಯೋಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು ಪ್ಲಾಟಿನಂ ಡಿಸ್ಕ್ ಮಾಡಲಾಗಿದೆ.

  ಗುರುಕಿರಣ್ ಸಂಗೀತ ಇರುವ ಚಿತ್ರಕ್ಕೆ ನಾಯಕಿ ಪ್ರಣೀತಾ. ಮಲೇಷ್ಯ್ಯಾದಲ್ಲಿ ಚಿತ್ರವನ್ನು 40 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಹಾಡುಗಳು, ಆಕ್ಷನ್ ಸನ್ನಿವೇಶಗಳನ್ನು ಅಲ್ಲಿ ಸೆರೆಹಿಡಿಯಲಾಗಿದೆ. ಉಳಿದ ಯುದ್ಧದ ಸನ್ನಿವೇಶಗಳನ್ನು ಬೆಂಗಳೂರು, ನೆಲಮಂಗಲ ಬಳಿ ಚಿತ್ರೀಕರಿಸಿಕೊಳ್ಳಲಾಗಿದೆ.

  ಬ್ರಹ್ಮ ಚಿತ್ರದ ಧ್ವನಿಸಾಂದ್ರಿಕೆಯನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆಡಿಯೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ಪೆಷಲ್ ಆಗಿ ಆರ್ಡರ್ ಕೊಟ್ಟೆ ಹಾಗೂ ಟಿಂಗು ಟಿಂಗು ಹಾಡುಗಳನ್ನು ಅಭಿಮಾನಿಗಳು ಮತ್ತೆ ಮತ್ತೆ ಕೇಳಿ ಆನಂದಿಸುತ್ತಿದ್ದಾರೆ.

  ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ್ ಬಾಬು ನಿರ್ಮಿಸುತ್ತಿರುವ ಚೊಚ್ಚಲ ಚಿತ್ರವಿದು. ಈಗಾಗಲೆ ಚಿತ್ರದ ಬಗ್ಗೆ ಸಾಕಷ್ಟು ಕ್ರೇಜ್ ನಿರ್ಮಾಣವಾಗಿದೆ. ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ಭಾರಿ ಬೇಡಿಕೆ ಬಂದಿದ್ದರೂ ನಿರ್ಮಾಪಕರು ಪ್ರಥಮ ಪ್ರತಿ ಬರುವವರೆಗೂ ಏನೂ ಹೇಳಲ್ಲ ಎಂದಿದ್ದಾರೆ. (ಏಜೆನ್ಸೀಸ್)

  English summary
  Real Star Upendra and Pranitha starrer much expected Kannada movie 'Brahma' clears censor formalities and got U/A certificate, directed by R Chadru, schedule for release on 7th February, 2014.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X