'ಪ್ರಜಾಕೀಯ'ದ ಮೂಲ ಉದ್ದೇಶ ಬಿಚ್ಚಿಟ್ಟ ಉಪೇಂದ್ರ

By Bharath Kumar

Recommended Video

ಉಪ್ಪಿ ಪ್ರಜಾಕೀಯದ ಉದ್ದೇಶ ಏನು ..?? | Filmibeat Kannada

ರಿಯಲ್ ಸ್ಟಾರ್ ಉಪೇಂದ್ರ 'ಕೆಪಿಜೆಪಿ' ಮೂಲಕ ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿ, ನಂತರ ಪಕ್ಷದಲ್ಲಿ ಉಂಟಾದ ಆಂತರಿಕ ಬೆಳವಣಿಗೆಗಳಿಂದ ಬೇಸತ್ತು ಹೊರಗೆ ಬಂದಿದ್ದರು. 'ಕೆಪಿಜೆಪಿ' ತೊರೆದ ಮೇಲೆ 'ಉತ್ತಮ ಪ್ರಜಾ ಪಾರ್ಟಿ' ಎಂಬ ಹೆಸರಿನಲ್ಲಿ ಪಕ್ಷ ಸಂಘಟನೆ ಮುಂದುವರಿಸಿರುವ ಉಪ್ಪಿ ತಮ್ಮ ಪಕ್ಷದ ಮೂಲ ಉದ್ದೇಶವೇನು ಎಂಬುದನ್ನ ಹಂಚಿಕೊಂಡಿದ್ದಾರೆ.

ಪ್ರಜೆಗಳಿಗೆ ಸಿಗಬೇಕಾದ ಸವಲತ್ತುಗಳು, ಯೋಜನೆಗಳು ನೇರವಾಗಿ ಅವರಿಗೆ ತಲುಪಿತ್ತಿಲ್ಲ ಎಂಬುದು ಗೊತ್ತಿರುವ ವಿಚಾರ. ಇದನ್ನ ನೇರವಾಗಿ ಜನರಿಗೆ ಸಿಗುವಂತೆ ಮಾಡುವುದು ಪ್ರಜಾಕೀಯದ ಉದ್ದೇಶವೆಂದು ತಿಳಿಸಿದ್ದಾರೆ.

''ಉತ್ತಮ ಪ್ರಜಾಕೀಯದ ಪಕ್ಷದ ಮೂಲ ಉದ್ದೇಶ. ಪ್ರಜೆಗಳ ತೆರಿಗೆ ಹಣವನ್ನು (ಬಜೆಟ್) ಭ್ರಷ್ಟ ವ್ಯವಸ್ಥೆಯ ಸರಪಣಿಯಿಂದ ಹೊರಗೆ ತಂದು ನೇರವಾಗಿ ಪ್ರಜೆಗಳಿಗೆ ಸಂಪೂರ್ಣ ಪಾರದರ್ಶಕತೆಯಿಂದ ತಲುಪಿಸುವ ವ್ಯವಸ್ಥೆ'' ಎಂದು ಟ್ವೀಟ್ ಮಾಡಿದ್ದಾರೆ.

Upendra revels about basic purpose of prajakiya

ಸದ್ಯ, ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಉಪ್ಪಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೋರಾಟ, ಕನಸು, ಭವಿಷ್ಯದ ದೇಶವನ್ನ ಕಟ್ಟಿಕೊಡುತ್ತಿದ್ದಾರೆ. ಪ್ರಜಾಕೀಯದ ಕೆಲಸ ಹೇಗಿರುತ್ತೆ, ಅದರ ತತ್ವಗಳೇನು.? ಆದರ್ಶವೇನು.? ಉದ್ದೇಶಗಳೇನು ಎಂಬುದನ್ನ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನುಳಿದಂತೆ ಆರ್.ಚಂದ್ರು ನಿರ್ದೇಶನ ಮಾಡುತ್ತಿರುವ 'ಐ ಲವ್ ಯು' ಚಿತ್ರದಲ್ಲಿ ಉಪೇಂದ್ರ ಅಭಿನಯಿಸುತ್ತಿರುವುದು ನಿಮಗೆಲ್ಲ ಗೊತ್ತಿದೆ. ಇದರ ಜೊತೆಗೆ 'ಡಾ ಮೋದಿ' ಸೇರಿದಂತೆ ಎರಡ್ಮೂರು ಚಿತ್ರಗಳಿಗೂ ಉಪೇಂದ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಐ ಲವ್ ಯು' ಚಿತ್ರ ಮುಗಿದ ಬಳಿಕ 'ಅಧೀರ' ಚಿತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. 'ಅಧೀರ' ಎಂಬ ಚಿತ್ರಕ್ಕೆ ಯುವ ನಿರ್ದೇಶಕ ಸಂತು ಆಕ್ಷನ್ ಕಟ್ ಹೇಳಲಿದ್ದಾರೆ.

More from Filmibeat

English summary
Kannada actor, Uttama praja party leader real star upendra has revels about basic purpose of prajakeeya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X