»   » ನಾಗೇಂದ್ರ ಪ್ರಸಾದ್ ತೆಗೆದುಕೊಂಡ ದಿಟ್ಟ ನಿರ್ಧಾರ ಇದು

ನಾಗೇಂದ್ರ ಪ್ರಸಾದ್ ತೆಗೆದುಕೊಂಡ ದಿಟ್ಟ ನಿರ್ಧಾರ ಇದು

Posted By:
Subscribe to Filmibeat Kannada

ಕನ್ನಡ ಸಿನಿಮಾಗಳು ರಿಲೀಸ್ ಆಗಬೇಕು ಅಂದರೆ ಮೈನ್ ಥಿಯೇಟರ್ ಪರಿಕಲ್ಪನೆ ಮೊದಲು ಬರುತ್ತದೆ. ಸಿನಿಮಾಗಳು ರಾಜ್ಯಾದಂತ್ಯ ರಿಲೀಸ್ ಆದರೂ ಕೂಡ ಬೆಂಗಳೂರಿನ ಗಾಂಧಿನಗರದ ಒಂದು ಚಿತ್ರಮಂದಿರ ಮೈನ್ ಥಿಯೇಟರ್ ಆಗಬೇಕು ಎಂಬುದು ಇಷ್ಟು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ. ಆದರೆ ಈಗ ನಾಗೇಂದ್ರ ಪ್ರಸಾದ್ ಅಂತಹ ಹಳೆ ಪದ್ಧತಿಯನ್ನು ಮುರಿದಿದ್ದಾರೆ.

ಅವರ 'ಗೂಗಲ್' ಸಿನಿಮಾ ನಾಳೆ ರಾಜ್ಯಾದಂತ್ಯ ರಿಲೀಸ್ ಆಗುತ್ತಿದೆ. ಇನ್ನೂ ಈ ಸಿನಿಮಾಗೆ ಯಾವುದೇ ಮೈನ್ ಥಿಯೇಟರ್ ಇರುವುದಿಲ್ಲ. ಈ ಬಗ್ಗೆ ಮಾತನಾಡಿರುವ ನಾಗೇಂದ್ರ ಪ್ರಸಾದ್ ''ಮೈನ್ ಥಿಯೇಟರ್ ಅನ್ನುವ ಪರಿಕಲ್ಪನೆಯನ್ನು ಮುರಿಯದೇ ಇದ್ದರೆ ನಿರ್ಮಾಪಕರಿಗೆ ತೊಂದರೆ ತಪ್ಪುವುದಿಲ್ಲ. ನಿರ್ದೇಶಕರ ಸಂಘದ ಅಧ್ಯಕ್ಷನಾಗಿ ನಾನೇ ಏಕೆ ಈ ಸಾಹಸಕ್ಕೆ ಮುಂದಾಗಬಾರದು ಎಂದು ಧೈರ್ಯ ಮಾಡಿದ್ದೇನೆ. ನಿಮಗೆ ಯಾವ ಥಿಯೇಟರ್ ಹತ್ತಿರವೋ ಅದೇ ಮೈನ್ ಥಿಯೇಟರ್.'' ಎಂದು ಹೇಳಿದ್ದಾರೆ.

ವಿ.ನಾಗೇಂದ್ರ ಪ್ರಸಾದ್ 'ಗೂಗಲ್' ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗೆ

ಜೊತೆಗೆ ತಮ್ಮ ಈ ಸಿನಿಮಾದ ಬಗ್ಗೆ ಉತ್ಸಾಹದಲ್ಲಿರುವ ಅವರು ''ನನಗೆ ಗೊತ್ತಿದೆ ನಾಳೆ ಮಾರ್ನಿಂಗ್ ಶೋ 'ಗೂಗಲ್' ನೋಡಿದ ಜನ ಮೆಚ್ಚಿದರೆ ಚಿತ್ರ ಗೆದ್ದಂತೆ. ಇಲ್ಲದಿದ್ದರೆ ಇಲ್ಲ. ನೀವು ಗೆಲ್ಲಿಸಿದರೆ ಬದುಕಿನ ದಿಕ್ಕು ಬದಲಾಗುತ್ತದೆ. ಗೆಲ್ಲಿಸಿ. ಒಂದು ಒಳ್ಳೆಯ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ. ನಿಮ್ಮ- ಅಂತರಂಗದ ಗೂಗಲ್'' ಎಂದು ಸಿನಿಮಾದ ಬಗ್ಗೆ ಹೇಳಿದ್ದಾರೆ.

V Nagendra Prasad spoke about Google kannada movie Kannada

ಅಂದಹಾಗೆ, 17ವರ್ಷದ ಹಿಂದೆ ನಡೆದ ನೈಜ ಘಟನೆ ಆಧರಿತ ಚಿತ್ರ. ಇಲ್ಲಿ 8 ಪಾತ್ರಗಳು ಬಂದು ಹೋಗುತ್ತವೆ. ಈ ಪಾತ್ರಗಳೇ ಚಿತ್ರದ ಜೀವಾಳ. ಉತ್ಸವ್ ಮೂವೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಸಿನಿಮಾವನ್ನು ವಿ. ನಾಗೇಂದ್ರ ಪ್ರಸಾದ್‌ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಲ್ಲದೆ ಚಿತ್ರದ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಚಿತ್ರದ ಹಾಡುಗಳ ಸಾಹಿತ್ಯ ಹಾಗೂ ಸಂಗೀತ ಕೂಡಾ ನಾಗೇಂದ್ರ ಪ್ರಸಾದ್‌ ಅವರದೇ.

English summary
V Nagendra Prasad spoke about Google kannada movie Kannada.The movie will releasing tomorrow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada