»   » ನರ್ತಕಿಯಲ್ಲಿ 'ನಿನ್ನಿಂದಲೇ' ಸಿನಿಮಾ ಪೈರಸಿಗೆ ಯತ್ನ

ನರ್ತಕಿಯಲ್ಲಿ 'ನಿನ್ನಿಂದಲೇ' ಸಿನಿಮಾ ಪೈರಸಿಗೆ ಯತ್ನ

Posted By:
Subscribe to Filmibeat Kannada

ಇಡೀ ದೇಶದ ಚಿತ್ರೋದ್ಯಮವನ್ನು ಕ್ಯಾನ್ಸರ್ ನಂತೆ ಪೀಡಿಸುತ್ತಿರುವ ಅತಿದೊಡ್ಡ ಸಮಸ್ಯೆಯೆಂದರೆ ಪೈರಸಿ. ಇದಕ್ಕೆ ಕಡಿವಾಣ ಹಾಕಲು ಗೂಂಡಾ ಕಾಯಿದೆ ತಂದರೂ ಸಾಧ್ಯವಾಗುತ್ತಿಲ್ಲ. ಚಾಪೆ ಕೆಳಗೆ ತೂರಿ ಹಿಡಿಯಲು ಹೊರಟರೆ ರಂಗೋಲಿ ಕೆಳಗೆ ನುಸುಳಿ ತಪ್ಪಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ನಿನ್ನಿಂದಲೇ' ಚಿತ್ರವನ್ನು ಪೈರಸಿ ಮಾಡುವ ಪ್ರಯತ್ನ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ನಡೆದಿದೆ. ಈ ಸಂಬಂಧ ಬಿಜಾಪುರ ಮೂಲದ ಮನೋಜ್ ಕುಮಾರ್ ಎಂಬಾತನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. [ನಿನ್ನಿಂದಲೇ ಚಿತ್ರವಿಮರ್ಶೆ]


ಗುರುವಾರ (ಜ.16) ತೆರೆಕಂಡ ಜಯಂತ್ ಸಿ ಪರಾಂಜಿ ನಿರ್ದೇಶನದ 'ನಿನ್ನಿಂದಲೇ ಚಿತ್ರವನ್ನು ಶುಕ್ರವಾರ (ಜ.17) ಹ್ಯಾಂಡಿಕ್ಯಾಮ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾನೆ ಆರೋಪಿ ಮನೋಜ್. ಬಳಿಕ ಅದನ್ನು ಸೈಬರ್ ಕೆಫೆಯಲ್ಲಿ ಅಪ್ ಲೋಡ್ ಮಾಡಿ ನಕಲಿ ಸಿ.ಡಿ.ತಯಾರಿಕೆಗೆ ಯತ್ನಿಸಿದ್ದ ಎಂದು ಪೊಲೀಸರು ವಿವರ ನೀಡಿದ್ದಾರೆ.

ಬಂಧಿತ ಆರೋಪಿ ಮಲ್ಲಿಕಾರ್ಜುನ್ ಈ ಹಿಂದೆಯೂ ಹಲವಾರು ಚಿತ್ರಗಳ ಪೈರಸಿ ಮಾಡಿದ್ದಾನೆ. ಹೊಸದಾಗಿ ಬಿಡುಗಡೆಯಾದ ಚಿತ್ರಗಳನ್ನು ಹ್ಯಾಂಡಿಕ್ಯಾಮ್ ನಲ್ಲಿ ಚಿತ್ರೀಕರಿಸಿಕೊಂಡು ಸಿಡಿ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. (ಏಜೆನ್ಸೀಸ್)

English summary
An attempt to pirate power star Puneeth Rajkumar new film Ninnindale has been busted in Nartaki theatre, Bangalore. The film's producer and theatre owner have filed a complaint at the Upparpet police station.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada