»   » ವಿಭೂತಿ, ತಿಲಕವೇ ಉಪೇಂದ್ರ ಚಿತ್ರದ ಶೀರ್ಷಿಕೆ

ವಿಭೂತಿ, ತಿಲಕವೇ ಉಪೇಂದ್ರ ಚಿತ್ರದ ಶೀರ್ಷಿಕೆ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರು ಸಿಂಬಲ್ ನಲ್ಲೇ ಚಿತ್ರ ಮಾಡಿ ಗೆದ್ದವರು. ಅವರ ಸ್ವಸ್ತಿಕ್, ಎ, ಶ್, ಸೂಪರ್ ಚಿತ್ರದ ಶೀರ್ಷಿಕೆಗಳೆಲ್ಲಾ ಸಿಂಬಲ್ ನಲ್ಲೇ ಬಂದಂತಹವು. ಇದೀಗ ಅವರ 'ಬಸವಣ್ಣ' ಚಿತ್ರವನ್ನೂ ಸಿಂಬಲ್ ನಲ್ಲೇ ಬಿಡುಗಡೆ ಮಾಡಲಾಗುತ್ತಿದೆ.

'ಬಸವಣ್ಣ' ಎಂಬ ಶೀರ್ಷಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರು ವಿಭೂತಿ, ತಿಲಕದ ಸಿಂಬಲ್ ನಲ್ಲೇ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇದನ್ನು ಶನಿವಾರ (ಸೆ.27) ಸಂಜೆ ಅಧಿಕೃತವಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಗಿದೆ. [ಜನಿವಾರ ಹಾಕಿದವರೆಲ್ಲಾ ಬಸವಣ್ಣ ಆಗಲು ಸಾಧ್ಯವೆ?]


ಈ ಹಿಂದೆಯೇ ಚಿತ್ರದ ಶೀರ್ಷಿಕೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ವಿಧಾನಸಭೆಯಲ್ಲಿ ಧ್ವನಿಯೆತ್ತಿದ್ದರು. ಸಾಕಷ್ಟು ವಾದವಿವಾದ ಬಳಿಕ ಶೀರ್ಷಿಕೆ ಇಲ್ಲದಂತೆ ಚಿತ್ರ ಮಾಡುವುದಾಗಿ ಉಪೇಂದ್ರ ಹಾಗೂ ನಿರ್ದೇಶಕ ಶ್ರೀನಿವಾಸರಾಜು ಪ್ರಕಟಿಸಿದ್ದರು.
Upendra

'ಬಸವಣ್ಣ' ಅವರ ವಚನಗಳನ್ನು ಕೇಳುತ್ತಾ ಬೆಳೆದವರು ನಾವೆಲ್ಲಾ. ಇಡೀ ಪ್ರಚಂಚಕ್ಕೇ ಗೊತ್ತಿರುವ ವ್ಯಕ್ತಿ ಬಸವಣ್ಣ. ಅವರ ಬಗ್ಗೆ ನಾವು ಕೆಟ್ಟ ಚಿತ್ರ ತೆಗೆಯಲು ಹೇಗೆ ಮನಸ್ಸು ಬರುತ್ತದೆ. ಒಂದು ವೇಳೆ ಎಲ್ಲರ ಮನಸ್ಸಿಗೆ ನೋವಾಗುತ್ತದೆ ಎನ್ನುವುದಾದರೆ ಶೀರ್ಷಿಕೆ ಬದಲಾಯಿಸೋಣ ಬಿಡಿ ಎಂದು ಉಪೇಂದ್ರ ಈ ಹಿಂದೆಯೇ ಹೇಳಿದ್ದರು. (ಏಜೆನ್ಸೀಸ್)
English summary
Real Star Upendra upcoming movie 'Basavanna' released with a symbol as the title. The movie is being directed by Srinivasaraju and produced by C R Manohar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada