For Quick Alerts
  ALLOW NOTIFICATIONS  
  For Daily Alerts

  ಜೂನ್ 9ಕ್ಕೆ ಉಪ್ಪಿ ಅಭಿಮಾನಿಗಳಿಗೆ ಕಾದಿದೆ ಸಂತಸದ ಸುದ್ದಿ

  By Suneetha
  |

  ಮೊನ್ನೆ ಮೊನ್ನೆ ಶೂಟಿಂಗ್ ಸಂದರ್ಭದಲ್ಲಿ ತಮ್ಮ ಎಡಗಾಲು ಉಳುಕಿಸಿಕೊಂಡಿದ್ದ ನಟ ಉಪೇಂದ್ರ ಅವರು ಸಂಪೂರ್ಣ ಗುಣಮುಖರಾಗಿ ತಮ್ಮ ಪರಿಚಯದ ಹಾಡಿನ ಚಿತ್ರೀಕರಣವನ್ನು ಪೂರ್ತಿ ಮಾಡಿದ್ದಾರೆ.

  ಕನ್ನಡ ಬಾಷೆ ಮತ್ತು ಕರ್ನಾಟಕದ ಬಗ್ಗೆ ಇರುವ ನಾಡಗೀತೆಯುಳ್ಳ ಈ ಹಾಡಿನ ಚಿತ್ರೀಕರಣ ಇತ್ತೀಚೆಗೆ ಸಂಪೂರ್ಣಗೊಂಡಿದೆ. ಇದು ಚಿತ್ರದಲ್ಲಿ ಉಪೇಂದ್ರ ಅವರನ್ನು ಪರಿಚಯ ಮಾಡುವ ಹಾಡಾಗಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ಹಾಡನ್ನು ಹಾಡಿದ್ದಾರೆ.['ಕಲ್ಪನಾ-2' ಶೂಟಿಂಗ್ ಸೆಟ್ ನಲ್ಲಿ ನಡೆದ್ದೇನು? ಉಪೇಂದ್ರಗೆ ಏನಾಯ್ತು?]

  ಬೆಂಗಳೂರಿನ ಸುತ್ತ-ಮುತ್ತ ಚಿತ್ರೀಕರಣಗೊಂಡ ಈ ಹಾಡಿಗೆ ನೃತ್ಯ ನಿರ್ದೇಶಕ ಕಲೈ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಸಹಕಲಾವಿದರು ಉಪೇಂದ್ರ ಅವರ ಜೊತೆ ಈ ನೃತ್ಯದಲ್ಲಿ ಹೆಜ್ಜೆ ಹಾಕಿದ್ದು, ವಿಶೇಷವಾಗಿ 150ಕ್ಕೂ ಹೆಚ್ಚು ಕಿರಿಯ ನಟರು ಉಪ್ಪಿ ಅವರ ಜೊತೆ ಹಾಡಿನಲ್ಲಿ ಪಾಲ್ಗೊಂಡಿದ್ದಾರೆ.[ರಿಯಲ್ ಉಪ್ಪಿ ಅವರ ಹಾರರ್ ಚಿತ್ರದಲ್ಲಿ ನಾಡಗೀತೆ ಕಂಪು]

  ಸುಮಾರು 4 ದಿನಗಳಲ್ಲಿ ಈ ಹಾಡಿನ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಇದೀಗ ನಟಿ ಅವಂತಿಕಾ ಮತ್ತು ಉಪ್ಪಿ ಅವರ ನಡುವಿನ ರೋಮ್ಯಾಂಟಿಕ್ ಹಾಡಿನ ಚಿತ್ರೀಕರಣಕ್ಕೆ ಇಡೀ ಚಿತ್ರತಂಡ ಗೋವಾಕ್ಕೆ ಹಾರಿದೆ.

  ಅಂದಹಾಗೆ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಜೂನ್ 9 ರಂದು ಚಿತ್ರದ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಎಲ್ಲಾ ತಯಾರಿ ನಡೆಯುತ್ತಿದೆ. ಈಗಾಗಲೇ ಶೆ.90ರಷ್ಟು ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಇನ್ನು ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ.[ಫೋಟೋ ಗ್ಯಾಲರಿ: ರಿಯಲ್ ಉಪ್ಪಿ 'ಕಲ್ಪನಾ 2' ಶೂಟಿಂಗ್ ಸ್ಟಿಲ್ಸ್]

  ನಿರ್ದೇಶಕ ಆರ್ ಅನಂತ ರಾಜು ಅವರು ನಿರ್ದೇಶನ ಮಾಡಿರುವ 'ಕಲ್ಪನಾ 2' ಚಿತ್ರದಲ್ಲಿ ನಟಿ ಪ್ರಿಯಾಮಣಿ ಮತ್ತು 'ರಂಗಿತರಂಗ' ಖ್ಯಾತಿಯ ನಟಿ ಅವಂತಿಕಾ ಶೆಟ್ಟಿ ಅವರು ಉಪೇಂದ್ರ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ.

  English summary
  Kannada Actor Upendra has recovered from his ankle injury, he has completed shoot for the introductory song of his upcoming film Kalpana 2. The patriotic number about Kannada and Karnataka was shot in and around Bengaluru locales. With Kalaimaster choreographing the song. The movie is directed by R Anantharaju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X