»   » ವಿಷ್ಣು, ಉಪ್ಪಿ, ಶಿವು, ದೀಪು ಹೇಗೆಲ್ಲ ಪ್ರೇಮ ನಿವೇದನೆ ಮಾಡ್ಕೊಂಡಿದ್ದಾರೆ ನೋಡಿ...

ವಿಷ್ಣು, ಉಪ್ಪಿ, ಶಿವು, ದೀಪು ಹೇಗೆಲ್ಲ ಪ್ರೇಮ ನಿವೇದನೆ ಮಾಡ್ಕೊಂಡಿದ್ದಾರೆ ನೋಡಿ...

Posted By:
Subscribe to Filmibeat Kannada

ಲವ್ ಅಟ್ ಫಸ್ಟ್ ಸೈಟ್ ಆದ್ರು, ಹಲವರು ಪ್ರೇಮ ನಿವೇದನೆ ತೋಡಿಕೊಳ್ಳಲು 'ವ್ಯಾಲೆಂಟೈನ್ಸ್ ಡೇ' ದಿನಕ್ಕಾಗಿಯೇ ಕಾಯುತ್ತಾರೆ. ಅಲ್ಲದೇ ಯಾರು ಏಷ್ಟೇ ಬಾರಿ ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಲವ್ ಪ್ರಪೋಸ್ ಮಾಡಿದ್ರು 'ಪ್ರೇಮಿಗಳ ದಿನ' ಮಾತ್ರ ಹಲವರು ರೆಡ್ ರೋಸ್ ಕೈಯಲ್ಲಿ ಹಿಡಿದು ಪ್ರೀತಿ ಬಗ್ಗೆ ಹೇಳಿದ್ರೇನೆ ಸಮಾಧಾನ.[ಗುಲಾಬಿಗೆ ಗುಲಾಮನಾದ ಪ್ರೇಮ ಗೀತೆಗಳು]

ಹಲವು ಹುಡುಗರು ಹುಡುಗಿಗೆ ಪ್ರಪೋಸ್ ಮಾಡಲಿಕ್ಕಾಗಲಿ, ಲವ್ ನಲ್ಲಿ ಬೀಳಿಸಿಕೊಳ್ಳಲಿಕ್ಕೇ ಆಗಲಿ, ಸಿನಿಮಾ ಗಳ ಲವ್ ಪ್ರಪೋಸ್ ಸೀನ್ ಫಾಲೋ ಮಾಡ್ತಾರೆ. ಇನ್ನು ಯಾವುದಾದ್ರು ನಟರ ಫ್ಯಾನ್ ಆಗಿದ್ರೆ ಅವರ ಸ್ಟೈಲ್ ನಲ್ಲೇ ಲವ್ ಪ್ರಪೋಸ್ ಮಾಡೋದು ಫಿಕ್ಸ್. ಇನ್ನೂ ಕೆಲವರು ಹೇಗ್ ನಮ್ಮ ಹುಡುಗಿಗೆ ಪ್ರೀತಿ ಬಗ್ಗೆ ಹೇಳೋದು ಅಂತ ತಿಳಿಯದೇ ಗೊಂದಲದಲ್ಲಿ ಚಡಪಡಿಸುತ್ತಿರುತ್ತಾರೆ.[ಪ್ರೇಮಿಗಳು ಕೇಳಲೇಬೇಕಾದ ಜನಪ್ರಿಯ ನಟರ ಟಾಪ್ 10 ಪ್ರೇಮಗೀತೆಗಳು]

ಪ್ರೇಮಿಗಳ ದಿನದ ಪ್ರಯುಕ್ತ ಇಂದು ಟಾಪ್ ಲವ್ ಪ್ರಪೋಸಿಂಗ್ ದೃಶ್ಯಗಳನ್ನು ನಿಮಗೆ ತೋರಿಸುತ್ತಿದ್ದೇವೆ. ಹೇಗಪ್ಪಾ.. ಹುಡುಗಿಗೆ ಪ್ರೀತಿ ಬಗ್ಗೆ ಹೇಳೋದು ಅನ್ನೋ ಕನ್ ಫ್ಯೂಸ್ ಇರೋರು ಈ ದೃಶ್ಯಗಳ ಮೇಲೆ ಹಾಗೆ ಒಮ್ಮೆ ಕಣ್ಣಾಯಿಸಿ. ಬೆಳ್ಳಿತೆರೆಯ ಈ ದೃಶ್ಯಗಳನ್ನು ನೋಡಿ ಮತ್ತೊಮ್ಮೆ ಎಂಜಾಯ್ ಮಾಡಿ.

'ವಾಲಿ' ಚಿತ್ರದಲ್ಲಿ ಸುದೀಪ್ ಲವ್ ಪ್ರಪೋಸಿಂಗ್ ಸೀನ್

ತುಂಬಾ ದಿನದಿಂದ ಹುಡುಗಿನಾ ಅಬ್ ಸರ್ವ್ ಮಾಡಿ ಇನ್ನೂ ಲವ್ ಬಗ್ಗೆ ಹೇಳೋಕೆ ಆಗಿಲ್ಲ ಅಂದ್ರೆ ಸುದೀಪ್ ಅವರ ಈ ಸ್ಟೈಲ್ ಫಾಲೋ ಮಾಡಬಹುದು. ಪ್ರಪೋಸ್ ಮಾಡೋಕು ಮೊದಲು ಹುಡುಗಿ ಜೊತೆ ಜಾಸ್ತಿ ಮಾತಾಡಬೇಕು ಅಂದ್ರು ಈ ಶೈಲಿ ಸಖತ್ತಾಗಿ ವರ್ಕ್ ಔಟ್ ಆಗುತ್ತೆ.

'ವಾಲಿ' ಚಿತ್ರದಲ್ಲಿ ಸುದೀಪ್ ಲವ್ ಪ್ರಪೋಸ್ ಸೀನ್ ನೋಡಲು ಕ್ಲಿಕ್ ಮಾಡಿ

'ಅಪ್ಪು' ಚಿತ್ರದಲ್ಲಿ ಪುನೀತ್ ಲವ್ ಪ್ರಪೋಸ್ ಸೀನ್

'ಅಪ್ಪು' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್, ನಟಿ ರಕ್ಷಿತ ಅವರಿಗೆ ಕಾಲೇಜಿನಲ್ಲಿ ಲವ್ ಪ್ರಪೋಸ್ ಮಾಡಿದ ಸೂಪರ್ ಸೀನ್ ಅನ್ನು ಒಮ್ಮೆ ನೋಡಿ. ಕಾಲೇಜ್ ಸ್ಟೂಡೆಂಟ್ ಗಳಿಗೆಲ್ಲಾ ಹೆಚ್ಚು ಇಷ್ಟವಾಗುವ ಈ ಸೀನ್ ನಲ್ಲಿ ಮಾತಿನ ಶೈಲಿಯನ್ನು ಮಾತ್ರ ಫಾಲೋ ಮಾಡಬಹುದು.

ಪುನೀತ್ ಲವ್ ಪ್ರಪೋಸಿಂಗ್ ದೃಶ್ಯ ನೋಡಲು ಕ್ಲಿಕ್ ಮಾಡಿ

'ಎಚ್.ಟು.ಓ' ಚಿತ್ರದಲ್ಲಿ ಉಪೇಂದ್ರ ಲವ್ ಪ್ರಪೋಸಿಂಗ್

'ಎಚ್.ಟು.ಓ' ಚಿತ್ರದಲ್ಲಿ ಉಪೇಂದ್ರ, ಪ್ರಿಯಾಂಕ ಅವರಿಗೆ ಲವ್ ಪ್ರಪೋಸ್ ಮಾಡುವ ದೃಶ್ಯ ಬಹಳಷ್ಟು ಜನರಿಗೆ ನೆನಪಿಲ್ಲ ಎನಿಸುತ್ತೆ. ಲವ್ ಮಾಡೋಕೆ ಟೀಚಿಂಗು ಸಹ ಬೇಕು ಅನ್ನೋದನ್ನು ಉಪೇಂದ್ರ ಎಷ್ಟೊಂದು ಇಂಟರೆಸ್ಟಿಂಗ್ ಆಗಿ ಹೇಳಿದ್ದಾರೆ ಎಂಬುದನ್ನು ನೀವೊಮ್ಮೆ ನೋಡಲೇ ಬೇಕು.

'ಎಚ್.ಟು.ಓ' ಚಿತ್ರದಲ್ಲಿ ಉಪೇಂದ್ರ ಲವ್ ಪ್ರಪೋಸ್ ಮಾಡುವ ಸೀನ್ ನೋಡಲು ಕ್ಲಿಕ್ ಮಾಡಿ

ಮಿಸ್ ನಂದಿನಿಗೆ ವಿಷ್ಣುದಾದ ಪ್ರಪೋಸ್

ಹುಡುಗಿಗೆ ಪ್ರೀತಿ ಬಗ್ಗೆ ಹೇಳಲು ಅಂಜಿಕೆ, ಭಯ ಏನಾದ್ರು ಇದ್ರೆ, ನಮ್ಮ ವಿಷ್ಣುದಾದ ರೀತಿ ಸ್ವಲ್ಪ ಪ್ರ್ಯಾಕ್ಟೀಸ್ ಮಾಡಿ. ವಿಷ್ಣುವರ್ಧನ್ ಲವ್ ಪ್ರಪೋಸ್ ಸೀನ್ ಎಂದ ತಕ್ಷಣ ಬಹಳಷ್ಟು ಜನರಿಗೆ 'ಬಂಧನ' ಸಿನಿಮಾ ಮತ್ತು ಸುಹಾಸಿನಿ ಅವರು ನೆನಪಾಗುತ್ತಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಹಾಸ್ಯಮಯವಾಗಿ ಮುಗ್ಧ ನಟನೆಯಲ್ಲಿ ಲವ್ ಪ್ರಪೋಸ್ ಮಾಡಲು ಪ್ರ್ಯಾಕ್ಟೀಸ್ ಮಾಡುವ ಸೀನ್ ಇಲ್ಲಿದೆ. ನೋಡಲು ಕ್ಲಿಕ್ ಮಾಡಿ.

ರವಿಚಂದ್ರನ್ ಲವ್ ಪ್ರಪೋಸಿಂಗ್ ಸೀನ್

ಕನ್ ಫ್ಯೂಸ್ ಮಾಡಿ, ಡೈರೆಕ್ಟ್ ಆಗಿ ಲವ್ ಪ್ರಪೋಸ್ ಮಾಡೋದು ಹೇಗೆ ಅಂತ ಗೊತ್ತಾಗಬೇಕಾ?. ಹಾಗಿದ್ರೆ 'ಪ್ರೇಮಲೋಕ' ಚಿತ್ರದಲ್ಲಿ ರವಿಚಂದ್ರನ್ ಜೂಹಿಚಾವ್ಲಾ ಅವರಿಗೆ ಪ್ರಪೋಸ್ ಮಾಡುವ ಈ ದೃಶ್ಯ ನೋಡಿ. ಕ್ಲಿಕ್ ಮಾಡಿ.

ಮಾಸ್ ಸ್ಟೈಲ್ ನಲ್ಲಿ ರಾಮಚಾರಿ ಲವ್ ಪ್ರಪೋಸ್

ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಪ್ರೀತಿ ಬಗ್ಗೆ ಹೇಳಿಕೊಳ್ಳಬೇಕು ಅಂದ್ರೆ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ಚಿತ್ರದ ಸೀನ್ ತುಂವಾ ಇನ್ ಸ್ಪೈರ್ ಆಗುತ್ತೆ. ರಾಕಿಂಗ್ ಸ್ಟಾರ್ ಯಶ್ ಅವರು ರಾಧಿಕ ಪಂಡಿತ್ ಗೆ ಲವ್ ಪ್ರಪೋಸ್ ಮಾಡುವ ಈ ಸೀನ್ ಹೇಗಿದೆ ಅಂತ ನೋಡಲು ಕ್ಲಿಕ್ ಮಾಡಿ.

'ಓಂ' ಚಿತ್ರದಲ್ಲಿ ಶಿವಣ್ಣ

ಯಾವುದೇ ಕನ್ನಡ ಚಿತ್ರಗಳಲ್ಲಿ ಲವ್ ಪ್ರಪೋಸ್ ಸೀನ್‌ ನೋಡಿದರು ಭಯ ಆಗುವುದಿಲ್ಲ. ಆದ್ರೆ 'ಓಂ' ಚಿತ್ರದಲ್ಲಿ ಶಿವರಾಜ್ ಕುಮಾರ್ ಪ್ರೇಮ ಅವರಿಗೆ ಲವ್ ಪ್ರಪೋಸ್ ಮಾಡುವ ದೃಶ್ಯ ನೋಡಿದ್ರೆ ಎಂತಹವರಿಗೂ ಸ್ವಲ್ಪ ಭಯ ಎನಿಸುತ್ತೆ. ಆ ಸೀನ್ ಹೇಗಿದೆ ಅಂತ ಇಂದು(ಪ್ರೇಮಿಗಳ ದಿನ) ಒಮ್ಮೆ ನೋಡಿ.

'ಓಂ' ಸಿನಿಮಾದಲ್ಲಿ ಶಿವಣ್ಣ ಲವ್ ಪ್ರಪೋಸಿಂಗ್ ಹೇಗಿದೆ ನೋಡಲು ಕ್ಲಿಕ್ ಮಾಡಿ.

'ಮುಂಗಾರು ಮಳೆ'ಯಲ್ಲಿ ಲವ್ ಪ್ರಪೋಸ್ ಮಾಡೋದು ಹೇಗೆ?

ಟೈಮ್ ಖರಾಬ್ ಆಗಿದ್ರು ಪರವಾಗಿಲ್ಲ. ಮುಂಗಾರು ಮಳೆ ಸಿಕ್ಕಾಪಟ್ಟೆ ಸುರಿತಿದ್ರು ಪರವಾಗಿಲ್ಲ. ಹುಡುಗಿ ಕೊನೆಗೆ ಪ್ರೀತಿ ಒಪ್ಪಿಕೊಳ್ಳದಿದ್ರೂ ಓಕೆ. ಡೀಸೆಂಟ್ ಹುಡುಗ ಅಂತನಾದ್ರು ಕೊನೆಗೆ ಹೇಳಬೇಕು. ಆ ರೀತಿ ಡೈಲಾಗ್ ಗಳಲ್ಲಿ ಪ್ರಪೋಸ್ ಮಾಡಬೇಕು ಅಂದ್ರೆ ಗಣೇಶ್ ನೋಡಿ ಕಲಿತುಕೊಳ್ಳಿ.

'ಮುಂಗಾರು ಮಳೆ' ಚಿತ್ರದಲ್ಲಿ ಗಣೇಶ್ ಲವ್ ಪ್ರಪೋಸ್ ಸೀನ್ ನೋಡಲು ಕ್ಲಿಕ್ ಮಾಡಿ

'ಬೃಂದಾವನ' ಚಿತ್ರದ ಲವ್ ಸ್ಟೋರಿ

ಹುಡುಗೀರು ಹೇಳೋ ಲವ್ ಸ್ಟೋರಿ ಸುಳ್ಳೋ? ನಿಜವೋ? ಅಂತ ಗೊತ್ತಾಗಬೇಕು ಅಂದ್ರೆ 'ಬೃಂದಾವನ' ಚಿತ್ರ ನೋಡಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಲವ್ ಪ್ರಪೋಸ್ ಮಾಡೋ ಸ್ಟೈಲ್ ಹೇಗಿದೆ ನೋಡಲು ಕ್ಲಿಕ್ ಮಾಡಿ

ಚಿಕ್ಕಣ್ಣ ಲವ್ ಪ್ರಪೋಸ್ ಹೇಗ್ ಮಾಡ್ತಾರೆ?

ಚಿಕ್ಕಣ ಲವ್ ಪ್ರಪೋಸ್ ಮಾಡಿದ್ರೆ ಹೇಗಿರುತ್ತೆ ಅಂತ ಗೊತ್ತಾಗಬೇಕಾ? ಹಾಗಿದ್ರೆ 'ಅಧ್ಯಕ್ಷ' ಚಿತ್ರದ ಈ ಸೀನ್ ನೋಡಿ..

English summary
Valentines Day Special: Here you can watch top ten love proposing scenes in kannada movies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada