Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: ಕನಿಷ್ಠ 7 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಭಿಮಾನಿಗಳ ಜೊತೆ ಇಂದು 'ದೇವಕಿ' ಸಿನಿಮಾ ನೋಡ್ತಾರೆ ಉಪೇಂದ್ರ
ಕಳೆದ ಶುಕ್ರವಾರ ಬಿಡುಗಡೆಯಾಗಿರುವ 'ದೇವಕಿ' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾವನ್ನು ಪ್ರೇಕ್ಷಕರು ಹಾಗೂ ವಿಮರ್ಶಕರು ಇಬ್ಬರು ಇಷ್ಟಪಟ್ಟಿದ್ದಾರೆ. ಇದೀಗ ಉಪೇಂದ್ರ ಈ ಚಿತ್ರವನ್ನು ವೀಕ್ಷಿಸಲಿದ್ದಾರೆ.
'ದೇವಕಿ' ಸಿನಿಮಾದ ಪ್ರೀಮಿಯರ್ ಶೋನಲ್ಲಿ ಸ್ಟಾರ್ ಗಳ ಜೊತೆಗೆ ಸಿನಿಮಾ ನೋಡಿದ್ದ ಉಪ್ಪಿ, ಈಗ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಲಿದ್ದಾರೆ. ಇಂದು ಮಧ್ಯಾಹ್ನ 1:30 ಕ್ಕೆ ಬೆಂಗಳೂರಿನ ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕ ತಮ್ಮ ಅಭಿಮಾನಿಗಳ ಜೊತೆ ಕೂತು ಸಿನಿಮಾ ವೀಕ್ಷಿಸಲಿದ್ದಾರೆ.
'ದೇವಕಿ' ಸಿನಿಮಾ ನೋಡಿ ರವಿಚಂದ್ರನ್ ಹೇಳಿದ್ದೇನು ?
ಉಪ್ಪಿ ಮಗಳು ಐಶ್ವರ್ಯ ಹಾಗೂ ಚಿತ್ರದ ನಿರ್ದೇಶಕ ಲೋಹಿತ್ ಸಹ ಇಂದಿನ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಸಿನಿಮಾವನ್ನು ಉಪೇಂದ್ರ ಜೊತೆ ಕುಳಿತು ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.
ಅಂದಹಾಗೆ, 'ದೇವಕಿ' ಸಿನಿಮಾಗೆ ಆನ್ ಲೈನ್ ಹಾಗೂ ಆಫ್ ಲೈನ್ ಎರಡು ಕಡೆ ದೊಡ್ಡ ಬೆಂಬಲ ಸಿಕ್ಕಿದೆ. ಅನೇಕ ವಿಮರ್ಶಕರು ಸಿನಿಮಾಗೆ ನಾಲ್ಕು ಸ್ಟಾರ್ ನೀಡಿ ಬೆನ್ನು ತಟ್ಟಿದ್ದಾರೆ.
ಅಮ್ಮ ಮಗಳ ಭಾವನಾತ್ಮಕ ಕಥೆಯ ಹಾಗೂ ಕೊಲ್ಕತ್ತಾದಲ್ಲಿ ನಡೆಯುವ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆಯನ್ನು ರೋಚಕವಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಹಿನ್ನಲೆ ಸಂಗೀತಕ್ಕೆ ದೊಡ್ಡ ಮೆಚ್ಚುಗೆ ಸಿಕ್ಕಿದೆ.
Devaki Review : 'ರೆಡ್ ಲೈಟ್'ನಲ್ಲಿ ಅರಳಿದ ತಾಯಿ ಮಗಳ ಅನುಬಂಧ
ಅಭಿಮಾನಿಗಳು, ವಿಮರ್ಶಕರ ಜೊತೆಗೆ ಚಿತ್ರರಂಗದ ಅನೇಕರು ಸಿನಿಮಾವನ್ನು ಹೊಗಳಿದ್ದಾರೆ. ನಿರ್ದೇಶಕ ಲೋಹಿತ್ ಮತ್ತೊಮ್ಮೆ ತಮ್ಮ ಪ್ರತಿಭೆ ಮೂಲಕ ಗಮನ ಸೆಳೆದಿದ್ದಾರೆ. 'ದೇವಕಿ' ಸಿನಿಮಾವನ್ನು ನೀವಿನ್ನು ನೋಡಿಲ್ಲ ಅಂದರೆ ನೋಡಿ. ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಾಮೆಂಟ್ಸ್ ಬಾಕ್ಸ್ ನಲ್ಲಿ ತಿಳಿಸಿ.