Just In
Don't Miss!
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್-ಕೇರಳ ಬ್ಲಾಸ್ಟರ್ಸ್
- News
ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಯಡಿಯೂರಪ್ಪಗೆ ಶುರುವಾಯ್ತು ಸಂಕಷ್ಟ!
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹಾಮಳೆಗೆ ತತ್ತರಿಸಿದ ಬೆಂಗಳೂರು: ಉಪೇಂದ್ರ 'ಪ್ರಜಾ'ಕೀಯದಲ್ಲಿದೆ ಶಾಶ್ವತ ಪರಿಹಾರ.!

ಆಕಾಶಕ್ಕೆ ತೂತು ಬಿದ್ದಂತೆ ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಧೋ ಎಂದು ಮಳೆ ಸುರಿಯುತ್ತಿದೆ. ಬೆಳೆ ಆಗುವ ಕಡೆ ಮಳೆ ಬಿದ್ದರೆ ಎಂಥವರಿಗೂ ಖುಷಿ. ಆದ್ರೆ, ಅಪ್ಪಟ 'ಸಿಲಿಕಾನ್ ಸಿಟಿ' ಬೆಂಗಳೂರಿನಲ್ಲಿ ಒಮ್ಮೆ ಜೋರು ಮಳೆ ಆದರೆ ಸಾಕು, ಸಮಸ್ಯೆಗಳ ಸಾಗರದಲ್ಲಿ ಇಡೀ ಬೆಂಗಳೂರಿಗರು ಸಿಲುಕಬೇಕು.
ಧಾರಾಕಾರವಾಗಿ ಮಳೆ ಸುರಿದರೆ ರಸ್ತೆಗಳೆಲ್ಲ ಕರೆಗಳಂತೆ ಪರಿವರ್ತನೆ ಆಗುತ್ತೆ, ಪರಿಣಾಮ, ಟ್ರಾಫಿಕ್ ಜಾಮ್. ತಗ್ಗು ಪ್ರದೇಶಗಳಲ್ಲಿ ಇರುವವರ ಗೋಳಂತೂ ಕೇಳೋದೇ ಬೇಡ. ಮಳೆ ಬಂದರೆ ಮನೆ ತುಂಬಾ ನೀರೋ ನೀರು. ಮಳೆಯಿಂದಾಗುವ ಅನಾಹುತಗಳನ್ನು ತಪ್ಪಿಸಲು ಮೇಯರ್ ಒಂದು ಪ್ರದಕ್ಷಿಣೆ ಹಾಕೊಂಡು ಬಂದರೂ ಆಗುವ ಉಪಯೋಗ ಏನು.?
ಬಿಬಿಎಂಪಿ ಹಾಗೂ ಬಿಡಿಎಗೆ ಯಾರು ಎಷ್ಟೇ ಹಿಡಿಶಾಪ ಹಾಕಿದರೂ, ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಮಹಾಮಳೆಗೆ ಬೆಂಗಳೂರು ಮಹಾನಗರ ತತ್ತರಿಸುತ್ತಿರುವಾಗಲೇ, ಅದಕ್ಕೊಂದು ಪರಿಹಾರ ಉಪೇಂದ್ರ ರವರ 'ಪ್ರಜಾಕೀಯ'ದಲ್ಲಿ ಲಭಿಸಿದೆ.
'ಪ್ರಜೆ'ಯೊಬ್ಬರ ಐಡಿಯಾ ಏನಾದರೂ ಬೆಂಗಳೂರಿನಲ್ಲಿ ಜಾರಿಗೆ ಬಂದರೆ, ಮಳೆ ಬಂದರೂ ಇನ್ನೆಂದೂ ಯಾರೂ ತಲೆತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ. ಹಾಗೇ, ಬರಗಾಲದಲ್ಲಿ ನೀರಿಗಾಗಿ ಪರದಾಡುವುದೂ ಬೇಕಾಗಿಲ್ಲ. ಅಂತಹ ಸೂಪರ್ ಸುಪ್ರೀಂ ಐಡಿಯಾ ಕನ್ನಡದ 'ಪ್ರಜೆ'ಯೊಬ್ಬರಲ್ಲಿದೆ. ಅದನ್ನ ಸ್ವತಃ ಉಪೇಂದ್ರ ಎಲ್ಲರ ಮುಂದೆ ತಂದಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿರಿ....

ಬೆಂಗಳೂರಿನ ಸಮಸ್ಯೆಗೆ ಇಲ್ಲಿದೆ ಪರಿಹಾರ
ರಾಜಕೀಯ, ರಾಜಕಾರಣ, ರಾಜನೀತಿ ಬಿಟ್ಟು ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಬಗ್ಗೆ ಮಾತನಾಡಿದ ಉಪೇಂದ್ರ, ತಮ್ಮ ತಮ್ಮ ಏರಿಯಾಗಳಲ್ಲಿ ಇರುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರ ಸೂಚಿಸಿ ಈ-ಮೇಲ್ ಅಥವಾ ಪತ್ರ ಬರೆಯುವ ಬಗ್ಗೆ ನಾಗರೀಕರಲ್ಲಿ ಕೇಳಿಕೊಂಡಿದ್ದರು. ಅದರಂತೆ ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯ ಕಳಪೆ ಕಾಮಗಾರಿ ಹಾಗೂ ಅದಕ್ಕೆ ಪರಿಹಾರ ಸೂಚಿಸಿ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗ ಸೌರವ್ ಬಾಬು ಉಪೇಂದ್ರ ರವರಿಗೆ ಈ-ಮೇಲ್ ಮಾಡಿದ್ದರು.

ಮೊಟ್ಟ ಮೊದಲ ಬಾರಿಗೆ ಉಪೇಂದ್ರ ಫೇಸ್ ಬುಕ್ ಲೈವ್
ಸೌರವ್ ಬಾಬು ಸೂಚಿಸಿದಂತೆ ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದರೆ ರಸ್ತೆಯಲ್ಲಿ ಗುಂಡಿಗಳು ಬೀಳುವುದಿಲ್ಲ, ರಸ್ತೆಯಲ್ಲಿ ನೀರು ನಿಲ್ಲುವುದಿಲ್ಲ, ಮನೆಗಳಿಗೆ ನೀರು ನುಗ್ಗುವುದಿಲ್ಲ ಹಾಗೂ ನೀರಿಗೆ ಹಾಹಾಕಾರ ಕೂಡ ಎದುರಾಗುವುದಿಲ್ಲ ಎಂಬ ಸಂಗತಿ ಉಪೇಂದ್ರ ರವರಿಗೆ ಮನದಟ್ಟಾಗಿದೆ. ಅದರಿಂದಲೇ, ಸೌರವ್ ಬಾಬು ರವರ ಐಡಿಯಾ ಎಲ್ಲರಿಗೂ ತಲುಪಲಿ ಎಂಬ ಕಾರಣಕ್ಕೆ ಉಪೇಂದ್ರ ನಿನ್ನೆ ಸಂಜೆ (ಸೆಪ್ಟೆಂಬರ್ 3) ಮೊಟ್ಟ ಮೊದಲ ಬಾರಿಗೆ ಫೇಸ್ ಬುಕ್ ಲೈವ್ ಗೆ ಬಂದಿದ್ದರು. ಅದು ಸೌರವ್ ಬಾಬು ರವರ ಜೊತೆಗೆ...

ಬೆಂಗಳೂರಿನಲ್ಲಿ ಆಗಿರುವ ಪ್ರಾಬ್ಲಂ ಏನು.?
ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ತೀರಾ ಕಳಪೆ ಆಗಿದೆ. ಹೀಗಾಗಿ ಮಳೆ ಬಂದರೆ ಅನಾಹುತ ಸೃಷ್ಟಿಯಾಗುತ್ತಿದೆ ಎನ್ನುತ್ತಾರೆ ಸೌರವ್ ಬಾಬು. ಚರಂಡಿ ಮೇಲಿನ ಚಪ್ಪಡಿ ಕಲ್ಲು ತೆಗೆಯಲು ಒಂದು ಕಾಂಟ್ರ್ಯಾಕ್ಟ್, ಚರಂಡಿಯಲ್ಲಿ ಮಣ್ಣು ತೆಗೆಯಲು ಇನ್ನೊಂದು ಕಾಂಟ್ರ್ಯಾಕ್ಟ್, ಚರಂಡಿ ಮೇಲೆ ಚಪ್ಪಡಿ ಕಲ್ಲು ಮುಚ್ಚಲು ಮತ್ತೊಂದು ಕಾಂಟ್ರ್ಯಾಕ್ಟ್... ಹೀಗೆ ಬೇರೆ ಬೇರೆ ಕಾಂಟ್ರ್ಯಾಕ್ಟ್ ಕೊಡಲಾಗುತ್ತಿದೆ. ಇಷ್ಟೆಲ್ಲ ಆಗಬೇಕು ಅಂದ್ರೆ ತಿಂಗಳುಗಳು ಬೇಕು. ಅಲ್ಲಿಯವರೆಗೂ, ಚರಂಡಿಯಿಂದ ತೆಗೆದ ಮಣ್ಣು ರಸ್ತೆ ಪಾಲಾಗಿರುತ್ತದೆ. ಇದರಿಂದ ಟ್ರಾಫಿಕ್ ಸಮಸ್ಯೆ ಒಂದು ಕಡೆ ಆದರೆ ಚರಂಡಿ ಒಳಗೆ ಮತ್ತಷ್ಟು ಮಣ್ಣು ಸೇರುವುದು ಇನ್ನೊಂದು ಸಮಸ್ಯೆ ಎಂದು ವಿವರಿಸುತ್ತಾರೆ ಸೌರವ್ ಬಾಬು.

ಸೌರವ್ ಬಾಬು ಸೂಚಿಸಿದ ಪರಿಹಾರ
ಈಗಾಗಲೇ ವಿದೇಶದ ಕೆಲವು ನಗರಗಳಲ್ಲಿ ಇರುವಂತೆ ರೋಡ್ ಸೈಡ್ ಪೈಪ್ ಡ್ರೇನೇಜ್ ಸಿಸ್ಟಮ್ (ರಸ್ತೆ ಪಕ್ಕ ಒಳಚರಂಡಿ ವ್ಯವಸ್ಥೆ) ಬೆಂಗಳೂರಿನಲ್ಲಿ ಜಾರಿಗೆ ತರಬೇಕು ಎನ್ನುತ್ತಾರೆ ಸೌರವ್ ಬಾಬು.

ಈ ವ್ಯವಸ್ಥೆ ಜಾರಿಗೆ ಬಂದರೆ...
ಪ್ರತಿಯೊಂದು ರಸ್ತೆ ಪಕ್ಕ ಪೈಪ್ ಹಾಕಿ, ಅದಕ್ಕೆ ಚೇಂಬರ್ ಗಳನ್ನ ಲಿಂಕ್ ಮಾಡಿದರೆ ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲುವುದಿಲ್ಲ. ಚೇಂಬರ್ ನಲ್ಲಿ ಕಸ ಕಟ್ಟಿಕೊಳ್ಳುವುದಿಲ್ಲ. ಒಂದು ವೇಳೆ ಕಟ್ಟಿಕೊಂಡರೂ, ಕ್ಲೀನ್ ಮಾಡಿಕೊಳ್ಳಬಹುದು ಅಂತಾರೆ ಸೌರವ್ ಬಾಬು. ಈ ವ್ಯವಸ್ಥೆ ಈಗಾಗಲೇ ಹಲವು ನಗರಗಳಲ್ಲಿ ಜಾರಿಯಲ್ಲಿವೆ. ಆದರೆ ಬೆಂಗಳೂರಿನಲ್ಲಿ ಇಲ್ಲ.

ನೀರಿನಿಂದ ರಸ್ತೆ ಹಾಳಾಗುತ್ತಿದೆ
ರಸ್ತೆಯಲ್ಲಿ ನೀರು ನಿಲ್ಲುವುದರಿಂದ, ರಸ್ತೆಗಳು ಬೇಗ ಹಾಳಾಗುತ್ತಿವೆ. ಟಾರ್ (ಡಾಂಬರು)ಗೂ ನೀರಿಗೂ ಆಗ್ಬರಲ್ಲ. ನೀರು ಬಿದ್ದರೆ ಡಾಂಬರು ಹಾಳಾಗುತ್ತದೆ. ಒಳಚರಂಡಿ ವ್ಯವಸ್ಥೆ ಸರಿಯಿದ್ದರೆ, ಎಷ್ಟೇ ವರ್ಷ ಆದರೂ ರಸ್ತೆ ಚೆನ್ನಾಗಿರುತ್ತದೆ. ರಸ್ತೆ ಮೇಲೆ ಬೀಳುವ ಪ್ರತಿ ಹನಿ ನೀರು ಕೂಡ ಒಳಚರಂಡಿ ತಲುಪಿದರೆ, ರಸ್ತೆ ಹಾಳಾಗುವುದಿಲ್ಲ - ಸೌರವ್ ಬಾಬು

ಬಜೆಟ್ ಎಷ್ಟು ಬೇಕು.?
ಸದ್ಯ ಬೆಂಗಳೂರಿನ ಒಳಚರಂಡಿ ವ್ಯವಸ್ಥೆಗೆ ಆಗುತ್ತಿರುವ ಖರ್ಚಿಗಿಂತ 50% ಕಡಿಮೆ ಬಜೆಟ್ ಇದಕ್ಕೆ ಸಾಕು. ಮೂರು ತಿಂಗಳಲ್ಲಿ ಈಗ ಆಗುತ್ತಿರುವ ಕೆಲಸವನ್ನ ಏಳು ದಿನಗಳಲ್ಲಿ ಮಾಡಿ ಮುಗಿಸಬಹುದು - ಸೌರವ್ ಬಾಬು

ಪದೇ ಪದೇ ಸಮಸ್ಯೆ ಎದುರಾಗಲ್ಲ.!
ರೋಡ್ ಸೈಡ್ ಪೈಪ್ ಡ್ರೇನೇಜ್ ಸಿಸ್ಟಮ್ (ರಸ್ತೆ ಪಕ್ಕ ಒಳಚರಂಡಿ ವ್ಯವಸ್ಥೆ) ಜಾರಿಗೆ ಬಂದರೆ ಬೆಂಗಳೂರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕ ಹಾಗೆ.

ನೀರಿನ ಹಾಹಾಕಾರ ಇರುವುದಿಲ್ಲ
ಪ್ರತಿ ಏರಿಯಾದ ಪಾರ್ಕ್ ನಲ್ಲಿ ಟ್ಯಾಂಕ್ ಕಟ್ಟಿ ಮಳೆ ನೀರನ್ನು ಸಂಗ್ರಹಿಸಿದರೆ, ಇಡೀ ಏರಿಯಾಗೆ ನೀರು ಒದಗಿಸಬಹುದು. ಬೆಂಗಳೂರಿಗೆ ಕಾವೇರಿ ನೀರು ಬೇಕಾಗುವುದಿಲ್ಲ. ನೀರಿಗಾಗಿ ಹಾಹಾಕಾರ ಎದುರಾಗುವುದಿಲ್ಲ.

ಅಧಿಕಾರಿಗಳು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ
ಸಂಪೂರ್ಣ ಅಧ್ಯಯನ ನಡೆಸಿ, ಪ್ರಾಜೆಕ್ಟ್ ರಿಪೋರ್ಟ್ ಮಾಡಿ, ಅಧಿಕಾರಿಗಳ ಹತ್ತಿರ ಹೋದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಬೇಸರದಿಂದ ಹೇಳುತ್ತಾರೆ ಸೌರವ್ ಬಾಬು.

ವ್ಯವಸ್ಥೆ ಬದಲಾಯಿಸಲು ಯಾರೂ ರೆಡಿ ಇಲ್ಲ
ವ್ಯವಸ್ಥೆ ಬದಲಾಯಿಸಲು ಯಾರೂ ರೆಡಿ ಇಲ್ಲ. ಪ್ರತಿ ವರ್ಷ ಕಾಂಟ್ರ್ಯಾಕ್ಟ್ ಸಿಗಬೇಕು, ಪ್ರತಿ ವರ್ಷ ಅದರಿಂದ ಲಾಭ ಮಾಡಬೇಕು ಎಂಬ ಕಾರಣಕ್ಕೆ ಬೆಂಗಳೂರಿನ ಒಳಚರಂಡಿ ವ್ಯವಸ್ಥೆ ಕಾಮಗಾರಿ ದಿನೇದಿನೇ ಕಳಪೆ ಆಗುತ್ತಿದೆ - ಸೌರವ್ ಬಾಬು

ವಿಡಿಯೋ ನೋಡಿ...
ಒಳಚರಂಡಿ ವ್ಯವಸ್ಥೆ ಬಗ್ಗೆ ಉಪೇಂದ್ರ ಹಾಗೂ ಸೌರವ್ ಬಾಬು ಮಾತನಾಡಿರುವ ವಿಡಿಯೋ ಇಲ್ಲಿದೆ, ಲಿಂಕ್ ಕ್ಲಿಕ್ ಮಾಡಿ ಪೂರ್ತಿ ನೋಡಿ

ನೀವೇನಂತೀರಾ.?
ನಾಲ್ಕು ವರ್ಷಗಳಿಂದ ಒಳ ಚರಂಡಿ ಬಗ್ಗೆ ಅಧ್ಯಯನ ಮಾಡಿರುವ ಸೌರವ್ ಬಾಬು ರವರ 'ರೋಡ್ ಸೈಡ್ ಪೈಪ್ ಡ್ರೇನೇಜ್ ಸಿಸ್ಟಮ್ (ರಸ್ತೆ ಪಕ್ಕ ಒಳಚರಂಡಿ ವ್ಯವಸ್ಥೆ)' ಬಗ್ಗೆ ಉಪೇಂದ್ರ ರವರಿಗೆ ಭರವಸೆ ಮೂಡಿದೆ. ಈ ಐಡಿಯಾ ಬಗ್ಗೆ ನೀವೇನಂತೀರಾ.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ....