»   » ಜಗ್ಗೇಶ್ ಎದುರು ಪೊಲೀಸ್ ಆದ ವಸಿಷ್ಠ ಸಿಂಹ

ಜಗ್ಗೇಶ್ ಎದುರು ಪೊಲೀಸ್ ಆದ ವಸಿಷ್ಠ ಸಿಂಹ

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅಭಿನಯಿಸುತ್ತಿರುವ ಹೊಸ ಚಿತ್ರ '8 ಎಂ.ಎಂ' ಫಸ್ಟ್ ಲುಕ್ ಪೋಸ್ಟರ್ ಮತ್ತು ಗೆಟಪ್ ನಿಂದ ಕುತೂಹಲ ಮೂಡಿಸಿದೆ. ಇನ್ನು ಜಗ್ಗೇಶ್ ಅವರ ಈ ಚಿತ್ರದಲ್ಲಿ ಸರಣಿ ಹಂತಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

ಇನ್ನು ಈ ಚಿತ್ರದಲ್ಲಿ ಯುವ ನಟ ವಸಿಷ್ಠ ಸಿಂಹ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಆದ್ರೆ, ಯಾವ ಪಾತ್ರವೆಂಬುದು ನಿರೀಕ್ಷೆ ಮೂಡಿಸಿತ್ತು. ಇದೀಗ, ವಸಿಷ್ಠ ಸಿಂಹ ಅವರ ಪಾತ್ರ ಬಹಿರಂಗವಾಗಿದ್ದು, ಪೊಲೀಸ್ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

Vasishta as police officer in Jaggesh 8 MM

ವಿಡಿಯೋ : ಜಗ್ಗೇಶ್ '8MM' ಚಿತ್ರದ ಮೋಷನ್ ಪೋಸ್ಟರ್ ಸಿಕ್ಕಾಪಟ್ಟೆ ಖದರ್

ಸದಾ ವಿಲನ್ ಪಾತ್ರಗಳಲ್ಲಿ ಅಬ್ಬರಿಸುವ ವಸಿಷ್ಠ ಇತ್ತೀಚೆಗೆ ಎಲ್ಲ ರೀತಿಯ ಪಾತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ಈಗ '8 ಎಂ.ಎಂ' ಚಿತ್ರದಲ್ಲಿ ಪೊಲೀಸ್ ಆಗಿದ್ದು, ಜಗ್ಗೇಶ್ ಎದುರು ಮಿಂಚಲಿದ್ದಾರೆ.

ಅಂದ್ಹಾಗೆ, ಹರಿಕೃಷ್ಣ ಎಂಬ ಹೊಸ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಕಳೆದ ವಾರವಷ್ಟೇ ಸಿನಿಮಾ ಆರಂಭಿಸಿದ್ದಾರೆ.

English summary
Kannada Actor Vasishta, who plays an antagonist usually, has been trying new kind of roles including playing leads in movies and 8MM will be one of them. ಜಗ್ಗೇಶ್ ಅಭಿನಯಿಸುತ್ತಿರುವ 8 ಎಂ.ಎಂ ಚಿತ್ರದಲ್ಲಿ ವಸಿಷ್ಠ ಸಿಂಹ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada