twitter
    For Quick Alerts
    ALLOW NOTIFICATIONS  
    For Daily Alerts

    'ಪ್ರಜಾಕೀಯ'ಕ್ಕೆ ಜೀವ ತುಂಬಲು ಸಜ್ಜಾದ ಉಪ್ಪಿ: ಹುಟ್ಟುಹಬ್ಬಕ್ಕೆ ಸೆಕೆಂಡ್ ಇನ್ನಿಂಗ್ಸ್

    |

    ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಆರಂಭದಲ್ಲೇ ಹಿನ್ನಡೆ ಅನುಭವಿಸಿದ್ದರು. ಯಾರೋ ಕಟ್ಟಿದ್ದ ಪಕ್ಷಕ್ಕೆ ಸಾರಥಿಯಾಗಿ, ನಂತರ ಆದ ಕೆಲವು ಬದಲಾವಣೆಗಳಿಂದ ಆ ಪಕ್ಷದಿಂದ ಹೊರಬಂದರು. ಅಲ್ಲಿಗೆ ಉಪ್ಪಿಯ ಮೊದಲ ಹೆಜ್ಜೆಗೆ ಸೋಲಾಗಿತ್ತು.

    ಹೀಗಾಗಿ, ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ಇದೀಗ ಲೋಕಸಭಾ ಚುನಾವಣೆ ಸಮೀಸುತ್ತಿದೆ. ಈಗಲಾದರೂ ಉಪ್ಪಿ ಸ್ಪರ್ಧೆ ಮಾಡ್ತಾರಾ ಎಂಬ ಕುತೂಹಲ ಕಾಡುತ್ತಿದೆ.

    ಕೆ.ಪಿ.ಜೆ.ಪಿಗೆ ಉಪೇಂದ್ರ ಗುಡ್ ಬೈ: ಹೊಸ 'ಪ್ರಜಾಕೀಯ' ಪಕ್ಷ ಕಟ್ಟಲು ನಿರ್ಧಾರ!ಕೆ.ಪಿ.ಜೆ.ಪಿಗೆ ಉಪೇಂದ್ರ ಗುಡ್ ಬೈ: ಹೊಸ 'ಪ್ರಜಾಕೀಯ' ಪಕ್ಷ ಕಟ್ಟಲು ನಿರ್ಧಾರ!

    ಹೀಗಿರುವಾಗ, ಉಪೇಂದ್ರ ಅವರು, ತಮ್ಮ ಅಭಿಮಾನಿಗಳಿಗೆ ಹಾಗೂ ತಮ್ಮ ಪ್ರಜಾಕೀಯ ಕಾರ್ಯಕರ್ತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೌದು, ಉಪೇಂದ್ರ ಅವರು ಈ ಬಾರಿ ತಮ್ಮದೇ ಸ್ವಂತ ಪಕ್ಷ ಕಟ್ಟಿ ಘೋಷಿಸುತ್ತಿದ್ದಾರೆ. ಪಕ್ಷದ ಹೆಸರು ಕೂಡ ಅಂತಿಮಗೊಳಿಸಿದ್ದು, ಅಧಿಕೃತವಾಗಿ ಪ್ರಕಟ ಮಾಡಲು ಸಜ್ಜಾಗಿದ್ದಾರೆ. ಯಾವುದು ಆ ಪಾರ್ಟಿ, ಯಾವಾಗ ಘೋಷಣೆ ಎಂಬುದನ್ನ ತಿಳಿಯಲು ಮುಂದೆ ಓದಿ.....

    ಉಪೇಂದ್ರ ಪಕ್ಷದ ಹೆಸರು ಅಂತಿಮ

    ಉಪೇಂದ್ರ ಪಕ್ಷದ ಹೆಸರು ಅಂತಿಮ

    ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ (ಕೆಪಿಜೆಪಿ) ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಉಪೇಂದ್ರ ಅವರು ಈಗ ತಮ್ಮದೇ ಸ್ವಂತ ಪಾರ್ಟಿಯನ್ನ ಸ್ಥಾಪಿಸಿಕೊಂಡಿದ್ದಾರೆ. ಈ ಪಾರ್ಟಿಯ ಹೆಸರು ಅಂತಿಮವಾಗಿದ್ದು, ಉತ್ತಮ ಪ್ರಜಾಕೀಯ ಪಾರ್ಟಿ (ಯು.ಪಿ.ಪಿ) ಎಂದು ಘೋಷಿಸಲಿದ್ದಾರೆ.

    ಪ್ರತ್ಯೇಕ ಹೊಸ ಪಕ್ಷ ಕಟ್ಟಲು ಉಪೇಂದ್ರ ಮಾಡಿರುವ ಮಾಸ್ಟರ್ ಪ್ಲಾನ್ ಇದು.?ಪ್ರತ್ಯೇಕ ಹೊಸ ಪಕ್ಷ ಕಟ್ಟಲು ಉಪೇಂದ್ರ ಮಾಡಿರುವ ಮಾಸ್ಟರ್ ಪ್ಲಾನ್ ಇದು.?

    18 ರಂದು ಲೋಕಾರ್ಪಣೆ

    18 ರಂದು ಲೋಕಾರ್ಪಣೆ

    ಉಪೇಂದ್ರ ಅವರ 'ಉತ್ತಮ ಪ್ರಜಾಕೀಯ ಪಾರ್ಟಿ' ಪಕ್ಷವನ್ನ ಅಧಿಕೃತವಾಗಿ 18ನೇ ತಾರೀಖು ತಮ್ಮ ನಿವಾಸದಲ್ಲೇ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಸೆಪ್ಟೆಂಬರ 18 ಉಪೇಂದ್ರ ಅವರ ಹುಟ್ಟುಹಬ್ಬವಿದೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ ಎಂದು ಮುಕ್ತವಾಗಿ ಆಹ್ವಾನಿಸಿದ್ದಾರೆ.

    ರಿಯಲ್ ಸ್ಟಾರ್ ಉಪ್ಪಿಯ ಕಾಲೆಳೆಯುತ್ತಿರುವ ಅಭಿಮಾನಿಗಳುರಿಯಲ್ ಸ್ಟಾರ್ ಉಪ್ಪಿಯ ಕಾಲೆಳೆಯುತ್ತಿರುವ ಅಭಿಮಾನಿಗಳು

    ಲೋಕಸಭೆಗೆ ಸ್ಪರ್ಧೆ ಖಚಿತ.!

    ಲೋಕಸಭೆಗೆ ಸ್ಪರ್ಧೆ ಖಚಿತ.!

    ಉಪೇಂದ್ರ ಅವರು ತಮ್ಮ ಪಕ್ಷವನ್ನೇ ಇನ್ನು ಅಂತಿಮ ಮಾಡಿಲ್ಲ. ಇನ್ನು ಸಂಘಟನೆ ಯಾವಾಗ, ಅಭ್ಯರ್ಥಿಗಳು ಯಾವಾಗ ಎನ್ನುತ್ತಿದ್ದವರಿಗೆ ಉತ್ತರ ಕೊಡಲು ಉಪ್ಪಿ ಸಿದ್ಧವಾಗಿದ್ದಾರೆ. ಈಗ ಪಕ್ಷ ಘೋಷಿಸುತ್ತಿರುವುದನ್ನ ನೋಡಿದ್ರೆ, ಬಹುಶಃ ಉಪೇಂದ್ರ ಅವರು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತವೆನ್ನಲಾಗುತ್ತಿದೆ.

    'ಪ್ರಜಾಕೀಯ'ದತ್ತ ಹೆಜ್ಜೆ ಹಾಕಿದ ಪಾಕಿಸ್ತಾನಕ್ಕೆ ಉಪ್ಪಿ ಪ್ರಚಾರ: ಜನರಿಂದ ಟೀಕೆ'ಪ್ರಜಾಕೀಯ'ದತ್ತ ಹೆಜ್ಜೆ ಹಾಕಿದ ಪಾಕಿಸ್ತಾನಕ್ಕೆ ಉಪ್ಪಿ ಪ್ರಚಾರ: ಜನರಿಂದ ಟೀಕೆ

    ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ

    ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ

    ಅಂದ್ಹಾಗೆ, ಕಳೆದ ಬಾರಿ ಕೆಪಿಜೆಪಿ ಪಕ್ಷದಲ್ಲಿದ್ದಾಗ ಉಪೇಂದ್ರ ಅವರು ಕೆಲವು ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ಅಂತಿಮ ಮಾಡಿಕೊಂಡಿದ್ದರು. ಉಪ್ಪಿ ಪಕ್ಷ ತೊರೆದಾಗ ಅವರು ಕೂಡ ಉಪ್ಪಿ ಜೊತೆಯಲ್ಲೆ ಬಂದರು. ಅವರಿಗೆ ಈಗ ಲೋಕಸಭೆಯಲ್ಲಿ ಟಿಕೆಟ್ ಸಿಗಬಹುದು. ಪಕ್ಷ ಅಧಿಕೃತವಾಗಿ ಘೋಷಿಸಿದ ನಂತರ ಬಹುಶಃ ಟಿಕೆಟ್ ಹಂಚುವ ಕೆಲಸಕ್ಕೆ ಉಪ್ಪಿ ಮುಂದಾಗಬಹುದು. ಇದಕ್ಕೆಲ್ಲಾ ಉತ್ತರ 18 ರಂದು ಸಿಗಲಿದೆ.

    ನಂಬಿದವರೇ ಉಪೇಂದ್ರಗೆ ಮೋಸ ಮಾಡಿದ್ರಂತೆ.! ಯಾರದು.?ನಂಬಿದವರೇ ಉಪೇಂದ್ರಗೆ ಮೋಸ ಮಾಡಿದ್ರಂತೆ.! ಯಾರದು.?

    ಅಭಿಮಾನಿಗಳಿಂದ ಮನವಿ

    ಅಭಿಮಾನಿಗಳಿಂದ ಮನವಿ

    ''ಈ ಬಾರಿಯಾದರೂ ಯಾವುದೇ ಗೊಂದಲವಿಲ್ಲದೇ ಸ್ಪಷ್ಟ ನಿಲುವಿನೊಂದಿಗೆ ಬನ್ನಿ. ಬಹಳಷ್ಟು ಜನರ ವಿಶ್ವಾಸ ಗಳಿಸಿದ ನೀವೂ ನಿಮ್ಮದೇ ಗೊಂದಲದಿಂದ ಬರೀ ಮಾತಷ್ಟೆ ಅನಿಸುವಂತಾಗಿದೆ. ಇದು ನನ್ನ ವಿನಂತಿ ಅಷ್ಟೇ'' ಎಂದು ಕೆಲವರು ಮನವಿ ಮಾಡುತ್ತಿದ್ದಾರೆ. ''ಅಣ್ಣ ಈ ಬಾರಿ ಏನೇ ಇದ್ದರೂ ನಿಮ್ಮ ಇರುವಿಕೆಯಲ್ಲಿ ಸ್ವತಃ ನೀವೇ ಖುದ್ದಾಗಿ ಎಲ್ಲವನ್ನು ಮಾಡಿ ನನ್ನ ಬೆಂಬಲ ಕೂಡ ನಿಮಗೆ ನಿಮ್ಮ ಹೊರತು ಎಲ್ಲರೂ ಡೋಂಗಿಗಳೇ'' ಎನ್ನುತ್ತಿದ್ದಾರೆ.

    English summary
    Kannada actor Upendra officially launching 'Uttama Prajaakeeya Party' (UPP) at his residence on 18-09-18 at 10.30.
    Sunday, September 16, 2018, 16:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X