Don't Miss!
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- News
Budget 2023; ಬಜೆಟ್ನಲ್ಲಿ ಹೊಸ ವಿಚಾರವಿಲ್ಲ, ಇದು ಘೋಷಣೆಗಳ ಮತ್ತು ಕೇವಲ ಪ್ರಚಾರದ ಬಜೆಟ್:ಎಂ.ಬಿ.ಪಾಟೀಲ್
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Technology
ಬಜೆಟ್ ಬೆಲೆಯಲ್ಲಿ ದೂಳೆಬ್ಬಿಸಲು ಮೊಟೊ E13 ತಯಾರಿ! ಲಾಂಚ್ ಯಾವಾಗ!
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನಾಯಿ ಮರಿ ಕೊಟ್ಟು ಹರಿಪ್ರಿಯಾರನ್ನು ಪಟಾಯಿಸಿಕೊಂಡಿಲ್ಲ.. ತುಂಬಾ ಕಷ್ಟಪಟ್ಟಿದ್ದೀನಿ" –ವಸಿಷ್ಠ ಸಿಂಹ
ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ ವೈವಾಹಿಕಿ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ. 2023ರ ಮೊದಲ ತಿಂಗಳಲ್ಲಿ ಶುಭ ಕಾರ್ಯ ನಡೆಯಲಿದೆ. ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಕೌಟುಂಬಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಡೇಟಿಂಗ್ ವಿಷಯ ಹೊರಬಿದ್ದಿತ್ತು. ಬಳಿಕ ನಿಶ್ಚಿತಾರ್ಥದ ವಿಷಯ ಕೂಡ ರಿವೀಲ್ ಆಗಿತ್ತು. ನಂತ್ರ ಇಬ್ಬರು ಮದುವೆ ಆಗುತ್ತಿರೋ ಮ್ಯಾಟರ್ ಕೂಡ ಹೊರಬಿದ್ದಿತ್ತು. ಆದರೂ ಈ ಜೋಡಿ ಮಾತ್ರ ನೇರವಾಗಿ ಪ್ರತಿಕ್ರಿಯೆ ನೀಡುವುದಕ್ಕೆ ಹೊಗಿರಲಿಲ್ಲ.
ಫಿಕ್ಸ್
ಆಯ್ತು
ಹರಿಪ್ರಿಯಾ-ವಸಿಷ್ಠ
ಸಿಂಹ
ಮದುವೆ:
ಎಲ್ಲಿ?
ಯಾವಾಗ?
ಇನ್ನೇನು ಮದುವೆ ದಿನಾಂಕ ಹತ್ತಿರ ಬರುತ್ತಿರುವಾಗಲೇ ಒಬ್ಬರೂ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷ ಆಗಿದ್ದಾರೆ. ಈ ವೇಳೆ ವಸಿಷ್ಠ ಸಿಂಹ ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದೇಗೆ? ನಾಯಿ ಮರಿ ಕೊಟ್ಟು ಪಟಾಯಸಿದ್ರಾ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ವಸಿಷ್ಠ ಸಿಂಹ ಏನು ಹೇಳಿದ್ರು ಅನ್ನೋ ಝಲಕ್ ಇಲ್ಲಿದೆ.

2016ರಿಂದ ಹರಿಪ್ರಿಯಾ, ವಸಿಷ್ಠ ಸ್ನೇಹಿತರು
"2016ರಿಂದ ಸ್ನೇಹ ನಮ್ಮದು. ಆಗಾಗ ಮಾತಾಡುತ್ತಿದ್ದೆವು. ಈ ಸ್ನೇಹ ಹುಟ್ಟೋಕೆ ಕಾರಣ, ನಾನು ಅವರ ಅಭಿಮಾನಿ. ಆಕ್ಟರ್ ಆಗಿ ನೋಡಿದರೆ, ಅವರು ನನಗಿಂತ ಸೀನಿಯರ್. ಅವರ ಕೆಲಸ ನನಗೆ ಬಹಳ ಇಷ್ಟ. ನನ್ನ ಗೋಧಿ ಬಣ್ಣ ಸಿನಿಮಾ ನೋಡಿ, ಇಷ್ಟ ಆಗಿ ಅವರಾಗಿಯೇ ಬಂದು ಮಾತಾಡಿದ್ದರು. ಸೀನಿಯರ್ ಆಗಿ ಬಂದು ವಿಶ್ ಮಾಡಿದ್ರಲ್ಲ. ಎಷ್ಟು ಒಳ್ಳೆ ಗುಣ ಅಂತ ಅಂದ್ಕೊಂಡಿದ್ದೆ. ಈಕೆ ನಿಜವಾಗಲೂ ನನ್ನ ಇಷ್ಟದ ನಟಿ. ನಾನು ನೋಡಿರುವ ಸಿನಿಮಾಗಳದ್ದು ಲಿಸ್ಟ್ ಬೇಕಾದರೂ ಕೊಡುತ್ತೇನೆ. ಆನಂತರ ಸ್ನೇಹ, ಸ್ನೇಹ ಪ್ರೀತಿಯಾಗಿ ಹೇಗೆ ಹೇಳೋದು ಅಂತ ಪರದಾಡುತ್ತಿದ್ದೆವು. ನಂತ್ರ ಆ ಒಂದು ದಿನ ಬಂತು." ಎನ್ನುತ್ತಾರೆ ವಸಿಷ್ಠ ಸಿಂಹ.

'ನಾಯಿ ಕೊಟ್ಟು ಪಟಾಯಿಸಿಕೊಂಡಿಲ್ಲ'
"ಮನೆಯವರು ಬರ್ತ್‌ಡೇಗೆ ಒಂದು ವಿಡಿಯೋ ಹಾಕಿದ್ದರು. ಆಡಿಯೋ ನೋಡಿ ಹಲವಾರು ಜನ ನಾಯಿಮರಿ ಕೊಟ್ಟು ಪಟಾಯಿಸಿಕೊಂಡೆ ಅಂದ್ರು. ಯಾವ ಬಾಳು ಗುರು ಇಷ್ಟೊಂದು ಕಷ್ಟಪಟ್ಟಿದ್ದೀನಿ. ನಾಯಿ ಮರಿ ಕೊಟ್ಟು ಪಟಾಯಿಸಿಕೊಂಡು ಬಿಟ್ಟ ಅಂದ್ರಲ್ಲ ಅಂತ ಅನಿಸಿತ್ತು. ಆ ಊಹೆ ಸಹಜ. ಯಾರು ಏನು ಬೇಕಾದ್ರೂ ಅಂದ್ಕೊಳ್ಳಬಹುದು. ಅಂದ್ಹಾಗೆ ಪ್ರೀತಿ ಆದ್ಮೇಲೆ ನಾಯಿಮರಿ ಕೊಟ್ಟೆ. ಆ ಸಮಯದಲ್ಲಿ ಇಬ್ಬರು ಪ್ರೀತಿಸುತ್ತಿದ್ದೆವು. ಪ್ರೀತಿಯಲ್ಲಿ ಇದ್ವಿ." ಅಂತಾರೆ ವಸಿಷ್ಠ ಸಿಂಹ.

'ನಾಯಿ ಮರಿ ಗಿಫ್ಟ್ ಮಾಡಿದ್ದೆ'
"ಅವರ ಮನೆಯಲ್ಲಿ ಲಕ್ಕಿ ಅಂತ ಒಂದು ನಾಯಿ ಮರಿ ಇತ್ತು. ಕ್ಯಾನ್ಸರ್ ಬಂದು ಹೋಗಿಬಿಡ್ತು. ಅವರು ದು:ಖದಲ್ಲಿ ಇದ್ದಿದ್ದನ್ನು ಹತ್ತಿರದಿಂದ ನೋಡುತ್ತಿದ್ದೆ. ಅವರಿಗೆ ನಾಯಿ ಮರಿ ಕಂಡರೆ ತುಂಬಾನೇ ಇಷ್ಟ. ಲಕ್ಕಿನ ಮರಿಬೇಕು ಅಂದ್ರೆ, ಇನ್ನೊಂದು ಏನೋ ಬಂದ್ರೆ ಸರಿ ಹೋಗುತ್ತೇನೋ ಅಂತ ನಾಯಿ ಮರಿ ಕ್ರಿಸ್ಟಲ್ ಅನ್ನು ಉಡುಗೊರೆಯಾಗಿ ಕೊಟ್ಟೆ. ಗಿಫ್ಟ್ ಕೊಟ್ಟಾಗ ಅದರ ಎದೆಮೇಲೆ ಹಾರ್ಟ್ ಶೇಪ್ ಇದೆ ಅಂತ ಗೊತ್ತಿರಲಿಲ್ಲ. ಇನ್ನೊಂದು ಮರಿ ಹ್ಯಾಪಿ ಅಂತಿದೆ. ಅದರದ್ದೂ ಇದರದ್ದೂ ಡಿಸೆಂಬರ್ 6 ಒಂದೇ ದಿನ ಬರ್ತ್‌ಡೇ. ಆಗ ಪ್ರೀತಿಗೆ ಕನ್ನಡಿ ಅಂತ ಹೇಳಿದ್ರು. ಆಗ ಅನಾರ್ಥವಾಗಿ ಅಪಾರ್ಥವಾಗಿ ಏನೇನೋ ಆಗಿತ್ತು." ವಸಿಷ್ಠ ಸಿಂಹ ಹೇಳಿದ್ದಾರೆ.

'ನನ್ನ ತಾಯಿ ಜಾಗಕ್ಕೆ ಇನ್ನೊಬ್ಬರು ಬಂದಿದ್ದಾರೆ'
"ನಾವು ಮದುವೆ ಆಗುತ್ತಿರೋದು ಗಣಪತಿ ಸಚ್ಚಿದಾನಂದ ಆಶ್ರಮ. ನನ್ನ ಊರು ಮೈಸೂರು. ನನಗೆ ಮೈಸೂರು ಅಂದ್ರೆ, ಒಲವು, ಪ್ರೀತಿ. ನಾನು ಬೆಳೆದಿದ್ದ ಊರು ಮೈಸೂರು. ಅಲ್ಲೇ ಮದುವೆ ಆಗಬೇಕು ಅಂತ ಅಂದ್ಕೊಂಡಿದ್ದೆ. ಎದುರುಗಡೆ ಚಾಮುಂಡಿ ತಾಯಿ ಬೆಟ್ಟ ಕಾಣಿಸುತ್ತೆ. ನನ್ನ ತಾಯಿ ಹೋದಾಗ ಚಾಮುಂಡಿತಾಯಿ ನೋಡುತ್ತಿದ್ದೆ. ಆ ಜಾಗಕ್ಕೆ ಇನ್ನೊಬ್ಬರು ಬಂದಿದ್ದಾರೆ. ನಾನು ಒಂಟಿಯಾಗಿ ಕೊರುಗುತ್ತಿದ್ದಾಗ, ಜೊತೆಯಾಗಿ ಇದ್ದವರು ಇವರು. ಈಗ ಮಡದಿಯಾಗಿ ಸ್ವೀಕರಿಸುತ್ತಿದ್ದೀನಿ." ಎಂದು ವಸಿಷ್ಠ ಸಿಂಹ ವಿಷಯ ಹಂಚಿಕೊಂಡಿದ್ದಾರೆ.