'ಸೀನಿಯರ್ಸ್ ಸಲಹೆ ಕೊಡೋದು ಮೊದಲು ಬಿಡಬೇಕು'- ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ನಟಿಸುತ್ತಿರುವ ಚೊಚ್ಚಲ ಸಿನಿಮಾದ ಮುಹೂರ್ತ ಇಂದು ನಡೆದಿದೆ. ಈ ಚಿತ್ರಕ್ಕೆ ಸೂಪರ್ ಸ್ಟಾರ್ ಎಂದು ಹೆಸರಿಟ್ಟಿದ್ದು, ಮೊದಲ ಹಾಡು ಸಹ ಬಿಡುಗಡೆಯಾಗಿದೆ.
Recommended Video
ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪೇಂದ್ರ ಅವರು ನಿರಂಜನ್ ಅವರ ಹಾರ್ಡ್‌ವರ್ಕ್ ಬಗ್ಗೆ ಮಾತನಾಡಿದರು. ಈ ವೇಳೆ ನಿರಂಜನ್‌ಗೆ ನೀವು ಯಾವ ಸಲಹೆ ಕೊಡ್ತೀರಾ ಎಂದು ಕೇಳಿದ್ದಕ್ಕೆ ಉಪೇಂದ್ರ ''ಸೀನಿಯರ್ಸ್ ಸಲಹೆ ಕೊಡೋದು ಮೊದಲು ಬಿಡಬೇಕು'' ಎಂದಿದ್ದಾರೆ.
''ಅವರಿಂದ ನಾವು ಕಲಿಯಬೇಕಿದೆ. ಯುವಕರು, ಹೊಸ ರೀತಿಯ ಆಲೋಚನೆ ಮಾಡ್ತಾರೆ, ನಮ್ಮ ಅನುಭವ ಮಾತ್ರ ಹೇಳ್ಬಹುದು ಅಷ್ಟೇ. ಅವರು ತುಂಬಾ ತಿಳಿದುಕೊಂಡಿದ್ದಾರೆ, ಹೊಸದಾಗಿ ಏನೋ ಮಾಡಬೇಕು ಎಂಬ ಹಾದಿಯಲ್ಲಿದ್ದಾರೆ'' ಎಂದು ಉಪೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೂಪರ್ ಸ್ಟಾರ್ ಚಿತ್ರ ಡ್ಯಾನ್ಸ್ ಹಿನ್ನೆಲೆ ಮಾಡಲಾಗಿರುವ ಕಥೆ. ಡ್ಯಾನ್ಸ್ ಕ್ಷೇತ್ರದಲ್ಲಿ ಸೂಪರ್ ಸ್ಟಾರ್ ಆಗಬೇಕು ಆಸೆಯಿಂದ ನಾಯಕ ಜೀವನದಲ್ಲಿ ಆಗುವ ಘಟನೆಗಳೇ ಚಿತ್ರಕಥೆ. ದಿಗ್ಗಜ ನೃತ್ಯ ನಿರ್ದೇಶಕ, ಪ್ರಭುದೇವ ಅವರ ತಂದೆ ಸುಂದರ್ ಮಾಸ್ಟರ್ ಸಹ ಈ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.
ರಮೇಶ್ ವೆಂಕಟೇಶ್ ಬಾಬು ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಆಗಸ್ಟ್ ತಿಂಗಳಲ್ಲಿ 'ಸೂಪರ್ ಸ್ಟಾರ್' ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು. ಆರ್‌ವಿಬಿ ಪ್ರೊಡಕ್ಷನ್ ಮತ್ತು ಮೈಲಾರಿ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ಈ ತಿಂಗಳಿನಿಂದ ಮತ್ತೆ ಚಿತ್ರೀಕರಣ ಆರಂಭಿಸಲಿದೆ.
ಸದ್ಯಕ್ಕೆ ನಾಯಕಿಯ ಹೆಸರು ಅಂತಿಮವಾಗಿಲ್ಲ. ನಿರಂಜನ್ ಮೊದಲ ಸಿನಿಮಾ ನಾಯಕಿ ಯಾರಾಗಬಹುದು ಎಂಬ ಕುತೂಹಲ ಹಾಗೆ ಉಳಿದುಕೊಂಡಿದೆ.


Click it and Unblock the Notifications











