»   » 'ಕಾಫಿತೋಟ' ಟೀಸರ್ ಬಿಡುಗಡೆ ಮಾಡಲಿರುವ ರಿಯಲ್ ಸ್ಟಾರ್

'ಕಾಫಿತೋಟ' ಟೀಸರ್ ಬಿಡುಗಡೆ ಮಾಡಲಿರುವ ರಿಯಲ್ ಸ್ಟಾರ್

Posted By:
Subscribe to Filmibeat Kannada

ಹಲವು ವಿಷಯಗಳಿಗೆ ಕುತೂಹಲ ಮೂಡಿಸಿರುವ 'ಕಾಫಿತೋಟ' ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಆಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಲಿದೆ. 'ಮೀರಾ ಮಾಧವ ರಾಘವ' ಚಿತ್ರದ ನಂತರ ಟಿ.ಎನ್.ಸೀತಾರಾಮ್ ಅವರು 'ಕಾಫಿತೋಟ'ಕ್ಕೆ ಆಕ್ಷನ್ ಕಟ್ ಹೇಳಿದ್ದು, ಆಗಸ್ಟ್ 18 ರಂದು ಚಿತ್ರಮಂದಿರ ಬರುವ ಯೋಚನೆಯಲ್ಲಿದೆ.

ಈಗಾಗಲೇ ಆಡಿಯೋ ಬಿಡುಗಡೆ ಮಾಡಿರು 'ಕಾಫಿತೋಟ' ಹೆಚ್ಚು ಗಮನ ಸೆಳೆಯುತ್ತಿದ್ದು, ಇಂದು (ಜುಲೈ 31) ಟೀಸರ್ ಬಿಡುಗಡೆಯಾಗಲಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಸಂಜೆ 5 ಗಂಟೆಗೆ 'ಕಾಫಿತೋಟ' ಟೀಸರ್ ರಿಲೀಸ್ ಮಾಡಲಿದ್ದಾರೆ.

Upendra To Release Kaafi thota Teaser

ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು ಒಂದು ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಇನ್ನೊಂದು ಹಾಡಿಗೆ ಮಿದುನ್ ಮುಕುಂದನ್ ಸ್ವರ ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ ಮತ್ತು ಜೋಗಿ ತಲಾ ಒಂದು ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಟಿ.ಎನ್.ಎಸ್ 'ಕಾಫಿ ತೋಟ'ದಲ್ಲಿ ಪವರ್ ಸ್ಟಾರ್ ಹಾಡು-ಹರಟೆ

'ಮನ್ವಂತರ ಚಿತ್ರ' ಸಂಸ್ಥೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಘು ಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತ ಹೊರನಾಡು, ಅಪೇಕ್ಷ ಪುರೋಹಿತ್, ಅಚ್ಯುತ್ ಕುಮಾರ್, ರಾಹುಲ್ ಮಾಧವ ಸೇರಿದಂತೆ ಇನ್ನು ಹಲವು ಕಲಾವಿದರು ಅಭಿನಯಿಸಿದ್ದಾರೆ.

'ಕಾಫಿತೋಟ'ದಿಂದ ಬಂತು ಹೊಸ ಹಾಡು ನೋಡು ಗುರು....

English summary
The teaser of TN Seetharam directed film Kaafi Thota will be released at 5 pm today. Real Star Upendra and writer-journalist Jogi will be releasing the teaser.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada