For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ನಲ್ಲಿ ಪಾಸಾದ ಉಪೇಂದ್ರ ಟೋಪಿವಾಲ

  By Rajendra
  |
  ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಟೋಪಿವಾಲ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಸ್ತು ಎಂದಿದೆ. ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದ್ದು ಚಿತ್ರ ಇದೇ ಮಾರ್ಚ್ 15ಕ್ಕೆ ಬಿಡುಗಡೆಯಾಗುತ್ತಿದೆ. ಉಪ್ಪಿ ಅಭಿಮಾನಿಗಳಲ್ಲಿ ಸಂಭ್ರಮ ನೆಲೆಸಿದ್ದು ಚಿತ್ರವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

  ಉಪೇಂದ್ರ ಚಿತ್ರ ಎಂದರೆ ಸಾಮಾನ್ಯವಾಗಿ ಸಂಭಾಷಣೆ, ಕಥೆ, ಹಾಡುಗಳ ಮೇಲೆ ಬಹಳಷ್ಟು ನಿರೀಕ್ಷೆಗಳಿರುತ್ತವೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಟೋಪಿವಾಲ ಚಿತ್ರವೂ ಒಂದು. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಚಿತ್ರವಿರುತ್ತದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.

  ಮಾರ್ಚ್ 8ರಂದೇ ಚಿತ್ರ ತೆರೆಕಾಣಬೇಕಾಗಿತ್ತು. ಆದರೆ ಚಿತ್ರಕ್ಕೆ ಸೆನ್ಸಾರ್ ಆಗಲು ಕೊಂಚ ತಡವಾಯಿತು. ಪ್ರಸ್ತುತ ರಾಜಕೀಯ ಸನ್ನಿವೇಶಗಳು ಚಿತ್ರದಲ್ಲಿದ್ದು, ಚಿತ್ರದ ಕಥೆಗೆ ಭಂಗ ಬಾರದಂತೆ ಕತ್ತರಿ ಹಾಕಲಾಗಿದೆ ಎನ್ನಲಾಗಿದೆ.

  ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೆನ್ಸಾರ್ ಚಿತ್ರತಂಡಕ್ಕೆ ಸೂಚಿಸಿದೆ. ಚಿತ್ರದ ಕಥೆಯ ಓಟಕ್ಕೆ ಯಾವುದೇ ತೊಂದರೆಯಾಗದಂತೆ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.

  'ಟೋಪಿವಾಲ' ಕಥೆ, ಚಿತ್ರಕಥೆ ಉಪೇಂದ್ರ ಅವರೇ ಹೆಣೆದಿದ್ದರೂ ಆಕ್ಷನ್ ಕಟ್ ಹೇಳಿರುವುದು ಶ್ರೀನಿವಾಸ್ (ಶ್ರೀನಿ). ಆರ್.ಎಸ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ಪಿ.ಶ್ರೀಕಾಂತ್ ಹಾಗೂ ಕನಕಪುರ ಶ್ರೀನಿವಾಸ್ ನಿರ್ಮಿಸಿರುವ ಚಿತ್ರ ಇದಾಗಿದೆ. ಭಾವನಾ ನಾಯಕಿಯಾಗಿರುವ ಚಿತ್ರದ ಅಡಿಬರಹವು ಕ್ಯಾಚಿಯಾಗಿದ್ದು, 'ತಲೆ ಇಲ್ಲದವರಿಗಲ್ಲ' ಎಂದಿಡಲಾಗಿದೆ. (ಏಜೆನ್ಸೀಸ್)

  English summary
  Real Star Upendra and Bhavana lead Kannada film 'Topiwala' clears censor. The film has been awarded U/A certificate. The film will be released on March 15th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X