For Quick Alerts
  ALLOW NOTIFICATIONS  
  For Daily Alerts

  500ನೇ ಸಿನಿಮಾ: ನಾಯಕ ನಟನ ಪಾತ್ರದಲ್ಲಿ ಬಿರಾದರ್

  |

  ಕನ್ನಡ ಸಿನಿರಂಗದ ಹಿರಿಯ, ಪ್ರತಿಭಾವಂತ ನಟ ವೈಜನಾಥ ಬಿರಾದರ್ ಅವರ 500ನೇ ಸಿನಿಮಾದ ಚಿತ್ರೀಕರಣ ಈಗಷ್ಟೆ ಮುಗಿದಿದೆ.

  '90 ಹೊಡೆ ಮನೀಗ್ ನಡಿ' ಹೆಸರಿನ ಸಿನಿಮಾದಲ್ಲಿ ಬಿರಾದರ್ ಅವರು ನಟಿಸಿದ್ದು, ಇದು ಅವರ ನಟನಾ ವೃತ್ತಿ ಜೀವನದ 500 ನೇ ಸಿನಿಮಾ. ಈ ಸಿನಿಮಾದಲ್ಲಿ ಬಿರಾದರ್ ಅವರೇ ನಾಯಕ.

  ಈ ಹಿಂದೆ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದ 'ಕನಸೆಂಬ ಕುದುರೆಯನೇರಿ' ಸಿನಿಮಾದಲ್ಲಿ ಬಿರಾದರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿನ ಅವರ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ರಾಷ್ಟ್ರಪ್ರಶಸ್ತಿ ನಿರೀಕ್ಷಿಸಲಾಗಿತ್ತಾದರೂ ಆ ಬಾರಿ ಅಮಿತಾಬ್ ಬಚ್ಚನ್ ಅವರಿಗೆ ರಾಷ್ಟ್ರಪ್ರಶಸ್ತಿ ಒಲಿಯಿತು.

  ಇನ್ನು '90 ಹೊಡಿ ಮನೀಗ್ ನಡಿ' ಸಿನಿಮಾಕ್ಕೆ ಮರಳುವುದಾದರೆ, ಶೀರ್ಷಿಕೆಯೇ ಹೇಳುತ್ತಿರುವಂತೆ ಇದು ಹಾಸ್ಯಪ್ರಧಾನ ಸಿನಿಮಾ ಜೊತೆಗೆ ಕುಡಿತದ ವಿರುದ್ಧ ಸಂದೇಶವೂ ಸಿನಿಮಾದಲ್ಲಿ ಇರಲಿದೆ.

  ಸಿನಿಮಾದಲ್ಲಿ ಬಿರಾದರ್ ಜೊತೆಗೆ ನಟ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮಣ್ಣ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ಆರ್‌ಡಿ ಬಾಬು, ವಿವೇಕ್ ಜಂಬಗಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಬೆಂಗಳೂರು, ಬಿಡದಿ, ಬಾಗಲಕೋಟೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

  ಯುವ ರತ್ನ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು? | Filmibeat Kannada

  ಸಿನಿಮಾವನ್ನು 'ಅಮ್ಮ ಟಾಕೀಸ್ ಬಾಗಲಕೋಟೆ' ನಿರ್ಮಾಣ ಸಂಸ್ಥೆಯ ರತ್ನಮಾಲಾ ಬಾದರದಿನ್ನಿ ಅವರು ನಿರ್ಮಾಣ ಮಾಡಿದ್ದಾರೆ. ಉಮೇಶ್ ಬಾದರದಿನ್ನಿ, ನಾಗರಾಜ್ ಅರೆಹೊಳೆ ಅವರುಗಳು ಸಿನಿಮಾಕ್ಕೆ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ.

  English summary
  Vaijanath Biradar acting as hero in his 500th movie. shooting of the movie recently completed. movie name '90hodi maneeg nadi'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X