For Quick Alerts
  ALLOW NOTIFICATIONS  
  For Daily Alerts

  ವಿಡಿಯೋ : ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿ ಕಂಡ ಉಪೇಂದ್ರ

  |

  ಕನ್ನಡದಲ್ಲಿ ಈಗಾಗಲೇ ವೆಬ್ ಸೀರಿಸ್ ಟ್ರೆಂಡ್ ಶುರುವಾಗಿದೆ. ಶಿವರಾಜ್ ಕುಮಾರ್ ಒಂದು ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದರ ಹಿಂದೆಯೇ ಉಪೇಂದ್ರ ಈಗ ವೆಬ್ ಸೀರಿಸ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

  ವೆಬ್ ಸೀರಿಸ್ ಪ್ರಪಂಚಕ್ಕೆ ಕಾಲಿಟ್ಟ ಸೂಪರ್ ಸ್ಟಾರ್ ಉಪೇಂದ್ರ

  ರಿಯಲ್ ಸ್ಟಾರ್ ಉಪೇಂದ್ರ ಈಗ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಉಪ್ಪಿ 'ಜೋಶಿಲೆ' ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ, ಇದು ಉಪೇಂದ್ರ ಅವರ ಮೊದಲ ವೆಬ್ ಸೀರಿಸ್ ಆಗಿದೆ.

  'ಜೋಶಿಲೆ' ನಟ ವಿನಾಯಕ್ ಜೋಶಿ ಅವರ ಒಂದು ಅದ್ಬುತ ಪ್ರಯತ್ನ. ಈ ವೆಬ್ ಸೀರಿಸ್ ಯೂಟ್ಯೂಬ್ ನಲ್ಲಿ ಹೆಚ್ಚು ಹಿಟ್ಸ್ ಪಡೆದಿಲ್ಲವಾದರೂ, ಅದನ್ನು ನೋಡಿದವರಿಗೆ ಸ್ಫೂರ್ತಿ ನೀಡುತ್ತದೆ. ಜೀವನವನ್ನೇ ಗೆದ್ದ ಅನೇಕ ಸಾಧಕರನ್ನು ಇಲ್ಲಿ ತೋರಿಸಲಾಗುತ್ತಿದೆ.

  ಇಂತಹ ಒಂದೊಳ್ಳೆ ವೆಬ್ ಸೀರಿಸ್ ನ ಆರನೇ ಸಂಚಿಕೆಯಲ್ಲಿ ಉಪೇಂದ್ರ ಕೂಡ ಇದ್ದಾರೆ. ಬುದ್ಧಿಮಾಂದ್ಯರ ಬಗ್ಗೆ ಇರುವ ಅರ್ಥಪೂರ್ಣ ಸಂಚಿಕೆಗೆ ಉಪೇಂದ್ರ ಕೈ ಜೋಡಿಸಿದ್ದಾರೆ. ನಿನ್ನೆ ಈ ಸಂಚಿಕೆ ಸಖತ್ ಸ್ಟೂಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

  ಯಾವ ಸಿನಿಮಾಗಳಿಗೆ ಕಡಿಮೆ ಇಲ್ಲದ ರೀತಿ ಈ ವೆಬ್ ಸೀರಿಸ್ ಮೇಕಿಂಗ್ ಕೆಲಸ ನಡೆದಿದೆ. ನಾಗರ್ಜುನ್ ರವಿ ತೆಗೆದ ದೃಶ್ಯಗಳು ತುಂಬ ಚೆನ್ನಾಗಿವೆ. ಸಂತೋಷ್ ರಾಧಕೃಷ್ಣನ್ ಆ ದೃಶ್ಯಗಳ ಅಂದವನ್ನು ಹೆಚ್ಚಿಸಿವೆ.

  English summary
  Kannada actor Upendra in appearance in Vinayak Joshi's Joshelay web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X