»   » ಗುಲಾಬಿಗೆ ಗುಲಾಮನಾದ ಪ್ರೇಮ ಗೀತೆಗಳು

ಗುಲಾಬಿಗೆ ಗುಲಾಮನಾದ ಪ್ರೇಮ ಗೀತೆಗಳು

Posted By:
Subscribe to Filmibeat Kannada

ಪ್ರೀತಿಯ ಸಂಕೇತ ಯಾವುದು ಅಂದ್ರೆ, ಹಾರ್ಟ್ ಸಿಂಬಲ್ ಗಿಂತ ಮೊದಲು ಬೆರಳು ಮಾಡುವುದು ಗುಲಾಬಿ ಹೂವಿನ ಕಡೆಗೆ. ಇಂದು ಅಸಂಖ್ಯಾತ ಯುವ ಮನಸ್ಸುಗಳು ಗುಲಾಬಿ ಹೂವನ್ನು ಕೈಯಲ್ಲಿ ಹಿಡಿದು ತಮ್ಮ ಕಲ್ಪನೆಯ ಹೆಣ್ಣಿಗೆ ಪ್ರೇಮ ನಿವೇದನೆಯನ್ನು ಹೇಳುವ ದಿನ. ಗುಲಾಬಿ ಪ್ರೀತಿಯ ವಾಹಕ ಇದ್ದಂತೆ.[ಕನ್ನಡ ತಾರೆಯರ ಪ್ರೀತಿ ಮತ್ತು ಪ್ರೇಮ ನಿವೇದನೆಯ ಇಂಟ್ರೆಸ್ಟಿಂಗ್ ಕಥೆ]

ಬ್ರಹ್ಮ ಶ್ರೇಷ್ಠ ಹೂವೆಂದು ಮೆಚ್ಚಿದ ಗುಲಾಬಿ ಹೂವು ಗ್ರೀಕರ ಪ್ರೇಮ ದೇವತೆಯೂ ಹೌದು. ಗುಲಾಬಿ ಹೂವು ಕವಿಗಳ ಕಲ್ಪನೆಯ ಸಂಕೇತವು ಸಹ. ಹುಡುಗನೊಬ್ಬ ತಾನು ಇಷ್ಟಪಟ್ಟ ಹುಡುಗಿಯಲ್ಲಿ ಪ್ರೀತಿಯನ್ನು ಹೇಳಿಕೊಳ್ಳಲು ಹೋದಾಗ ಪ್ರೀತಿಗೆ ಮೊದಲು ಜೀವ ತುಂಬುವುದು ಗುಲಾಬಿ ಹೂವು. ಹಾಗೆ ಹುಡುಗಿಯರಿಗೂ ಗುಲಾಬಿ ಹೂವು ಎಂದರೇ ಜೀವ.[ಪ್ರಣಯದ ಹುಚ್ಚು ಹಿಡಿಸಿದ ಸೂಪರ್ ಹಿಟ್ ಚಿತ್ರಗಳು]

ಕನ್ನಡ ಬೆಳ್ಳಿತೆರೆಯಲ್ಲಿ ಹಲವು ಸಿನಿಮಾ ಗಳಲ್ಲಿ ಕೇವಲ ಗುಲಾಬಿ ಹೂವಿನ ಸೌಂದರ್ಯ, ಗುಣವನ್ನು ಹೊಗಳಿ ಹಾಡುಗಳನ್ನು ರಚಿಸಿರುವುದು ಬಹಳಷ್ಟು ಜನರಿಗೆ ಗೊತ್ತಿದೆ. ಗುಲಾಬಿ ಹೂ ಕುರಿತಾಗಿ ಇರುವ ಈ ಸಿನಿಮಾ ಹಾಡುಗಳು ಇಂದಿಗೂ ಯಾವುದೇ ಕಾರ್ಯಕ್ರಮದಲ್ಲಿ ಎವರ್ ಗ್ರೀನ್ ಆಗಿ ಸೌಂಡ್ ಮಾಡುತ್ತಿವೆ. ಅಲ್ಲದೇ ಸದಾ ಸಂಗೀತ ಪ್ರೇಮಿಗಳನ್ನು ರಂಜಿಸುವ ಸೂಪರ್ ಹಿಟ್ ಹಾಡುಗಳು ಇವೇ ಆಗಿವೆ. ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಇಂದು ಬೆಳ್ಳಿತೆರೆಯ ಟಾಪ್ ಸೂಪರ್ ಹಿಟ್ ಗುಲಾಬಿ ಹೂ (ರೋಸ್) ಕುರಿತ ಹಾಡುಗಳು ಯಾವುವು ಎಂದು ನಾವು ನಿಮಗೆ ಪರಿಚಯಿಸುತ್ತಿದ್ದೇವೆ.

ಹೂವಾ ರೋಜಾ ಹೂವಾ (ಕಲಾವಿದ)

ಸ್ಯಾಂಡಲ್ ವುಡ್ ನಲ್ಲಿ ಪ್ರೇಮಲೋಕ ಸೃಷ್ಟಿಸಿದ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಕಲಾವಿದ' ಚಿತ್ರದ ಫೇಮಸ್ ಹಾಡು 'ಹೂವಾ ರೋಜಾ ಹೂವಾ'. ಈ ಚಿತ್ರದಲ್ಲಿ ರೋಜಾ ಅವರು ನಾಯಕಿ ಆಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದರು. 1997 ರಲ್ಲಿ ಮೂಡಿಬಂದ 'ಕಲಾವಿದ' ಚಿತ್ರದ ಈ ಹಾಡು ಇಂದಿಗೂ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಸದಾ ಗುನುಗುತ್ತಿರುತ್ತದೆ.

'ಹೂವಾ ರೋಜಾ ಹೂವಾ' ಹಾಡನ್ನು ಕೇಳಲು ಕ್ಲಿಕ್ ಮಾಡಿ

ಓ ಗುಲಾಬಿಯೇ (ಓಂ)

'ಓಂ' ಚಿತ್ರದಲ್ಲಿರುವ 'ಓ ಗುಲಾಬಿಯೇ' ಹಾಡಿಗೆ ಡಾ ರಾಜ್‌ ಕುಮಾರ್ ಅವರು ಕಂಠದಾನ ಮಾಡಿದ್ದಾರೆ. ಈ ಹಾಡಿಗೆ ನಾದಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆ ಮಾಡಿದ್ದರು. ಅಂಡರ್ ವರ್ಲ್ಡ್ ಕುರಿತ ಚಿತ್ರದಲ್ಲಿಯೂ ಗುಲಾಬಿ ಹೂವಿನ ಕುರಿತ ಹಾಡು ಫೇಮಸ್ ಆಗಿದೆ.

'ಓ ಗುಲಾಬಿಯೇ ಹಾಡನ್ನು ಕೇಳಲು ಕ್ಲಿಕ್ ಮಾಡಿ

ಈ ಗುಲಾಬಿಯು ನಿನಗಾಗಿ ('ಮುಳ್ಳಿನ ಗುಲಾಬಿ)

ಅನಂತನಾಗ್ ಮತ್ತು ಆರತಿ ಅಭಿನಯದ 'ಮುಳ್ಳಿನ ಗುಲಾಬಿ' ಚಿತ್ರದಲ್ಲಿ 'ಈ ಗುಲಾಬಿಯು ನಿನಗಾಗಿ.. ಇದು ಚೆಲ್ಲುವ ಪರಿಮಳ ನಿನಗಾಗಿ' ಎಂದು ಹಾಡು ಪ್ರಾರಂಭವಾಗುತ್ತದೆ. ಸತ್ಯಂ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. 1982 ರ ಕಾಲಘಟ್ಟದ ಕನ್ನಡದ ಅತ್ಯುತ್ತಮ ರೊಮ್ಯಾಂಟಿಕ್ ಹಾಡು ಇದು. ವ್ಯಾಲೆಂಟೈನ್ಸ್ ಡೇ ದಿನ ಈ ಹಾಡನ್ನು ನೆನೆಯುವವರು ಹೆಚ್ಚಿದ್ದಾರೆ.

'ಈ ಗುಲಾಬಿಯು ನಿನಗಾಗಿ' ಹಾಡನ್ನು ಕೇಳಲು ಕ್ಲಿಕ್ ಮಾಡಿ

ನಲಿವಾ ಗುಲಾಬಿ ಹೂವೇ (ಆಟೋ ರಾಜಾ)

ಶಂಕರ್ ನಾಗ್ ಅಭಿನಯದ 'ಆಟೋ ರಾಜ' ಚಿತ್ರದಲ್ಲಿ ಗುಲಾಬಿ ಹೂವನ್ನು ಒಂದು ಹೆಣ್ಣು ಎಂದು ಭಾವಿಸಿ, ಸಾಹಿತ್ಯ ರಚಿಸಲಾಗಿತ್ತು. 'ನಲಿವಾ ಗುಲಾಬಿ ಹೂವೇ.. ನಿನಗೆ ನನ್ನಲ್ಲಿ ಒಲವೇ' ಎಂಬ ಹಾಡು ಶಂಕರ್ ನಾಗ್ ಅವರ ಎವರ್ ಗ್ರೀನ್ ಸೂಪರ್ ಹಿಟ್ ಹಾಡಾಗಿದೆ.

'ನಲಿವಾ ಗುಲಾಬಿ ಹೂವೆ' ಹಾಡನ್ನು ಕೇಳಲು ಕ್ಲಿಕ್ ಮಾಡಿ

ಯಾರೇ ನೀನು ರೋಜಾ ಹೂವೇ (ನಾನು ನನ್ನ ಹೆಂಡತಿ)

ವಿಶೇಷ ಅಂದ್ರೆ ರೊಮ್ಯಾಂಟಿಕ್ ಮತ್ತು ಹೂಗಳನ್ನು ಹೊಗಳುವ ಹೆಚ್ಚು ಹಾಡುಗಳನ್ನು ರವಿಚಂದ್ರನ್ ಅವರ ಚಿತ್ರಗಳಲ್ಲಿ ಕಾಣಬಹುದು. ರೋಸ್ ಕುರಿತಾಗಿಯೇ ಇರುವ ಕ್ರೇಜಿಸ್ಟಾರ್ ಅವರ ಇನ್ನೊಂದು ಹಾಡು 'ಯಾರೇ ನೀನು ರೋಜಾ ಹೂವೇ'. ಇಂದಿಗೂ ಸಹ ಈ ಹಾಡು ಪಡ್ಡೆ ಹುಡುಗರು ಬ್ಯೂಟಿಫುಲ್ ಹುಡುಗಿಯರನ್ನು ನೋಡಿದಾಗ ಹಾಡುವ ಸಾಂಗ್ ಆಗಿ ಚಾಲ್ತಿಯಲ್ಲಿದೆ. ಕ್ಲಿಕ್ ಮಾಡಿ

ಪ್ರೀತಿಯ ರಾಯಭಾರಿ ರೋಜ್(ರೋಜ್)

ಅಜಯ್ ರಾವ್ ಮತ್ತು ಅಮೃತ ಅಭಿನಯದ 'ರೋಜ್' ಸಿನಿಮಾದಲ್ಲಿಯೂ ಪ್ರೀತಿಯ ರಾಯಭಾರಿ ರೋಸ್ಸ್ಥಾನಗಳಿಸಿದೆ. 2014 ರಲ್ಲಿ ತೆರೆ ಕಂಡ 'ರೋಜ್' ಸಿನಿಮಾದಲ್ಲಿ ರೋಸ್ ಬಗ್ಗೆ ಇರುವ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದರು, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡು ಸಹ ಸೂಪರ್ ಹಿಟ್ ಆಗಿದೆ.

'ಪ್ರೀತಿಯ ರಾಯಭಾರಿ ರೋಜ್' ಹಾಡನ್ನು ಕೇಳಲು ಕ್ಲಿಕ್ ಮಾಡಿ

English summary
Valentines Day Special: Kannada Super hit songs on Red Rose. Here you can check all those songs.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X