»   » ಬಿ ಸುರೇಶ್ ಅವರ 'ಉಪ್ಪಿನ ಕಾಗದ' ಚಿತ್ರದ ಸಣ್ಣ ಝಲಕ್

ಬಿ ಸುರೇಶ್ ಅವರ 'ಉಪ್ಪಿನ ಕಾಗದ' ಚಿತ್ರದ ಸಣ್ಣ ಝಲಕ್

Posted By:
Subscribe to Filmibeat Kannada

ದೇವರ ನಾಡಲ್ಲಿ ಚಿತ್ರದ ನಂತರ ಸದ್ದಿಲ್ಲದೆ ಮತ್ತೊಂದು ಚಿತ್ರ ನಿರ್ಮಾಣ ಮಾಡಿರುವ ಬಿ.ಸುರೇಶ್ ಅವರು ತಮ್ಮ ನಿರ್ದೇಶನದ ಮತ್ತೊಂದು ಕಲಾತ್ಮಕ ಸಿನಿಮಾ 'ಉಪ್ಪಿನ ಕಾಗದ' ಚಿತ್ರದ ಅಫೀಶಿಯಲ್ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. 1.40 ನಿಮಿಷ ಇರುವ 'ಉಪ್ಪಿನ ಕಾಗದ' ಚಿತ್ರದ ಟ್ರೈಲರ್ ರಾಷ್ಟ್ರೀಯ ಭಾವೈಕ್ಯತೆ, ಕಲೆಯ ಬಗ್ಗೆ ಸುತ್ತ ಸುತ್ತುವ ಕತೆಯನ್ನು ಹೊಂದಿರುವ ಬಗ್ಗೆ ಸೂಚನೆ ನೀಡಿದೆ. ಅಲ್ಲದೇ ಒಂದಷ್ಟು ಸಸ್ಪೆನ್ಸ್ ಅನ್ನು ಚಿತ್ರ ಒಳಗೊಂಡಿದೆ.[9ನೇ ಬೆಂಗಳೂರು ಚಿತ್ರೋತ್ಸವದಲ್ಲಿ 12 ಕನ್ನಡ ಚಿತ್ರಗಳು: ಯಾವುವು?]

ಬಿ.ಸುರೇಶ್ ಅವರು ಆಕ್ಷನ್ ಕಟ್ ಹೇಳಿರುವ 'ಉಪ್ಪಿನ ಕಾಗದ' ಚಿತ್ರದ ಹಾಡುಗಳು ಬಿಡುಗಡೆ ಆಗಿದ್ದು, ಈ ಹಾಡುಗಳನ್ನು ಡಿಬೀಟ್ಸ್ ಮ್ಯೂಸಿಕ್ ವರ್ಲ್ಡ್ ನಲ್ಲಿ ಕೇಳಬಹುದು.

Uppina Kagada Official Trailer Released

'ಉಪ್ಪಿನ ಕಾಗದ' ಚಿತ್ರದ ಪ್ರೀಮಿಯರ್ ಶೋ 9 ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಾಣುತ್ತಿದ್ದು, ಸಿನಿ ಪ್ರಿಯರು ಬಿಡುಗಡೆಗೂ ಮುನ್ನ ಈ ಕಲಾತ್ಮಕ ಸಿನಿಮಾವನ್ನು ಚಿತ್ರೋತ್ಸವದಲ್ಲಿ ನೋಡಬಹುದಾಗಿದೆ. ಚಿತ್ರದಲ್ಲಿ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ಮಂಡ್ಯ ರಮೇಶ್, ಮುರಳಿ ಶಂಗೇರಿ, ಅಪೂರ್ವ ಭಾರದ್ವಾಜ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಶೈಲಜ ನಾಗ್ ಮತ್ತು ಬಿ ಸುರೇಶ್ ಅವರು ಚಿತ್ರ ಬಂಡವಾಳ ಹೂಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದು. ಮೀಡಿಯ ಹೌಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ.

'ಉಪ್ಪಿನ ಕಾಗದ' ಚಿತ್ರದ ಟ್ರೈಲರ್ ನೋಡಿ

English summary
Watch "Uppina Kagada" Movie Official Trailer starring T. S. Nagabharana, Mandya Ramesh, Apoorva Bharadwaj and Murali Sringeri. Directed by B Suresha.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada