»   » ಕನ್ನಡದ ನಿರ್ದೇಶಕರಿಗೆ ಉಪ್ಪಿಯ ರಿಯಲ್ ಪಾಠ

ಕನ್ನಡದ ನಿರ್ದೇಶಕರಿಗೆ ಉಪ್ಪಿಯ ರಿಯಲ್ ಪಾಠ

Posted By:
Subscribe to Filmibeat Kannada
ಕನ್ನಡದ ನಿರ್ದೇಶಕರಿಗೆ ರಿಯಲ್ ಸ್ಟಾರ್ ಉಪೇಂದ್ರರ ಪಾಠ | Filmibeat Kannada

ಕನ್ನಡ ಸಿನಿಮಾರಂಗದ ಬುದ್ದಿವಂತ ನಿರ್ದೇಶಕ ಎಂದು ಅಭಿಮಾನಿಗಳಿಂದ ಕರೆಸಿಕೊಂಡಿರುವ ನಿರ್ದೇಶಕ , ನಟ, ನಿರ್ಮಾಪಕ ರಿಯಲ್ ಸ್ಟಾರ್ ಉಪೇಂದ್ರ. ಶಿವರಾಜ್ ಕುಮಾರ್ ನಿರೂಪಣೆ ಮಾಡುತ್ತಿರುವ ನಂ 1 ಯಾರಿ ಕಾರ್ಯಕ್ರಮ ಪ್ರಾರಂಭ ಆಗಿದೆ. ಓಪನಿಂಗ್ ಎಪಿಸೋಡ್ ಗಾಗಿ ಶಿವಣ್ಣನ ಆತ್ಮೀಯ ಗೆಳೆಯ ಉಪೇಂದ್ರ ಆಗಮಿಸಿದ್ದರು. 

ಉಪ್ಪಿ ಹಾಗೂ ಶಿವಣ್ಣ ಕಾಂಬಿನೇಶನ್ ಕೇವಲ ತೆರೆ ಮೇಲೆ ಮಾತ್ರವಲ್ಲ ಕಿರುತೆರೆಯಲ್ಲೂ ಸಖತ್ತಾಗಿರುತ್ತೆ ಅನ್ನೋದು ನಂ 1 ಯಾರಿ ಕಾರ್ಯಕ್ರಮ ನೋಡಿದವರಿಗೆ ಗೊತ್ತಾಗಿರುತ್ತೆ. ಆಫ್ ಬೀಟ್ ನ ಸಾಕಷ್ಟು ವಿಚಾರಗಳು ಕಾರ್ಯಕ್ರಮದಲ್ಲಿ ಅಭಿಮಾನಿಗಳಿಗೆ ನೋಡೊದಕ್ಕೆ ಸಿಕ್ಕಿದೆ.

'ಓಂ 2' ಬರುತ್ತಾ..? ಮತ್ತೆ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್!

ಇದೇ ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಈಗಿನ ಯಂಗ್ ಜನರೇಷನ್ ಡೈರೆಕ್ಟರ್ ಗಳಿಗೆ ಒಂದಿಷ್ಟು ಐಡಿಯಾ ಕೊಟ್ಟಿದ್ದಾರೆ. ಯಾರು ಏನು ಮಾಡಿದರೆ ಚಂದ ಅನ್ನೋದನ್ನು ತಿಳಿಸಿದ್ದಾರೆ. ಕನ್ನಡ ನಿರ್ದೇಶಕರಿಗೆ ಉಪ್ಪಿ ಕೊಟ್ಟ ಸಲಹೆಗಳೇನು ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ನಿರ್ದೇಶನಕ್ಕೆ ರಕ್ಷಿತ್ ಬ್ರೇಕ್ ಹಾಕಿ ಎಂದ ಉಪ್ಪಿ

ನಂ 1 ಯಾರಿ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ನಿರ್ದೇಶಕರಿಗೆ ನಿಮ್ಮ, ಸಲಹೆ ಎನ್ನುವ ಕೆಲವು ಪ್ರಶ್ನೆಗಳನ್ನ ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿದ ಉಪ್ಪಿ ರಕ್ಷಿತ್ ಶೆಟ್ಟಿ ಅವರಿಗೆ ನಿರ್ದೇಶನ ಮಾಡಬೇಡಿ ಎಂದಿದ್ದಾರೆ. ಅಂದರೆ ತಕ್ಷಣಕ್ಕೆ ನಿಮ್ಮ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿದ್ದಾರೆ ಆದ್ದರಿಂದ ಸದ್ಯ ಅಭಿನಯ ಮಾಡಿ ನಂತರ ಚಿತ್ರಗಳಲ್ಲಿ ನಿರ್ದೇಶನ ಮಾಡಿ ಎಂದಿದ್ದರೆ.

ಲೂಸಿಯಾ ಪವನ್ ಗೆ ಸಲಹೆ

ಲೂಸಿಯಾ ಪವನ್ ಅವರ ಬಗ್ಗೆ ಮಾತನಾಡಿದ ಉಪೇಂದ್ರ ಹಾಲಿವುಡ್ ಸಿನಿಮಾ ಮಾಡುವ ಸಾಮರ್ಥ್ಯ ಇದೆ. ಆದ್ದರಿಂದ ನೀವು ಇಂಗ್ಲೀಷ್ ಚಿತ್ರ ನಿರ್ದೇಶನ ಮಾಡಿ ಎಂದು ಸಲಹೆ ನೀಡಿದ್ದಾರೆ.

ಸಿಂಪಲ್ ಸುನಿಗೆ ಸೂಪರ್ ಸಲಹೆ

ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಸಿನಿಮಾವನ್ನ ಮೆಚ್ಚಿಕೊಂಡಿರುವ ಉಪ್ಪಿ ಅಂತದ್ದೇ ಚಿತ್ರವನ್ನ ಸಿಂಪಲ್ ಸುನಿ ನಿರ್ದೇಶನ ಮಾಡಬೇಕು ಎಂದಿದ್ದಾರೆ.

ಪವನ್ ಸಿನಿಮಾ ಮಾಡಬೇಡಿ ಎಂದ ಶಿವಣ್ಣ

ಕೊನೆಯದಾಗಿ ಪವನ್ ಒಡೆಯರ್ ಬಗ್ಗೆ ಹೇಳಿದ್ದಾರೆ ಉಪ್ಪಿ ಯೋಚನೆ ಮಾಡಿ ಉತ್ತರಿಸುವಷ್ಟರಲ್ಲಿ ಪವನ್ ಸಿನಿಮಾ ಮಾಡಬೇಡಿ ಎಂದು ಶಿವಣ್ಣ ಉತ್ತರಿಸಿದ್ದರು. ನಂತರ ಪ್ಲೋ ನಲ್ಲಿ ಬಂತು ಎಂದು ಅದೇ ವೇದಿಕೆಯಲ್ಲಿ ಕ್ಷಮೆ ಕೇಳಿ, ಪವನ್ ಸಿನಿಮಾ ಮಾಡಿ ಎಂದಿದ್ದಾರೆ.

ನಂ 1 ಯಾರಿಗೆ ಉತ್ತಮ ಪ್ರತಿಕ್ರಿಯೆ

ಸ್ಟಾರ್ ಸುವರ್ಣ ವಾಹಿತಿಯಲ್ಲಿ ಪ್ರತಿ ಭಾನುವಾರ ಪ್ರಸಾರ ಆಗುತ್ತಿರುವ ನಂ 1 ಯಾರಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಮೊದಲ ಎಪಿಸೋಡ್ ನಲ್ಲಿ ಶಿವಣ್ಣ ಹಾಗೂ ಉಪೇಂದ್ರ ಕಾಂಬಿನೇಶನ್ ಅನ್ನು ವೀಕ್ಷಕರು ಸಖತ್ ಎಂಜಾಯ್ ಮಾಡಿದ್ದಾರೆ.

English summary
Upendra's first guest appearance was on the Shivarajkumar's 'No 1 Yaari' program. 'No 1 Yaari' broadcast on Star Suvarna Channel. Upendra has given some suggestions to the kannada film directors in 'No 1 Yaari' Program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada