»   » ಐಎಂಡಿಬಿ ರೇಟಿಂಗ್ ನಲ್ಲಿ ಉಪ್ಪಿಗಿಂತ ರುಚಿ ಬೇರೆ ಇಲ್ಲ!

ಐಎಂಡಿಬಿ ರೇಟಿಂಗ್ ನಲ್ಲಿ ಉಪ್ಪಿಗಿಂತ ರುಚಿ ಬೇರೆ ಇಲ್ಲ!

By: ಬ್ರಹ್ಮಾನಂದ ಅರಳಿ
Subscribe to Filmibeat Kannada

ಕರ್ನಾಟಕ ಹಾಗೂ ಆಂಧ್ರ ಸೇರಿದಂತೆ ವಿದೇಶಗಳಲ್ಲೂ ತನ್ನ ಹವಾ ಎಬ್ಬಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಉಪ್ಪಿ2 ಚಲನಚಿತ್ರಕ್ಕೆ ಇಂಟರ್‍ನೆಟ್ ಮೂವಿ ಡೇಟಾಬೇಸ್(ಐಎಂಡಿಬಿ) ಅತ್ಯದಿಕ 9.7/10 ರೇಟಿಂಗ್ ನೀಡಿದ್ದು, ಸಿನಿಪ್ರಿಯರು ಅಚ್ಚರಿಗೊಳಪಟ್ಟಿದ್ದಾರೆ.

ಐಎಂಡಿಬಿ ಸಂಸ್ಧೆ ಇಡೀ ಪ್ರಪಂಚದಲ್ಲಿ ಬಿಡುಗಡೆಯಾಗುವ ಎಲ್ಲಾ ಭಾಷೆಗಳ ಚಿತ್ರಗಳಿಗೂ ಕೂಡ ರೇಟಿಂಗ್ ನೀಡುತ್ತದೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಅಂಕಗಳ ರೇಟಿಂಗ್ ನ್ನು ಉಪೇಂದ್ರ ಅವರ 'ಉಪ್ಪಿ2' ಚಿತ್ರ ಪಡೆದುಕೊಂಡಿದೆ. [ಉಪ್ಪಿ2 ಗಳಿಕೆ: ಮೂರೇ ದಿನಕ್ಕೆ ಸಿಲ್ವರ್ ಜ್ಯುಬಿಲಿ ಪ್ಲಸ್]

Uppi2 Movie is trending at No. 2 in IMDB Rating

ಉಪ್ಪಿ2 ಚಿತ್ರ ಬಿಡುಗಡೆಯಾಗಿ ನಾಲ್ಕು ದಿನ ಕಳೆದಿದ್ದು, ಈಗಲೂ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಇಲ್ಲಿಯವರೆಗೆ ಸುಮಾರು 45ಕೋಟಿ ದುಡ್ಡು ಬಾಚುವಲ್ಲಿ ಯಶಸ್ವಿಯಾಗಿದೆ. [ಉಪ್ಪಿ 2 Unknown ನೋಡಿ, ಯೋಚ್ನೆ ಮಾಡ್ಬೇಡಿ]

ಐಎಂಡಿಬಿಯ ರೇಟಿಂಗ್ ನಲ್ಲಿ ಉಪ್ಪಿ2 ಚಿತ್ರ ಮೊದಲ ಸ್ಥಾನದಲ್ಲಿದ್ದರೆ, ಅನುಪ್ ಭಂಡಾರಿ ನಿರ್ದೇಶನದ ಕನ್ನಡದ ಇನ್ನೊಂದು ಯಶಸ್ವಿ ಚಿತ್ರ 'ರಂಗಿತರಂಗ' 9.4/10 ರೇಟಿಂಗ್ ಪಡೆದು ಮೂರನೇ ಸ್ಥಾನದಲ್ಲಿದೆ.[ಬಾಕ್ಸ್ ಆಫೀಸ್ ನಲ್ಲಿ 'Volcano' ಆಗಿ ಸಿಡಿದ ಉಪ್ಪಿ]

ಒಟ್ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ-ಟ್ಟು' ಹಾಗೂ ಹೊಸಬರಾದ ಅನುಪ್ ಭಂಡಾರಿ ಅವರ 'ರಂಗಿತರಂಗ' ಗಾಂಧಿನಗರದಲ್ಲಿ ಭಾರಿ ಪ್ರಶಂಸೆಗೆ ಒಳಗಾಗುತ್ತಿದೆ.

English summary
Uppi2 Movie is trending at No. 2 in IMDB Rating. 'Uppi 2' movie feature Kannada actor Upendra, Actress Kristina Akheeva, Actress Parul Yadav in the lead role. The movie is directed by Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada