For Quick Alerts
  ALLOW NOTIFICATIONS  
  For Daily Alerts

  ನಟ ಸುದೀಪ್ ಪತ್ನಿಯ ಕಾರಿನಲ್ಲಿ ಕಳ್ಳತನ

  By Mahesh
  |
  ಬೆಂಗಳೂರು, ಏ.16: ಬಹುಭಾಷಾ ನಟ ಸುದೀಪ್ ಅವರ ಪತ್ನಿ ಕಾರಿನಲ್ಲಿದ್ದ ಅಮೂಲ್ಯ ವಸ್ತುಗಳನ್ನು ಹಾಡಹಗಲೇ ದುಷ್ಕರ್ಮಿಗಳು ದೋಚಿ ಪರಾರಿಯಾಗಿರುವ ಘಟನೆ ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ(ಏ.16) ನಡೆದಿದೆ.

  ತಿಲಕ್ ನಗರದಲ್ಲಿ ಕಾರು ನಿಲ್ಲಿಸಿ ಸ್ಥಳೀಯ ಮಾಲ್ ಬಳಿಗೆ ತೆರಳಿದ್ದ ಸುದೀಪ್ ಅವರ ಪತ್ನಿ ಪ್ರಿಯಾ ಅವರು ಶಾಪಿಂಗ್ ಮುಗಿಸಿ ಕಾರಿನ ಬಳಿ ಬರುವಷ್ಟರಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಪ್ರಿಯಾ ಅವರ ಸ್ಮಾರ್ಟ್ ಫೋನ್, ಕೆಲವು ಚಿನ್ನಾಭರಣ, 1 ಲಕ್ಷ ನಗದು ಇತ್ತು ಎಂದು ತಿಳಿದು ಬಂದಿದೆ.

  ಕಾರಿನ ಗಾಜುಗಳನ್ನು ಪುಡಿ ಮಾಡಿ ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಪ್ರಿಯಾ ಸುದೀಪ್ ಅವರು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಭಿನಯ ಚಕ್ರವರ್ತಿ ಎಂದು ಕರೆಸಿಕೊಳ್ಳುವ ನಟ ಸುದೀಪ್ ಅವರು ಕೇರಳ ಮೂಲದ ಪ್ರಿಯ ಎಂಬುವರನ್ನು ಮದುವೆಯಾಗಿದ್ದು ದಂಪತಿಗೆ ಸಾನ್ವಿ ಎಂಬ ಮಗು ಇರುವುದು ಎಲ್ಲರಿಗೂ ಗೊತ್ತಿದೆ.

  English summary
  Actor Sudeep's wife car robbed by miscreants today at Tilak nagar, Bangalore. Sudeep's wife filed a complaint and Tilak Nagar police are searching for the culprits.A smartphone, ornaments and Rs 1 lakh cash stolen

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X