»   » ಕನ್ನಡ ತಾರೆಯರ ಪ್ರೀತಿ ಮತ್ತು ಪ್ರೇಮ ನಿವೇದನೆಯ ಇಂಟ್ರೆಸ್ಟಿಂಗ್ ಕಥೆ

ಕನ್ನಡ ತಾರೆಯರ ಪ್ರೀತಿ ಮತ್ತು ಪ್ರೇಮ ನಿವೇದನೆಯ ಇಂಟ್ರೆಸ್ಟಿಂಗ್ ಕಥೆ

Posted By:
Subscribe to Filmibeat Kannada

ಪ್ರೇಮಲೋಕ.......! ವರ್ಣಿಸಿದಷ್ಟೂ ಮುಗಿಯದ ಸುಂದರ ಅದ್ಭುತ ಲೋಕ. ಅವಳ ಒಂದೇ ಒಂದು ಹೂ ನಗುವಿಗೆ ದಿನವಿಡೀ ಕಾತರಿಸುವ ಪ್ರೇಮಿ... ಅವನ ಪ್ರೀತಿ ತುಂಬಿದ ಮಾತಿಗೆ, ಸ್ಪರ್ಶಕ್ಕೆ ಮುದುಡಿ ಹೋಗುವ ಪ್ರೇಯಸಿ...ಅದಕ್ಕೆ ಅನ್ಸುತ್ತೆ ಪ್ರೇಮ ಹುಟ್ಟದ ಹೃದಯವೇ ಇಲ್ಲ ಎನ್ನುವುದು.

ಪ್ರೀತಿ ಮಾಡುವುದಷ್ಟೇ ಯಶಸ್ಸಲ್ಲ. ಆ ಪ್ರೀತಿಯನ್ನ ಜೀವನ ಪರ್ಯಾಂತ ಉಳಿಸಿಕೊಳ್ಳುವುದು ಅತಿ ದೊಡ್ಡ ಸಾಧನೆ.

ಇಂತಹ ಪ್ರೀತಿಯ ಸೆಲೆಯಲ್ಲಿ ತಮ್ಮ ಹೃದಯವನ್ನ ಕಳೆದುಕೊಂಡು, ಆ ಪ್ರೀತಿಯನ್ನ ಜೀವನದುದ್ದಕ್ಕು ಕರೆದುಕೊಂಡು ಬರುತ್ತಿರುವ ನಮ್ಮ ಸ್ಯಾಂಡಲ್ ವುಡ್ ತಾರೆಯರ ಲವ್ ಸ್ಟೋರಿಗಳನ್ನ ಪ್ರೇಮಿಗಳ ದಿನದ ವಿಶೇಷವಾಗಿ ನಾವು ಹೇಳ್ತಿವಿ.

ಮೈಸೂರು ಹುಡುಗ-ಮರಾಠಿ ಹುಡುಗಿಯ ಪ್ರೇಮಕಥೆ

ಸಾಹಸ ಸಿಂಹ, ಕೋಟಿಗೊಬ್ಬ, ಜನನಾಯಕ ಅಂತೆಲ್ಲ ಕರೆಸಿಕೊಳ್ಳುವ ಡಾ.ವಿಷ್ಣುವರ್ಧನ್ ಅವರದ್ದು ಪ್ರೇಮ ವಿವಾಹ. ಮೈಸೂರಿನ ಅಪ್ಪಟ ಈ ಹುಡುಗ ವಿಷ್ಣುಗೆ, ಮರಾಠಿ ಹುಡುಗಿ ಭಾರತಿಗೆ ಬೋಲ್ಡ್ ಆಗಿದ್ದರು. ವಯಸ್ಸಿನಲ್ಲಿ ತಮಗಿಂತ ದೊಡ್ಡವರಾಗಿದ್ದ ಭಾರತಿ ಅವರಿಗೆ ವಿಷ್ಣು ಅವರೇ ಮೊದಲು ಪ್ರೀತಿಯನ್ನ ಹೇಳಿಕೊಂಡಿದ್ದರು. ಭಾರತಿಯವರು ಕೂಡ ವಿಷ್ಣು ಅವರ ಪ್ರೀತಿಗೆ ಸೆರೆಯಾಗಿದ್ದರು. ತಮ್ಮ ಮನೆಯವರಿಗೆ ಇಷ್ಟವಿಲ್ಲದಿದ್ದರು ತಾವು ಪ್ರೀತಿಸಿದ ಭಾರತಿಯವರನ್ನ 1975ರಲ್ಲಿ ವಿಷ್ಣುದಾದ ಕೈಹಿಡಿದಿದ್ದರು.[ಅನೇಕರಿಗೆ ಗೊತ್ತಿಲ್ಲದ ವಿಷ್ಣು ಪ್ರೇಮ ಪುರಾಣದ ಮೊದಲನೇ ಅಧ್ಯಾಯ]

'ರೆಬೆಲ್' ಪ್ರೀತಿಗೆ ಸುಮಲತಾ ಬೋಲ್ಡ್

ಪ್ರೀತಿ ಮಾಡಿ ಮದುವೆಯಾಗಬೇಕು ಎಂದುಕೊಂಡವರಿಗೆ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ದಂಪತಿ ಮಾದರಿ. ಯಾಕಂದ್ರೆ, ಇವರದ್ದು ಕೂಡ ಲವ್ ಮ್ಯಾರೇಜ್. ಸುಮಲತಾ ಅವರಿಗೆ ಅಂಬಿ ಅವರೇ 'ಐ ಲವ್ ಯೂ' ಹೇಳುವ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಅಂಬಿ ಅವರ ಪ್ರೇಮವನ್ನು ಸುಮಲತಾ ಅವರು ಕೂಡ ಒಪ್ಪಿಕೊಂಡರು. ಆಮೇಲೆ ಕೆಲವು ಕಾಲ ಒಟ್ಟಿಗೆ ಓಡಾಡುತ್ತಾ ಮರ ಸುತ್ತಿದರೂ ಕೂಡ ಮನೆಯಲ್ಲಿ ಮಾತ್ರ ತಮ್ಮಿಬ್ಬರ ಪ್ರೀತಿ ವಿಷಯ ಮುಚ್ಚಿಟ್ಟಿದ್ದರು. ತದ ನಂತರ ನಿಧಾನವಾಗಿ ಮನೆಯಲ್ಲಿ ತಿಳಿಸಿ ಸಪ್ತಪದಿ ತುಳಿದರು.[ಪ್ರೇಮಿಗಳ ದಿನದ ಸ್ಪೆಷಲ್: ಅಂಬಿಗೆ ಸುಮ ಅವರ ಮೇಲೆ ಲವ್ ಆಗಿದ್ಹೇಗೆ?]

ಒಂಭತ್ತನೇ ಕ್ಲಾಸ್ ಪ್ರೀತಿ

ನವರಸ ನಾಯಕ ಜಗ್ಗೇಶ್ ಅವರ ಲವ್ ಕಹಾನಿ ತುಂಬಾ ಇಂಟ್ರಸ್ಟಿಂಗ್. ಜಗ್ಗೇಶ್ ಅವರಿಗೆ ಒಂಭತ್ತನೇ ಕ್ಲಾಸ್ ನಲ್ಲೇ ಲವ್ ಆಗಿತ್ತು. ಆಗ ಜಗ್ಗೇಶ್ ಅವರ ವಯಸ್ಸು 19 ವರ್ಷ, ಜಗ್ಗೇಶ್ ಪ್ರೀತಿಸುತ್ತಿದ್ದ ಪರಿಮಳಾ ಅವರ ವಯಸ್ಸು ಆಗಿನ್ನು 15 ವರ್ಷ. ಇವರಿಬ್ಬರ ಮದುವೆಗೆ ಮನೆಯವರು ಒಪ್ಪಿಕೊಂಡಿಲ್ಲ. ಕೊನೆಗೆ ತಮ್ಮ ಪ್ರೀತಿಯನ್ನ ಬಿಡದ ಜಗ್ಗೇಶ್, ದೇವಾಸ್ಥಾನವೊಂದರಲ್ಲಿ ಪರಿಮಳಾ ಅವರನ್ನ ವಿವಾಹವಾದರು. ಈಗ ಇವರ ದಾಂಪತ್ಯಕ್ಕೆ 32 ವರ್ಷಗಳ ಸಂಭ್ರಮ ಮತ್ತು ಇಂದಿನ ಯುವ ಪೀಳಿಗೆಗೆ ಮಾದರಿ.[ವಿಷ ಕುಡಿಯುತ್ತೇನೆ ಅಂತ ಜಗ್ಗೇಶ್ ಗೆ ಪತ್ರ ಬರೆದಿದ್ದ ಪತ್ನಿ ಪರಿಮಳಾ.!]

ಉಪೇಂದ್ರ-ಪ್ರಿಯಾಂಕಾ ಪ್ರೇಮಕಥೆ

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಜೋಡಿ ಸ್ಯಾಂಡಲ್ ವುಡ್ ನ ದಿ ಬೆಸ್ಟ್. ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಎಂದಿದ್ ಉಪ್ಪಿ, ಪ್ರಿಯಾಂಕಾ ಅವರನ್ನ ಪ್ರೀತಿಸಿ ಮದುವೆಯಾಗಿದ್ದರು. 2000ನೇ ಇಸವಿಯಲ್ಲಿ 'ರಾ' ಹಾಗೂ ಎಚ್2ಓ ಚಿತ್ರದ ವೇಳೆ ಮೊದಲ ಭಾರಿಗೆ ಪ್ರಿಯಾಂಕಾ ಅವರನ್ನ ನೋಡಿದ ಉಪೇಂದ್ರ, ತದ ನಂತರ ಪ್ರಿಯಾಂಕಾ ಅವರೊಂದಿಗೆ ಪ್ರೀತಿಯನ್ನ ಶುರು ಮಾಡಿದರು. 2003 ರಲ್ಲಿ ಇಬ್ಬರು ಕುಟುಂಬಸ್ಥರನ್ನ ಒಪ್ಪಿಸಿ ಉಪ್ಪಿ-ಪ್ರಿಯಾಂಕಾ ಮದುವೆ ಆದರು.

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಕಥೆ

ಯಶ್ ಹಾಗೂ ರಾಧಿಕಾ ಪಂಡಿತ್ ಎಲ್ಲರಿಗೂ ಗೊತ್ತಿರುವ ಹಾಗೆ 'ನಂದಗೋಕುಲ' ಧಾರವಾಹಿಯ ಮೂಲಕ ಒಟ್ಟಾಗಿ ವೃತ್ತಿ ಜೀವನವನ್ನ ಆರಂಭಿಸಿ ಈಗ ವೈವಾಹಿಕ ಜೀವನದಲ್ಲೂ ಒಟ್ಟಾಗಿದ್ದಾರೆ. ಹೌದು, ಸ್ಯಾಂಡಲ್ ವುಡ್ ನ ರಾಕಿಂಗ್ ಜೋಡಿಗಳದ್ದು ಕೂಡ ಇಂಟ್ರಸ್ಟಿಂಗ್ ಲವ್ ಸ್ಟೋರಿ. ಇವರಿಬ್ಬರ ಮಧ್ಯೆ 10 ವರ್ಷಗಳ ಪರಿಚಯವಿದ್ರೂ, ಪ್ರೀತಿಯಾಗಿದ್ದು 5 ವರ್ಷದ ಹಿಂದೆ. 'ಡ್ರಾಮಾ' ಸಿನಿಮಾ ಮಾಡುವ ವೇಳೆ, ಫೋನ್ ನಲ್ಲಿ ಯಶ್, ರಾಧಿಕಾ ಅವರಿಗೆ ಪ್ರಪೋಸ್ ಮಾಡಿದ್ರಂತೆ. ಆಮೇಲೆ ರಾಧಿಕಾ ಅವರು ಸಮಯ ತಗೊಂಡು ಯಶ್ ಅವರ ಪ್ರೀತಿಯನ್ನ ಒಪ್ಪಿಕೊಂಡಂರಂತೆ.[ಮಾಧ್ಯಮಗಳ ಮುಂದೆ ಪ್ರೇಮ ಪುರಾಣ ಬಾಯ್ಬಿಟ್ಟ ಯಶ್-ರಾಧಿಕಾ]

ಡ್ಯಾನ್ಸ್ ಕ್ಲಾಸ್ ನಲ್ಲಿ ಹುಟ್ಟಿದ ಪ್ರೀತಿ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ತೆರೆ ಮೇಲೆ ಹೆಚ್ಚು ಲವರ್ ಬಾಯ್ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಅದೇ ರೀತಿ ರಿಯಲ್ ಲೈಫ್ ನಲ್ಲೂ ಪ್ರಜ್ವಲ್ ದೇವರಾಜ್ ಅವರದ್ದು ಲವ್ ಮ್ಯಾರೇಜ್. ಪ್ರಜ್ವಲ್ ಹಾಗೂ ರಾಗಿಣಿ ಚಂದ್ರನ್ ಇಬ್ಬರು ಬಾಲ್ಯ ಸ್ನೇಹಿತರು. ಶಾಲೆಯಲ್ಲಿ ಓದುತ್ತಿರುವಾಗಲೇ ಇಬ್ಬರ ಮಧ್ಯೆ ಪರಿಚಯವಿತ್ತು. ಒಟ್ಟಿಗೆ ಡ್ಯಾನ್ಸ್ ಕಲಿಯುತ್ತಿದ್ದರು. ಹೀಗೆ, ಸ್ನೇಹ, ಪ್ರೀತಿಯಾಗಿ ಮೊಳಕೆಯೊಡೆದು ಕೊನೆಗೆ ವಿವಾಹದ ಬಂಧನಕ್ಕೆ ನಾಂದಿ ಆಯಿತು.

ನಿಧಿ ಸುಬ್ಬಯ್ಯ-ಲವೇಶ್

'ಪಂಚರಂಗಿ' ಬೆಡಗಿ ನಿಧಿ ಸುಬ್ಬಯ್ಯ ಇತ್ತೀಚೆಗಷ್ಟೇ ಮುಂಬೈ ಮೂಲದ ಲವೇಶ್ ಅವರ ಜೊತೆ ಸಪ್ತಪದಿ ತುಳಿದರು. ವಿಶೇಷ ಅಂದ್ರೆ, ನಿಧಿ ಸುಬ್ಬಯ್ಯ ಅವರದ್ದು ಕೂಡ ಲವ್ ಕಂ ಆರೆಂಜ್ ಮ್ಯಾರೇಜ್. ಕಾಮನ್‌ ಫ್ರೆಂಡ್‌ ಒಬ್ಬರ ಮೂಲಕ ನಿಧಿ ಸುಬ್ಬಯ್ಯ ಅವರಿಗೆ ಲವೇಶ್ ಪರಿಚಯವಾಗಿತ್ತು. ಅದಕ್ಕೂ ಮುಂಚೆನೇ ಲವೇಶ್ ನಿಧಿ ಅವರನ್ನ ನೋಡಿದ್ದರಂತೆ. ಆದ್ರೆ, ಪ್ರೀತಿ ಹೇಗೆ ಹೇಳಿಕೊಳ್ಳುವುದು ಎಂದು ಕಾಯುತ್ತಿದ್ದ ಲವೇಶ್, ಅದೇ ಕಾಮನ್ ಫ್ರೆಂಡ್ ಮೂಲಕ ಪ್ರಫೋಸ್ ಮಾಡಿದ್ರಂತೆ. ಲವೇಶ್ ಅವರ ಪ್ರೀತಿಯನ್ನ ಒಪ್ಪಿಕೊಂಡ ನಿಧಿ ಈಗ, ತಮ್ಮ ಪ್ರಿಯಕರನ ಜೊತೆಯಲ್ಲೇ ವಿವಾಹವಾಗಿದ್ದಾರೆ.

ಎರಡು ವರ್ಷಗಳ ಪ್ರೀತಿ

ಸುಮಾರು ಎರಡು ವರ್ಷಗಳ ಕಾಲ ಉತ್ತಮ ಸ್ನೇಹಿತರಾಗಿದ್ದ ನಟಿ ಅನುಪ್ರಭಾಕರ್ ಮತ್ತು ನಟ ಕಮ್ ಮಾಡೆಲ್ ರಘು ಮುಖರ್ಜಿ, ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಗಣೇಶ್-ಶಿಲ್ಪಾ ಗಣೇಶ್

'ಮುಂಗಾರು ಮಳೆ' ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಿದ್ದ ಗಣೇಶ್ ಅವರು, ಇದ್ದಕ್ಕಿದ್ದ ಹಾಗೆ ಶಿಲ್ಪಾ ಅವರನ್ನ ವಿವಾಹವಾದರು. ಅಲ್ಲಿಯವರೆಗೂ ಅವರ ಪ್ರೀತಿಯ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಮದುವೆಯ ನಂತರವೇ ಗೊತ್ತಾಗಿದ್ದು, ಶಿಲ್ಪಾ ಹಾಗೂ ಗಣೇಶ್ ಅವರದ್ದು ಲವ್ ಮ್ಯಾರೇಜ್ ಅಂತ.

ಪ್ರೇಮ ವಿವಾಹವಾದ ರಕ್ಷಿತಾ-ಪ್ರೇಮ್

'ಜೋಗಿ' ಚಿತ್ರದ ನಂತರ ನಟಿ ರಕ್ಷಿತಾ ಅವರಿಗೆ ಪರಿಚಯವಾದ ಪ್ರೇಮ್, ರಕ್ಷಿತಾ ಅವರ ಜೊತೆಯಲ್ಲಿ ಹಚ್ಚು ಮಾತನಾಡೋಕೆ ಶುರು ಮಾಡಿದ್ರಂತೆ. ಆ ಸಲುಗೆ ಹಾಗೆ ಪ್ರೀತಿಯಾಗಿ, ಮುಂದೆ ಒಟ್ಟಿಗೆ ದಾಂಪತ್ಯ ಜೀವನಕ್ಕೂ ಸಾಕ್ಷಿಯಾಯಿತು.

English summary
Successful Love Stories Of Kannada Actors & Actresses. Here is the full Details of Sandalwood Stars Love Stories. check out in pics

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X