»   » 'ದಬಾಂಗ್' ರೀಮೇಕ್ ಗೆ 'ನೋ' ಎಂದ ಉಪೇಂದ್ರ!

'ದಬಾಂಗ್' ರೀಮೇಕ್ ಗೆ 'ನೋ' ಎಂದ ಉಪೇಂದ್ರ!

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಹಿಟ್ ಸಿನಿಮಾ 'ದಬಾಂಗ್' ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದೆ ಎಂಬುದು ಹಳೆ ಸುದ್ದಿ. ಆದ್ರೆ, ಈ ರೀಮೇಕ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿಯಾಗಿತ್ತು.

ಇದೀಗ, ಈ ಲೇಟೆಸ್ಟ್ ಸುದ್ದಿ ಬಗ್ಗೆ ಉಪೇಂದ್ರ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ. ಈ ಮೂಲಕ ಇಷ್ಟು ದಿನ ಕಾಡುತಿದ್ದ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಹೌದು, 'ದಬಾಂಗ್' ಚಿತ್ರದ ರೀಮೇಕ್ ನಲ್ಲಿ ಉಪ್ಪಿ ಅಭಿನಯಿಸುತ್ತಿಲ್ಲ ಎಂದು ಟ್ವೀಟರ್ ನಲ್ಲಿ ಸ್ವಷ್ಟತೆ ನೀಡಿದ್ದಾರೆ.[ಯಾರಾಗ್ತಾರೆ ಕನ್ನಡದ 'ದಬಾಂಗ್' ಹೀರೋ? ]

Upendra clarified About Dabangg Remake!

''ನಾನು ದಬಾಂಗ್ ರೀಮೇಕ್ ಮಾಡುತ್ತಿಲ್ಲ. ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದೇನೆ''. ''ನಾನು ಆದಷ್ಟೂ ಬೇಗ ನನ್ನ ಹೊಸ ಚಿತ್ರದ ಬಗ್ಗೆ ತಿಳಿಸುತ್ತೇನೆ''

Upendra clarified About Dabangg Remake!

ಈ ಹಿಂದೆ 'ದಬಾಂಗ್' ಚಿತ್ರದ ರೀಮೇಕ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಅದು ಸಾಧ್ಯವಾಲಿಲ್ಲ. ಸದ್ಯ, 'ದಬಾಂಗ್' ಚಿತ್ರದ ರೀಮೇಕ್ ಹಕ್ಕು ಕೃಷ್ಣ ದೇವೇಗೌಡ ಎಂಬ ನಿರ್ಮಾಪಕರ ಬಳಿಯಿದ್ದು, ನಾಯಕನಿಗಾಗಿ ಹುಡುಕಾಟದಲ್ಲಿದ್ದಾರಂತೆ.

ಅಂದ್ಹಾಗೆ, 'ದಬಾಂಗ್' ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದು, ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದರು. ಈ ಚಿತ್ರವನ್ನ ಅಭಿನವ್ ಕಶ್ಯಪ್ ನಿರ್ದೇಶನ ಮಾಡಿದ್ದು, ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ಅಭಿನಯಿಸಿದ್ದರು.

English summary
Real Star Upendra has Speak About Remake of Hindi film Dabang. He has clarified that he is Not doing the remake of Dabang.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X