For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸುತ್ತಿರುವ ನಟ ವಸಿಷ್ಠ

  |

  2020ರ ಕೊನೆಯ ದಿನದಲ್ಲಿದ್ದೇವೆ. ಈ ವರ್ಷ ಸಿಹಿಗಿಂತ ಹೆಚ್ಚಾಗಿ ಕಹಿ ಅನುಭವಿಸಿದ್ದೆ ಜಾಸ್ತಿ. ಕೊರೊನಾ ವೈರಸ್ ಈ ವರ್ಷದ ಎಲ್ಲಾ ಸಂತೋಷ, ನೆಮ್ಮದಿಯನ್ನೆ ನುಂಗಿ ಹಾಕಿದೆ. ಅಂತೂ ಈ ವರ್ಷ ಕಳೆಯಿತು ಬರುವ ವರ್ಷವಾದರೂ ಅದ್ಭುತವಾಗಿರಲಿ, ಮೊದಲು ಕೊರೊನಾ ತೊಲಗಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

  2021ನ್ನು ಅದ್ದೂರಿಯಾಗಿ ಸ್ವಾಗತ ಮಾಡಲು ಇಡೀ ವಿಶ್ವ ಎದುರು ನೋಡುತ್ತಿದೆ. ಅನೇಕರು ಹೊಸ ವರ್ಷವನ್ನು ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ 2021ಅನ್ನು ವಿಭಿನ್ನವಾಗಿ ಆಚರಣೆ ಮಾಡಲು ಪ್ಲಾನ್ ಮಾಡಿದ್ದಾರೆ.

  'ತಲ್ವರ್ ಪೇಟೆ'ಯಲ್ಲಿ ವಸಿಷ್ಠ ಸಿಂಹ ಜೊತೆ ಕಾಣಿಸಿಕೊಂಡ ಸೋನಲ್'ತಲ್ವರ್ ಪೇಟೆ'ಯಲ್ಲಿ ವಸಿಷ್ಠ ಸಿಂಹ ಜೊತೆ ಕಾಣಿಸಿಕೊಂಡ ಸೋನಲ್

  ಹೌದು, ವಸಿಷ್ಠ ನಾಳೆ ಅಂದರೆ 2021 ಮೊದಲ ದಿನ ಪ್ರಾಣಿಯನ್ನು ದತ್ತು ಪಡೆಯುತ್ತಿದ್ದಾರೆ. ಈ ಮೂಲಕ ಹೊಸ ವರ್ಷದ ಮೊದಲ ದಿನವನ್ನು ಹೊಸ ರೀತಿ ಆಚರಿಸಲು ನಿರ್ಧರಿಸಿದ್ದಾರೆ. ಬೆನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವಸಿಷ್ಠ ಪ್ರಾಣಿಯನ್ನು ದತ್ತು ಪಡೆಯುತ್ತಿದ್ದಾರೆ. ಆದರೆ ಯಾವ ಪ್ರಾಣಿ ಎನ್ನುವುದು ಬಹಿರಂಗ ಪಡಿಸಿಲ್ಲ. ಆದರೆ ಪ್ರಾಣಿ ದತ್ತು ಪಡೆಯುವ ಮೂಲಕ 2021ನ್ನು ವಿಭಿನ್ನವಾಗಿ ಸದಾ ಕಾಲ ನೆನಪಿನಲ್ಲಿರುವ ಹಾಗೆ ಆಚರಣೆ ಮಾಡುತ್ತಿದ್ದಾರೆ.

  ಅಂದಹಾಗೆ ಸ್ಯಾಂಡಲ್ ವುಡ್ ನಲ್ಲಿ ಅನೇಕ ಮಂದಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಚಾಲೆಂಜ್ ಸ್ಟಾರ್ ದರ್ಶನ್, ಸೃಜನ್ ಲೋಕೇಶ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಇದೀಗ ಅದೇ ಸಾಲಿಗೆ ವಸಿಷ್ಠ್ ಸಹ ಸೇರುತ್ತಿದ್ದಾರೆ.

  ಬಾಯ್ ಫ್ರೆಂಡ್ ಜೊತೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಗೊಗ್ಲಿ ಬೆಡಗಿ | Filmibeat Kannada

  ನಟ ದರ್ಶನ್ ಅವರಿಗೆ ಇರುವ ಪ್ರಾಣಿ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆಗಾಗ ಮೈಸೂರು ಮೃಗಾಲಯದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಇತ್ತೀಚಿಗೆ ನಟ ಶಿವರಾಜ್ ಕುಮಾರ್ ಮೈಸೂರು ಮೃಗಾಲಯ ನಲ್ಲಿ ಪಾರ್ವತಿ ಎನ್ನುವ ಆನೆಯನ್ನು ದತ್ತು ಪಡೆದಿದ್ದಾರೆ. ಇದೀಗ ವಸಿಷ್ಠ ಯಾವ ಪ್ರಾಣಿಯನ್ನು ದತ್ತು ಪಡೆಯುತ್ತಾರೆ ಎನ್ನುವುದನ್ನು ಕಾದುನೋಡಬೇಕು.

  English summary
  Kannada Actor Vasishta Simha decide to adopt animals for new year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion