For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸ್ಟಾರ್ ಉಪೇಂದ್ರ ಹೊಸ ಚಿತ್ರ ತ್ರಿಮೂರ್ತಿ

  By Rajendra
  |

  ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಚಿತ್ರಕ್ಕೆ 'ತ್ರಿಮೂರ್ತಿ' ಎಂದು ಹೆಸರಿಡಲಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಉಪ್ಪಿಗೆ ಮಾಸ್ ಮಸಾಲಾ ನಿರ್ದೇಶಕ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ.

  ಈ ಮುನ್ನ ಈ ಚಿತ್ರಕ್ಕೆ 'ತ್ರಿವಿಕ್ರಮ' ಎಂದು ಹೆಸರಿಡಲಾಗಿತ್ತು. ಈಗ ಚಿತ್ರದ ಶೀರ್ಷಿಕೆಯನ್ನು 'ತ್ರಿವಿಕ್ರಮ' ಎಂದಿಡಲಾಗಿದೆ. ಚಿತ್ರಕ್ಕೆ ನಾಯಕಿಯಾಗಿ ರಾಗಿಣಿ ದ್ವಿವೇದಿ ಅವರನ್ನು ಆಯ್ಕೆ ಮಾಡಿರುವುದಾಗಿ ಓಂ ಪ್ರಕಾಶ್ ರಾವ್ ತಿಳಿಸಿದ್ದಾರೆ.

  ಕತೆ ಕದ್ದು ಚಿತ್ರ ಮಾಡುವುದು ನಿಜ ಎಂದು ಎದೆತಟ್ಟಿ ಹೇಳಿಕೊಳ್ಳುವ ಭಾರತೀಯ ಚಿತ್ರರಂಗದ ಏಕೈಕ ನಿರ್ದೇಶಕ ಎಂದರೆ ಓಂ ಪ್ರಕಾಶ್ ರಾವ್. ಈ ಬಗ್ಗೆ ಅವರಿಗೆ ಹೆಮ್ಮೆಯೂ ಇದೆ. ಕತೆ ಕದ್ದರೂ ತಮ್ಮದೇ ಆದ ಶೈಲಿಯಲ್ಲಿ ಚಿತ್ರವನ್ನು ಅವರು ತೆರೆಗೆ ತಂದು ಪ್ರೇಕ್ಷಕರನ್ನು ಸೆಳೆಯುವ ತಂತ್ರ ಮಂತ್ರಗಳು ಅವರಿಗೆ ಕರಗತವಾಗಿದೆ.

  'ಆರಕ್ಷಕ' ಚಿತ್ರದ ಬಳಿಕ ಉಪ್ಪಿ ಜೊತೆ ರಾಗಿಣಿ ಅಭಿನಯಿಸಲಿರುವ ಎರಡನೇ ಚಿತ್ರ ಇದಾಗಲಿದೆ. ಓಂ ಪ್ರಕಾಶ್ ನಿರ್ದೇಶನದ 'ಶಿವ' ಚಿತ್ರದಲ್ಲೂ ರಾಗಿಣಿ ಅಭಿನಯಿಸಿದ್ದಾರೆ. ಆ ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ರಾಗಿಣಿ ಅಭಿನಯದ 'ರಾಗಿಣಿ ಐಪಿಎಸ್' ಕೂಡ ಭರದಿಂದ ಚಿತ್ರೀಕರಣ ಸಾಗಿದೆ.

  ಓಂ ಪ್ರಕಾಶ್ ರಾವ್ ಹಾಗೂ ಉಪೇಂದ್ರ ಕಾಂಬಿನೇಷನ್ 'ತ್ರಿಮೂರ್ತಿ' ಚಿತ್ರಕ್ಕೆ ಈ ಹಿಂದೆ ತಾಪಸಿ ಪನ್ನು ನಾಯಕಿ ಎನ್ನಲಾಗಿತ್ತು. ರಾಗಿಣಿ ಜೊತೆ 'ಶಿವ' ಚಿತ್ರ ಮಾಡಿ ಮುಗಿಸಿದ್ದೇನೆ. ಆಕೆ ಅದ್ಭುತವಾಗಿ ಅಭಿನಯಿಸಿದ್ದಾರೆ. ಮತ್ತೊಮ್ಮೆ ಅವರ ಜೊತೆ ಕೆಲಸ ಮಾಡಬೇಕು ಅನ್ನಿಸಿತು. ಇದಕ್ಕೆ ಅವರೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದಿದ್ದಾರೆ ಓಂ.

  ಸದ್ಯಕ್ಕೆ 'ರಾಗಿಣಿ ಐಪಿಎಸ್' ಚಿತ್ರದಲ್ಲಿ ಸಿಕ್ಕಾಪಟ್ಟೆ ತೊಡಗಿಕೊಂಡು ಸುಸ್ತಾಗಿರುವ ರಾಗಿಣಿ ಹತ್ತು ದಿನಗಳ ಕಾಲ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಅದಾದ ಬಳಿಕವಷ್ಟೇ ತ್ರಿಮೂರ್ತಿ ಚಿತ್ರಕ್ಕೆ ಹೊರಳಲಿದ್ದಾರೆ. ಶೀಘ್ರದಲ್ಲೇ ಸಹಿ ಹಾಕುವುದಾಗಿ ತಿಳಿಸಿದ್ದಾರೆ.

  ಉಪೇಂದ್ರ ಅಭಿನಯದ 'ಗಾಡ್ ಫಾದರ್' ಚಿತ್ರ ಬಾಕ್ಸಾಫೀಸಲ್ಲಿ ಭಾರಿ ಸದ್ದು ಮಾಡದಿದ್ದರೂ ತಕ್ಕಮಟ್ಟಿಗೆ ನಿರ್ಮಾಪಕ ಕೆ ಮಂಜು ಅವರ ಕೈ ಬೆಚ್ಚಗೆ ಮಾಡಿದೆ. ಮಾಸ್ ಹಾಗೂ ಕ್ಲಾಸ್ ಎರಡೂ ಕ್ಯಾಟಗರಿಗೆ ಸೇರಿದ ಈ ಚಿತ್ರ ಮೊದಲ ವಾರದಲ್ಲಿ ರು.4.60 ಕೋಟಿ ಗಳಿಸಿದೆ ಎನ್ನುತ್ತಾರೆ ಮಂಜು. (ಏಜೆನ್ಸೀಸ್)

  English summary
  Real Star Upendra and mass director Om Prakash Rao for first time teaming up in a Kannada film titled as Trimurthi. After Arakshaka actress Ragini Dwivedi shakes leg with Upendra in this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X