»   » ಕನ್ನಡದಲ್ಲಿ ಹೊಸ ಹೊಸ ಆಡಿಯೋ ಕಂಪನಿ ಶುರು.! ಕಾರಣ ಇದೇನಾ.?

ಕನ್ನಡದಲ್ಲಿ ಹೊಸ ಹೊಸ ಆಡಿಯೋ ಕಂಪನಿ ಶುರು.! ಕಾರಣ ಇದೇನಾ.?

Posted By: Naveen
Subscribe to Filmibeat Kannada

'ಇದು ಆನ್ ಲೈನ್ ಯುಗ.! ಈಗ ಹಾಡುಗಳಿಗಾಗಿ ಯಾರೂ ಕ್ಯಾಸೆಟ್, ಸಿಡಿ ಖರೀದಿಸುವುದಿಲ್ಲ.! ಹೀಗಾಗಿ ಆಡಿಯೋ ಕಂಪನಿಗಳು ನಷ್ಟದಲ್ಲಿ ನಡೆಯುತಿವೆ' - ಹೀಗಂತ ಆಡಿಯೋ ಕಂಪನಿ ಮಾಲೀಕರೇ ಗೊಣಗಿರುವುದುಂಟು. ಹೀಗಿದ್ದರೂ, ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೊಂದರಂತೆ ಹೊಸ ಆಡಿಯೋ ಕಂಪನಿಗಳು ತಲೆಯೆತ್ತುತ್ತಿವೆ.

ಗೀತರಚನೆಗಾರ ವಿ.ನಾಗೇಂದ್ರ ಪ್ರಸಾದ್ ತಮ್ಮ ಹೊಸ ಆಡಿಯೋ ಕಂಪನಿಯನ್ನ ಸದ್ಯದಲ್ಲೇ ಆರಂಭಿಸಲಿದ್ದಾರೆ. 'ಮ್ಯೂಸಿಕ್ ಬಜಾರ್' ಅಂತ ತಮ್ಮ ಕಂಪನಿಗೆ ನಾಮಕರಣ ಮಾಡಿದ್ದಾರೆ. ಇದೇ ತಿಂಗಳ 4ರಂದು ಈ ಕಂಪನಿ ಲಾಂಚ್ ಆಗಲಿದ್ದು, 'ಜಿಂದಾ' ಎನ್ನುವ ಸಿನಿಮಾದ ಹಾಡುಗಳನ್ನ ಹೊರತರುತ್ತಿದೆ.[''ಸತ್ತಂತಿಹರನು ಬಡಿದೆಚ್ಚರಿಸು ಕನ್ನಡಾಂಬೆ'' ಇಂತಿ ವಿ.ನಾಗೇಂದ್ರ ಪ್ರಸಾದ್!]

ಬರೀ, ವಿ.ನಾಗೇಂದ್ರ ಪ್ರಸಾದ್ ಮಾತ್ರ ಅಲ್ಲ. ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಮತ್ತು ಗೀತರಚನೆಕಾರರು ಈಗ ತಮ್ಮದೇ ಸ್ವಂತ ಆಡಿಯೋ ಕಂಪನಿಗೆ ಚಾಲನೆ ನೀಡುತ್ತಿದ್ದಾರೆ. ಅಷ್ಟಕ್ಕೂ ಯಾರ್ ಯಾರ್ ಹೆಸರಿನಲ್ಲಿ ಯಾವ್ಯಾವ ಆಡಿಯೋ ಕಂಪನಿ ಇದೆ. ಇದಕ್ಕೆ ಏನ್ ಕಾರಣ..? ಮುಂದಿದೆ ಓದಿ....

ವಿ.ನಾಗೇಂದ್ರ ಪ್ರಸಾದ್ ಸಾರಥ್ಯದಲ್ಲಿ 'ಮ್ಯೂಸಿಕ್ ಬಜಾರ್'

ಕನ್ನಡ ಚಿತ್ರರಂಗಕ್ಕೆ ಸಾವಿರಾರು ಹಾಡುಗಳನ್ನ ಬರೆದ ಸಾಹಿತಿ 'ವಿ.ನಾಗೇಂದ್ರ ಪ್ರಸಾದ್'. ಇಷ್ಟು ದಿನ ಅವರ ಹಾಡುಗಳು ಬೇರೆ ಆಡಿಯೋ ಕಂಪನಿಯ ಮೂಲಕ ಬಿಡುಗಡೆ ಆಗುತ್ತಿತ್ತು. ಆದ್ರೀಗ 'ಮ್ಯೂಸಿಕ್ ಬಜಾರ್' ಎಂಬ ತಮ್ಮದೆ ಸ್ವಂತ ಕಂಪನಿಯನ್ನ ತೆರೆಯುತ್ತಿದ್ದಾರೆ.

ವಿ.ಹರಿಕೃಷ್ಣ ಅವರ 'ಡಿ ಬೀಟ್ಸ್'

ಸಂಗೀತ ನಿರ್ದೇಶಕ ವಿ.ಹರಿಕೃಷ್ಣ 'ಡಿ ಬೀಟ್ಸ್' ಎಂಬ ತಮ್ಮ ಸ್ವಂತ ಆಡಿಯೋ ಕಂಪನಿ ಹೊಂದಿದ್ದಾರೆ. ಈಗಾಗಲೇ ಕನ್ನಡದ ಸಾಕಷ್ಟು ಸಿನಿಮಾದ ಹಾಡುಗಳು ಈ ಕಂಪನಿಯ ಮೂಲಕ ಹೊರಹೊಮ್ಮಿದೆ.

ಅನೂಪ್ ಸೀಳಿನ್ ಅವರ 'ಜೆಪಿ ಮ್ಯೂಸಿಕ್'

ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ತಮ್ಮ ಜಿ.ಪಿ ಮ್ಯೂಸಿಕ್ ಸಂಸ್ಥೆಯ ಮೂಲಕ 'ಜೆಸ್ಸಿ', 'ನಟರಾಜ ಸರ್ವಿಸ್', 'ರಾಮ ರಾಮ ರೇ' ಸೇರಿದಂತೆ ಸಾಕಷ್ಟು ಚಿತ್ರಗಳ ಹಾಡುಗಳನ್ನ ರಿಲೀಸ್ ಮಾಡಿದ್ದಾರೆ.

ಆರ್.ಡಿ.ಎಕ್ಸ್ ಪ್ರೊಡಕ್ಷನ್

ರಘು ದೀಕ್ಷಿತ್ ಸಹ 'ಆರ್.ಡಿ.ಎಕ್ಸ್ ಪ್ರೊಡಕ್ಷನ್ ' ಎಂಬ ತಮ್ಮ ಸ್ವಂತ ಆಡಿಯೋ ಕಂಪನಿಯನ್ನ ಹೊಂದಿದ್ದಾರೆ. ಸದ್ಯ ರಿಲೀಸ್ ಗೆ ರೆಡಿ ಇರುವ 'ಹ್ಯಾಪಿ ನ್ಯೂ ಇಯರ್' ಸಿನಿಮಾದ ಹಾಡುಗಳು ಅದೇ ಕಂಪನಿಯಿಂದ ಬಿಡುಗಡೆ ಆಗಿದೆ.[ಗಾಯಕ ರಘು ದೀಕ್ಷಿತ್ ಗೆ ಸಲಾಂ ಹೊಡೆದ ಬಾಲಿವುಡ್ ದಿಗ್ಗಜರು!]

ಹಂಸಲೇಖ ಒಡೆತನದ 'ಸ್ಟ್ರಿಂಗ್' ಕಂಪನಿ

ನಾದಬ್ರಹ್ಮ ಒಡೆತನದಲ್ಲಿ 'ಸ್ಟ್ರಿಂಗ್' ಕಂಪನಿ ಎನ್ನುವ ಆಡಿಯೋ ಸಂಸ್ಥೆಯೊಂದು ಈಗಾಗಲೇ ಇದೆ. 'ಪ್ರಿಯಾಂಕ' ಮತ್ತು 'ಮಾಚಿದೇವ' ಸಿನಿಮಾಗಳ ಹಾಡನ್ನ ಈ ಕಂಪನಿ ಹೊರತಂದಿತ್ತು.

ಇದೇನಾ ಕಾರಣ...?

ಒಂದು ವರ್ಷದ ಹಿಂದೆ ಆಡಿಯೋ ಕಂಪನಿ ಮತ್ತು ಕನ್ನಡದ ಸಂಗೀತ ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದೇ ಕಾರಣದಿಂದ ಸಂಗೀತ ನಿರ್ದೇಶಕರು ಮತ್ತು ಸಾಹಿತಿಗಳು ತಮ್ಮ ಹಾಡುಗಳನ್ನ ರಿಲೀಸ್ ಮಾಡಲು ತಮ್ಮದೇ ಹೊಸ ಆಡಿಯೋ ಕಂಪನಿ ಹುಟ್ಟುಹಾಕುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಆಗ ಏನಾಗಿತ್ತು...?

'ಒಂದು ಹಾಡಿನ ಸಂಪೂರ್ಣ ಹಕ್ಕು ಆಡಿಯೋ ಸಂಸ್ಥೆಗೆ ಇದೆ ಹೊರತು, ಅದನ್ನ ಬರೆದ ಸಾಹಿತಿ ಅಥವಾ ಮ್ಯೂಸಿಕ್ ನೀಡಿದ ಸಂಗೀತ ನಿರ್ದೇಶಕರಿಗಲ್ಲ' ಎಂಬುದು ಆಡಿಯೋ ಸಂಸ್ಥೆಯ ನಿಯಮವಾಗಿತ್ತು. ಇದು ಬಹುತೇಕ ಎಲ್ಲ ಸಂಗೀತ ನಿರ್ದೇಶಕ ಮತ್ತು ಸಾಹಿತಿಗಳಿಗೆ ಹಿಡಿಸಿರಲಿಲ್ಲ. ಹೀಗಾಗಿ ಎಲ್ಲರೂ ತಮ್ಮದೇ ಆಡಿಯೋ ಸಂಸ್ಥೆಗಳನ್ನ ಹುಟ್ಟುಹಾಕುತ್ತಿದ್ದಾರೆ

English summary
Kannada Lyricist V.Nagendra Prasad to launch his own audio company called 'Music Bazaar'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada