For Quick Alerts
  ALLOW NOTIFICATIONS  
  For Daily Alerts

  ವಿ ನಾಗೇಂದ್ರ ಪ್ರಸಾದ್‌ಗೆ ಡಾಕ್ಟರೇಟ್ ನೀಡಿದ ಹಂಪಿ ವಿಶ್ವವಿದ್ಯಾಲಯ

  |

  ಕನ್ನಡ ಚಿತ್ರರಂಗದ ಕವಿರತ್ನ, ಅದ್ಭುತ ಗೀತಾ ರಚನೆಕಾರ, ಸಂಗೀತ ನಿರ್ದೇಶಕ ವಿ ನಾಗೇಂದ್ರ ಪ್ರಸಾದ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

  'ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ' ಎಂಬ ವಿಷಯ ಕುರಿತು ಸಂಶೋಧನೆ ಅಧ್ಯಯನ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು.

  'ವಿಷ್ಣು ಸಹೋದರ ರವಿ ಹೇಳಿದ 'ಆ ಮಾತು' ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ'

  ನಾಗೇಂದ್ರ ಪ್ರಸಾದ್ ಅವರ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ತನ್ನ 29ನೇ ಘಟಿಕೋತ್ಸವ (ನುಡಿಹಬ್ಬ)ದಲ್ಲಿ ಡಿ.ಲಿಟ್ (ಡಾಕ್ಟರ್ ಆಫ್ ಲಿಟರೇಚರ್) ಪದವಿ ನೀಡಿದೆ. ಇಂದು ಬಳ್ಳಾರಿಯಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ 29ನೇ ಘಟಿಕೋತ್ಸವ ಕಾರ್ಯಕ್ರಮ ನಡೆದಿದೆ.

  ಸಹಜವಾಗಿ ಚಿತ್ರರಂಗದಲ್ಲಿ ತಾವು ಮಾಡಿದ ಸಾಧನೆ ಅಥವಾ ತಮ್ಮ ಕೊಡುಗೆ ಗುರುತಿಸಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುವ ಉದಾಹರಣೆಗಳಿವೆ. ಆದರೆ, ನಾಗೇಂದ್ರ ಪ್ರಸಾದ್ ಅವರು ವಿದ್ಯಾರ್ಥಿಯಂತೆ ಸಂಶೋಧನೆ ನಡೆಸಿ ಮಹಾಪ್ರಬಂಧ ರಚಿಸಿ ಅದಕ್ಕೆ ಪದವಿ ಪಡೆದಿರುವುದು ನಿಜಕ್ಕೂ ಶ್ಲಾಘನೀಯ.

  Roberrt ಚಿತ್ರದ ಅವಧಿಯಿಂದ ಥಿಯೇಟರ್ ಮಾಲೀಕರಿಗೆ ಶುರುವಾಯ್ತು ತಲೆನೋವು | Filmibeat Kannada

  'ಕವಿರತ್ನ' ಎಂದು ಗುರುತಿಸಿಕೊಂಡಿರುವ ವಿ ನಾಗೇಂದ್ರ ಪ್ರಸಾದ್ ಅವರು ಗೀತೆ ರಚನೆ, ಸಂಭಾಷಣೆ ಬರಹಗಾರರಾಗಿ, ಚಲನಚಿತ್ರ ನಿರ್ದೇಶಕರಾಗಿ, ನಟನಾಗಿ ಬಹಳ ವರ್ಷದಿಂದ ಚಿತ್ರರಂಗದಲ್ಲಿದ್ದಾರೆ. ಕನ್ನಡದಲ್ಲಿ ಸಾವಿರಾರು ಅದ್ಭುತ ಹಾಡುಗಳನ್ನು ರಚಿಸಿದ್ದಾರೆ.

  English summary
  Kannada lyric writer V Nagendra Prasad received doctorate from Hampi Kannada University.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X